ಉಯಿಲು
ಉಯಿಲು
ನಾ ಸತ್ತಾಗ ಪ್ರಿಯೆ, ನನಗಾಗಿ
ದುಃಖದ ರಾಗ ಎಳೆಯಬೇಡ
ಗುಲಾಬಿ ಹೂ ನೆಡದಿರು ಸಮಾಧಿಗೆ
ಅದರಲ್ಲಿ ಮುಳ್ಳು ಇರುತ್ತದೆ.
ನನ್ನ ಮೇಲೆ ಹಸಿರು ಹುಲ್ಲಾಗಿರು
ಇಷ್ಟವಿದ್ದರೆ ಹುಲ್ಲ ಮೇಲಿನ
ಹನಿಯ ಬಿಂದುವಾದರೂ ಆಗು
ಮನಸ್ಸಿನಲ್ಲಿ ಬಿಡುವಿದ್ದಲ್ಲಿ ಒಮ್ಮೆ ನನ್ನ ನೆನೆ
ಆದರೆ ನೆನೆದು ಒದ್ದೆಯಾಗಬೇಡ ಸದಾ
ನಿನ್ನ ಕನಸಾಗುವೆನು ನಾ
ನಿನಗೆ ಕನಸು ಕಾಣುವ ಅಭ್ಯಾಸವಿದ್ದಲ್ಲಿ,
ಎಲ್ಲೆಂದರಲ್ಲಿ,
ನನ್ನದೊಂದೇ ಪ್ರಾರ್ಥನೆ ನಿನ್ನಲ್ಲಿ
ಈ ಉಯಿಲಿನ ಬಗ್ಗೆ
ಹುಯಿಲೆಬ್ಬಿಸಬೇಡ ಹಗಲಿನಲ್ಲಿ......
ಶ್ರೀಚಂದ್ರ
Rating