ಉಳಿಸಿರೋ ಪರಿಸರ

ಉಳಿಸಿರೋ ಪರಿಸರ

ಉಳಿಸಿರೋ ಪರಿಸರ

ಉಳಿಸಿರೋ ಉಳಿಸಿರೋ
ಕಿರಿಯರಿಗೆ ಭೂಮಿಯ
ಮುಂದೆ ಹುಟ್ಟಿ ಬರುವ ಜನತೆ
ನಿಮ್ಮ ಶಫಿಸಿಕೊಳ್ಳದಂತೆ ||ಪ||

ದೈತ್ಯರಾಗಬೇಡಿ ಕೊಲ್ಲಬೇಡಿ ಜೀವ ಸಂಕುಲ
ಪ್ರೀತಿಯಿಂದ ಸಾಮರಸ್ಯ ಬೇಡಿ ಉಳಿಸಿ ಮನುಕುಲ |
ನೀತಿಬೇಕು ನ್ಯಾಯಬೇಕು ಶಾಂತಿಬೇಕು ಎಲ್ಲರ
ರೀತಿಯಲ್ಲಿ ನಡತೆಯಲ್ಲಿ ಇರಿಸಿಕೊಳಲಿ ಎಚ್ಚರ ||೧||
ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯ
ಮುಂದೆ ಹುಟ್ಟಿ ಬರುವ ಜನತೆ ನಿಮ್ಮ ಶಫಿಸಿಕೊಳ್ಳದಂತೆ ||ಪ||

ಊರು ಸ್ವಚ್ಚವಾಗಬೇಕು ಹರಡದಂತೆ ರೋಗವ
ಕೇರಿಯಲ್ಲಿ ಒಂದುಗೂಡಿ ಕೊಳೆಯ ನಾಶಗೊಳಿಸುವ |
ಕರಗದಂಥ ಕಸವ ಚೆಲ್ಲಿ ನೆಲವ ದೋಷಗೊಳಿಸದೆ
ಧರೆಯನುಳಿಸಿ ಹಸಿರು ನಳಿಸಿ ಬೆಳಿಸಿ ಒಳ್ಳೆ ಸಿರಿಬೆಳೆ    ||೨||
ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯ
ಮುಂದೆ ಹುಟ್ಟಿ ಬರುವ ಜನತೆ ನಿಮ್ಮ ಶಫಿಸಿಕೊಳ್ಳದಂತೆ ||ಪ||

ನಗರ ನಗರ ತ್ಯಾಜ್ಯವೆಲ್ಲ ಪಂಚಭೂತ ಯಜ್ಞವೇ
ಜಗದ ನಾಗರೀಕ ಮನುಜ ಲೋಕಕಿದು ಸುವಜ್ಞವೇ |
ಮಣ್ಣು ನೀರು ಗಾಳಿ ಬೆಂಕಿ ಆಕಾಶದ ತತ್ವವು
ಸಣ್ಣದಲ್ಲ ಕಣ್ಣ ತೆರೆದು ನೋಡಬೇಕು ನಿತ್ಯವು ||೩||
ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯ
ಮುಂದೆ ಹುಟ್ಟಿ ಬರುವ ಜನತೆ ನಿಮ್ಮ ಶಫಿಸಿಕೊಳ್ಳದಂತೆ ||ಪ||

ಆಗಬೇಕು ಘೋಷವಾಕ್ಯ 'ಉಳಿಯಬೇಕು ಪರಿಸರ'
ಸಾಗಲೆಮ್ಮ ದೇಶ ಮೊದಲು ಉಳಿಸಲೆಂದು ಸರಸರ |
ದೇಶದಲ್ಲಿ ನಾವು ಮೊದಲು ಕನ್ನಡಿಗರಿಗವಸರ
ಕನ್ನಡಿಗರ ಸಾಲಿನಲ್ಲಿ ನಮ್ಮದಿರಲಿ ಹೊಸತರ ||೪||
ಉಳಿಸಿರೋ ಉಳಿಸಿರೋ ಕಿರಿಯರಿಗೆ ಭೂಮಿಯ
ಮುಂದೆ ಹುಟ್ಟಿ ಬರುವ ಜನತೆ ನಿಮ್ಮ ಶಫಿಸಿಕೊಳ್ಳದಂತೆ ||ಪ||

                                                      - ಸದಾನಂದ

Rating
No votes yet

Comments