ಉಪಯೋಗಿಯಾಗು, ಎಲ್ಲರೂ ಉಪಯೋಗಿಸಿಕೊಳ್ಳುತ್ತಾರೆ. ಅಪ್ರಯೋಜಕನಾಗು, ಪ್ರೀತಿಸುವರು ಮಾತ್ರ ಉಳಿಯುತ್ತಾರೆ

ಉಪಯೋಗಿಯಾಗು, ಎಲ್ಲರೂ ಉಪಯೋಗಿಸಿಕೊಳ್ಳುತ್ತಾರೆ. ಅಪ್ರಯೋಜಕನಾಗು, ಪ್ರೀತಿಸುವರು ಮಾತ್ರ ಉಳಿಯುತ್ತಾರೆ

ಖ್ಯಾತ ಬುದ್ಧಿಸ್ಟ್ ಆಧ್ಯಾತ್ಮಿಕ ಗುರು ’ಓಶೊ’ರವರ ಒಂದು ಸಿದ್ಧಾಂತ ನನಗೆ ಬಹಳ ಪ್ರಿಯವಾದದ್ದು. ಇದು ನಾನು ಒಪ್ಪುತ್ತೇನೋ, ಬಿಡುತ್ತೇನೋ, ಒಂದು ಜೀವನ ಸತ್ಯವಾಗಿದೆ. ಕೆಲವು ವರ್ಶಗಳ ಹಿಂದೆ ನಾನೇ ಪ್ರಯಶಃ ಒಪ್ಪುತ್ತಿರಲಿಲ್ಲ. "ನೀನು ಯಾವಾಗ ಯಾವುದಾದರೂ ಕೆಲಸವನ್ನು ಪ್ರಯೋಜನವಿಲ್ಲದೆ ಮಾಡುತ್ತೇಯೋ, ಆಗ ನಿಜವಾಗಿಯೂ ನೀನು ನೀನಗಿರುವೆ" ಎಂದು ಓಶೊ ಹೇಳುತ್ತಾರೆ. "ಬರೀ ಉಪಯೋಗವಿರುವ ಕೆಲಸ ಮಾಡಿದರೆ, ಬದುಕಿದ್ದರೂ ಸತ್ತಂತೆ. ಜೀವನದಲ್ಲಿ ಯಾವ ಸ್ವಾರಸ್ಯವೂ ಇರುವುದಿಲ್ಲ. ನಿಜವಾಗಿಯೂ ಮೂರ್ಖರಿಗೆ "ಸಮಯ" ಒಂದೇ ಬಹಳ ಮುಖ್ಯ ಏಕೆಂದರೆ "ಸಮಯ ಎಂದರೆ ಹಣ". ಎಲ್ಲವನ್ನೂ ’ಹಣ’ದ ಮೇಲೆಯೇ ಅಳಿಯುವ ಈ ಜನರು ವಸ್ತುಗಳಂತೆ, ಆದ್ದರಿಂದ ಜನರನ್ನೂ ವಸ್ತುಗಳಂತೆ ಬಳಸುತ್ತಾರೆ. ಹಾಗೆ ಅಂತ, ಏನೂ ಮಾಡದೆ ಸುಮ್ಮನೆ ಕೂತಿರೋದು ಅಪ್ರಯೋಜಕನಾಗುವುದಕ್ಕೆ ಮೊದಲ ಹೆಜ್ಜೆಯೇ? ಹಹಃ ಅದೇ ’ಓಶೊ’ರವರ ಈ ನೀತಿಯ ಬಗ್ಗೆ ಬರೆಯುವುದೋ ಬೇಡವೋ ಎಂದು ನನಗೆ ಇದ್ದ ದೊಡ್ದ ಅಂಜಿಕೆ ಇದೇ ಕಾರಣಕ್ಕೆ. 

ನಾವು ದಿನನಿತ್ಯಜೀವನದಲ್ಲಿ ನೋಡಿಯೇ ಇರುತ್ತೇವೆ. ಕಾಲೇಜಿಗೇ ಬರದೇ ಇರುವವನು ಪಾಠ ಓದದಿದ್ದರು ಟಾಪ್ ಮಾರ್ಕ್ಸ್ ಗಳಿಸಿದರೆ, ಓದಿ ಓದಿ ಮರುಳಾದ ಕೂಚುಭಟ್ಟರು ’ಜಸ್ಟ್ ಪಾಸ್’ ಆಗುವುದು. ಕಛೇರಿಯಲ್ಲಿ ರಾಜಕೀಯ ಚೆನ್ನಾಗಿ ಅರಿತು, ಕೆಲಸ ತಿಳಿಯದಿದ್ದರೂ ಉನ್ನತ ಪದವಿಗಳು ಗಳಿಸಿ ಆರಾಮಾಗಿದ್ದರೆ, ಅತ್ಯಂತ ಶ್ರಮ ಪಟ್ಟು ಕೆಲಸ ಮಾಡುವವರು, ಕೆಲಸ ಬಲ್ಲವರಿಗೆ ಮತ್ತಷ್ಟು ಹೆಚ್ಚು ಕೆಲಸ ಬಹುಮಾನವಾಗಿ ಸಿಗುವುದು ನ್ಯಾಯವೇ ಎಂದು ಸಾಮನ್ಯವಾಗಿ ಒಂದಲ್ಲ ಒಂದು ಸಲ ಆದರೂ ಬೈದುಕೊಂಡಿರುತ್ತೇವೆ. ಇದನ್ನು ಪ್ರಮಾಣಿಸಿ ನೋಡುವವರು "ಸಮಾಜ ಜ್ಞಾನ ಇರುವುದು ಮುಖ್ಯ. ಓದು ಜೀವನ ನಡೆಸುವ ಸಮಾಜ ಜ್ಞಾನದಷ್ಟು ಮುಖ್ಯ ಅಲ್ಲ" ಎಂಬ ತರ್ಕದ ವಾದ ಮಂಡಿಸಬಹುದು. ಆದರೆ ಸಂತೋಷ, ನೆಮ್ಮದಿ ಎರಡೂ ಸಮಜಾದ ಕೀರ್ತಿ, ಹಣ, ಮನೆ, ಇತರ ವಸ್ತುಗಳಿಂದ ಸಿಗುವುದಾದರೆ, ಎಲ್ಲರೂ ಕೊಳ್ಳುತ್ತಿರಲಿಲ್ಲವೇ? ಪ್ರಯೋಜನ ಇರುವವರು ಸಮಾಜದ ದೃಷ್ಟಿಯಲ್ಲಿ ಒಬ್ಬರು ಅನೇಕ ಜನರನ್ನು ಸಂಪಾದಿಸಿದಂತೆ ಕಾಣಿಸಬಹುದು. ಆದರೆ ಅವರಿಗೂ ಒಳಗೇ ತಿಳಿದಿರುತ್ತೆ ಅವರಿಂದಿಗಿರುವ ಉಪಯೋಗಕ್ಕೆ ಜನ ಅವರನ್ನು ಬಳಸಿಕೊಳ್ಳಲು ಅವರೊಂದಿಗೆ ಇದ್ದಾರೆ. ಇನ್ನು ಅವರಿಂದ ಪ್ರಯೋಜನವಿಲ್ಲವೆಂದಾಗ ಅವರು ದೂರವಾಗುತ್ತಾರೆ ಎಂದು. ನಿಜವಾದ ಪ್ರೀತಿಯಿಂದ, ಹೃದಯದಿಂದ ಮಾಡುವ ಕೆಲಸಗಳೂ ಪ್ರಯೋಜಕವೆನ್ನಿಸಬಹುದು. ಉದಾಹರಣೆಗೆ ಯಾವತ್ತೋ ಇಷ್ಟವಾದ ತಿಂಡಿ ಮಾಡಿದಾಗ ತ್ತಾಯಿಗೆ ’ಧನ್ಯವಾದ’ ಹೇಳುವುದು, ಅಥವಾ ತಿಂಗಳಾಂಗಟ್ಟಲೆ ಮಾತನಾಡಿಸದ ಗುರುವಿಗೆ ಒಮ್ಮಿಂದೊಮ್ಮೆಲೆ ತಾವು ಮಾಡುತ್ತಿರುವುದು ಸರಿಯೇ, ತಪ್ಪೇ ಹೇಳಿ ಎಂದು ಸಂಕ್ಷಿಪ್ತವಾಗಿ ಕೇಳುವುದೋ ಹೀಗೆ ಕೆಲವು ಇವೆ. ಇವಕ್ಕೆ ಎರಡು ಕಡೆಯ ವಾದಗಳೂ ಇವೆ. ಪ್ರತಿ ದಿನ ಹೇಳಿದರೆ, ಅವರು ಮಾಡುವ ಕೆಲಸ, ಅಥವ ನಮ್ಮ ಜೀವನದಲ್ಲಿ ಅವರ ಬೆಲೆ ಕಡಿಮೆಯಾಗುತ್ತೆ ಅಂತ ಅಲ್ಲ, ಅಥವಾ ಹೇಳಲೇಬೇಕು, ಹೇಳಲೇಬಾರದು ಎಂದೂ ಅಲ್ಲ. ಆ ಸಂಬಂಧ ಏನನ್ನೂ ಅಪೇಕ್ಷಿಸದೆ ಪ್ರೀತಿಯದ್ದಾಗಿರುತ್ತೆ.

ಮನಸ್ಸು, ಹೃದಯದ ನದುವೆ ಘರ್ಷಣೆ ಆದಾಗ, ನೆಮ್ಮದಿ ಸಿಗುವ ದಾರಿಯಲ್ಲಿ ಕೊನೆಗೆ ಗೆಲ್ಲುವುದೇ ಹೃದಯ. ಅಪ್ರಯೋಜಕನಾಗಿ ಇಷ್ಟವಾದದ್ದು ಮಾಡುತ್ತಾ ಮಾಡುತ್ತಾ ಒಂದು ಘಟ್ಟ ತಲುಪುತ್ತೇವೆ. ಅದು ಮನೆಯಲ್ಲಿ ಹಾಡುವುದು ಇರಬಹುದು, ಹಾಳೆಯಲ್ಲಿ ಚಿತ್ರ ಬಿಡಿಸಿ ಎಸೆಯುವುದಿರಬಹುದು, ಕಸದಿಂದ ಯಾವುದೋ ವಸ್ತುಗಳನ್ನು ಮಾಡುವುದಿರಬಹುದು. ಕಾಸಿಗೆ ಮಾಡದೆ, ಕೀರ್ತಿಗೆ ಮಾಡದೆ, ಸಂತೋಷಕ್ಕಾಗಿ ಮಾಡಿ ಅಪ್ರಯೋಜಕರಾದರೂ ಅದು ನಿಜವಾಗಿ ಪ್ರೀತಿಸುವ ಜನರನ್ನು ಬಿಟ್ಟು ಉಪಯೋಗ ಹುಡುಕುವ ವ್ಯಕ್ತಿಗಳನ್ನೆಲ್ಲಾ ಮಂಗಮಾಯ ಮಾಡಿಬಿಡುತ್ತದ್ದೆ. ಯರೋ ಹೇಳಿದರು ಎಂದು ಮಾಡುವುದು ಬಿಟ್ಟು, ನಾವೇ ಅವರಿಗೆ ಹೇಳಿ ನಮ್ಮ ಇತಿ ಮಿತಿಗಳಲ್ಲಿ ಇಷ್ಟು ಮಾಡುತ್ತೇವೆ ಎಂದು ಪ್ರಯೋಜನವನ್ನು ನೆನೆಯದೆ ಇಷ್ಟ ಪಟ್ಟು ಕೆಲಸ ಮಾಡಿದಾಗಲೇ, ಅದರ ಪೂರ್ಣ ಪ್ರತಿಫಲ ದೊರಕುವುದು. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ, ನಮ್ಮನ್ನು ನಾವು ಅದರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಹಾಗಂತ, ಬರಿ ಸುಖ, ಒಳ್ಳೆಯದನ್ನು ಅರಿಯಬೆಕು, ಕೆಟ್ಟದ್ದನ್ನು ಮರೆಯಬೇಕೆಂದು ಅಲ್ಲ. ದುಖ, ಕೋಪ ಮುಂತಾದ ಹರಿಷಡ್ವರ್ಗಗಳು ಮಾನವರಿಗೆ ಮಾಮೂಲಿ. ಇದರಿಂದ ಓಡಿಹೊಗಲು ಬಯಸಿದರೆ ಅದು ಮೂರ್ಖತನವೇ ಹೌದು. ಅದೆ ದುಖವಾಗಲಿ, ನೋವಾಗಲಿ, ಎಲ್ಲಾ ಭಾವನೆಗಳನ್ನೂ ಪೂರ್ಣವಾಗಿ ಸವೆಯಬೇಕು. ಇಷ್ಟವಿಲ್ಲದ್ದಾಗ ಎಲ್ಲಾ ಸಂದರ್ಭಗಳಲ್ಲೂ ಹೇಳಲು ಸಾಧ್ಯವಾಗದೆ ಇರಬಹುದು. ಅದನ್ನು ವ್ಯಕ್ತಪಡಿಸುವ ರೀತಿ ತಿಳಿಯುವುದು ಒಂದು ಕಲೆ. ಆ ಕಲೆಯನ್ನು ತಿಳಿಯಲು, ಮೊದಲು ಆ ಭಾವನೆಯನ್ನು ಪೂರ್ಣವಾಗಿ ಅರಿಯಬೇಕು, ಅನುಭವಿಸಬೇಕು. ಯಾವ ವಿಷಯ ಆ ಭಾವನೆಯನ್ನು ಪ್ರೇರೇಪಿಸಿದ್ದು ಎಂದು ಅರಿತ ಕೂಡಲೆ ನಮ್ಮ ಮನಸ್ಸು ಜಾಣ. ತಿದ್ದುಕೊಳ್ಳುವುದು. 

Rating
No votes yet