ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೪

ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೪

  • ನನ್ನ ಮಡದಿ ತವರಿಗೆ ಹೋಗಿದ್ದಳು. ಆಗ ನನ್ನ ಹಿಂದಿನೂರಿನ ಪರಿಚಯಸ್ತರೊಬ್ಬರು. ತಮ್ಮ ಸಂಗಾತಿಯನ್ನು ಕರೆದುಕೊಂಡು ಬಂದಿದ್ದರು. ಅವರು ಊಟದ ಬುತ್ತಿಯನ್ನು ತಂದಿದ್ದು ನನಗೂ ಅದರಲ್ಲೇ ಊಟಮಾಡಲು ಹೇಳಿದರು. ಒಟ್ಟಿಗೆ ಊಟಕ್ಕೆ ಕುಳಿತಿದ್ದೆವು. ಮೊದಲನೆಯ ರೌಂಡ್ ವಿಶೇಷವೆನಿಸಲಿಲ್ಲ. ಮುಂದೆ ನಮ್ಮೊಡನೆ ಊಟಕ್ಕೆ ಕುಳಿತಾಕೆಯು ಬಲಗ್ಸೈಯಲ್ಲಿ ಬಡಿಸ ತೊಡಗಿದಳು!. ನಾನು ಸಹಜವಾಗಿ ಉಂಡೆ!!. ಯಾಕೆಂದರೆ ಎಂಜಲು ಕೈಯಲ್ಲಿ ಬಡಿಸುವಾಗ ಅವರಲ್ಯಾವ ದುರುದ್ದೇಷವೂ ಇರಲಿಲ್ಲ. ಮುಕ್ಯವಾಗಿ, ಅವರು ನನ್ನನ್ನು ನೆನಪುಟ್ಟು ಹುಡಿಕಿಕೊಂಡು ನಮ್ಮ ಮನೆಗೆ ಬಂದಿದ್ದವರು. *** ನನ್ನ ಹಿರಿಯ ಅಧಿಕಾರಿಗಳು ತಮಗೆ ಇದೇರೀತಿ ಆದ ಅನುಭವವನ್ನು, ಒಮ್ಮೆ ಹೇಳಿದರು ನನಗೆ ಅನುಭವ ಮಾಡಿಸಿದಾಕೆ ಒಬ್ಬ ಆರೋಗ್ಯ ಕಾರ್ಯಕರ್ತೆ! ಹಿರಿಯ ಅಧಿಕಾರಿಗಳಿಗೆ ಅನುಭವವನ್ನು ಮಾಡಿಸಿದವಳು ಆರೋಗ್ಯಾಧಿಕಾರಿ.!! ( ಎಮ್ ಬಿ ಬಿ ಸ್ ವೈದ್ಯ ದಂಪತಿಗಳು)

  • ಹಾಸನ ಜಿಲ್ಲೆಯ ಅರಸಿಕೆರೆಯಲ್ಲಿ. ನಾವಿದ್ದೆವು. ಹಲವು ಕಾಲದನಂತರ ಯಾವುದೋಕಾರಣಕ್ಕೆ ಅರಸಿಕೆರೆಗೆ ಹೋದಾಗ ಅಲ್ಲಿಯ ಹಳೆ ಪರಿಚಯದವರೊಬ್ಬರ ಮನೆಗೆ ಹೋಗಿದ್ದೆವು. ಲೋಕಾರೂಡಿ ಮಾತನಾಡುತ್ತಾ ಸಹಜವಾಗಿ ನಿಮ್ಮ ಮಗ ಈಗ ಎಲ್ಲಿ ಕೆಲಸದಲ್ಲಿ ಇದ್ದಾನೆ ಎಂದಿದ್ದೇ ತಡ, ಅವರು ಮೈಮೇಲೆ ಬಂದವರಂತೆ, ಮಾತನಾಡತೊಡಗಿದರು. “ ಆ ಸೂಳೆ ಮಗ ಇದೇ ಊರಿಗೇ ಟ್ರಾನ್ಸಫರ್ ಆಗಿ ಬಂದಿದ್ದಾನೆ. ಆ ಹಲ್ಕಟ್ ರಂಡೆ ಮಾತು ಕೇಳಿ ಇಲ್ಲೇ ಬೇರೇ ಮನೆ ಮಾಡ್ಕೊಂಡಿದ್ದಾನೆ” ಮುಂತಾಗಿ ಸಿಟ್ಟಿನಿಂದ, ನೋವಿನಿಂದ ಹೇಳತೊಡಗಿದರು.. ವಿಷಯ ಏನೆಂದರೆ - ತಮ್ಮ ಮನೆ ಆಹಾರವನ್ನ್ನು ಬಿಟ್ಟು ಅವರು ತಮ್ಮದಲ್ಲದ ಬೇರೆ ಆಹಾರ ಪದ್ಧತಿಯನ್ನು ಅವಲಂಬಿಸಿದ್ದಾರೆ.. ಸೊಸೆ ಸಿದ್ಧಿ ಸಮಾಧಿ ಯೋಗ' ದ ಅನುಯಾಯಿಯಾಗಿ. ಉಳ್ಳಾಗಡ್ಡೆ ಬೆಳ್ಲುಳ್ಳಿ ಇತ್ಯಾದಿಗಳನ್ನೂ ತಿನ್ನುವುದನ್ನು ಬಿಟ್ಟಿದ್ದಾಳೆ. ಅವಳು ಹಾಳಾಗಿ ಹೋಗಲಿ ತನ್ನ ಮೊಮ್ಮಕ್ಕಳಿಗೆ ತಿನ್ನಗೊಡುವುದಿಲ್ಲ, ಎಂಬುದು ಅಜ್ಜನ ಸಂಕಟ. ಅಜ್ಜನ ಮನೆಗೆ ಬಂದಾಗ ಇವರು ತಿನ್ನಿಸಿ ಬಿಡಬಹುದೆಂದು ಇಲ್ಲಿಗೂ‌ ಕಳುಹಿಸಿ ಕೊಡುವುದಿಲ್ಲ. "ಹೀಗೆ ಮಾಡಿದರೆ ಹೇಗೆ? ಆ ಪುಳಿಚಾರ ಅನ್ನದಲ್ಲಿ ಏನಿರುತ್ತದೆರೀ?” ಎನ್ದು ಹಂದಿ ಮಾಂಸದ  ಸೊಗಸಿನ ಕುರಿತು, ನನ್ನನ್ನೇ ಕೇಳಿದರು. ಮೊಮ್ಮಕ್ಕಳಿಗೆ ಹಂದೀ ಮಾಂಸ ಸಿಗುವುದಿಲ್ಲ ಎಂದು ಕೊರಗುವ ಆ ಅಜ್ಜನಿಗೆ ನಾನು ಬ್ರಾಹ್ಮಣ ಎನ್ನುವುದೂ ಆಗಳಿಗೆಯಲ್ಲಿ ಗಮನಕ್ಕೆ ಇರಲಿಲ್ಲ.!

  • ಇದು ಅರಸೀಕೆರೆಯಲ್ಲಿ ಇರುವಾಗಿನ ಕಥೆ. ನಮ್ಮ ಮನೆಗೆ ಮಿತ್ರದಂಪತಿಗಳು ಬರುವವರಿದ್ದರು. ನನ್ನ ಹೆಂಡತಿ ಖುಷಿ ಖುಷಿಯಾಗಿ ಅಡಿಗೆ ಮಾಡಿದ್ದಳು. ಊರಿನಿಂದ ಬರುವಾಗ ತಂದ ಗಮ್ಮನ ಇಂಗನ್ನು ಸಾರಿಗೆ ಒಗ್ಗರಣೆ ಹಾಕಿದ್ದಾಳು. ವಾಸನೆಗೇ ಬಾಯಿ ನೀರೂರುವಂತಿತ್ತು! ಆದರೆ ಆ ಅತಿಧಿ ಸಾದ್ವಿ ಊಟ ಮಾಡಲೇ ಇಲ್ಲ. ಥೂ! ಇಂಗಿನ ವಾಸನೆ ಎಂದು ವಾಕರಿಸಿದಳು.!! (ಇದೇ ಮಾತನ್ನು ಬ್ರಾಹ್ಮಣರು ಬೆಳ್ಳುಳ್ಳಿಗೆ ಹೇಳುತ್ತಾರೆ. )

  • ಒಂದು ಉದ್ದರಣೆ ನೀರನ್ನು ಅಂಗೈಯಲ್ಲಿ ಹಾಕಿಕೊಂಡು “ಅಮ್ರುತೋ ಪಿದಾನಮಸಿ ಸ್ವಾಹಾ” ಎಂದು ಕುಡಿದರೆ ಅಲ್ಲಿಗೆ ಬ್ರಾಹ್ಮಣರ ಊಟ ಮುಗಿಯುತ್ತದೆ. ಅಥವಾ ಅನಿವಾರ್ಯವಾಗಿ ಮಧ್ಯದಲ್ಲೇ ಎದ್ದರೆ ಅವನ ಆ ಹೊತ್ತಿನ ಊಟ ಅಲ್ಲಿಗೇ ಮುಗಿದಂತೆಯೇ. ಉತ್ತರ ಕರ್ನಾಟಕದ ಬ್ರಾಹ್ಮಣೇತರರು ಊಟದ ಮಧ್ಯೆ ನೀರನ್ನು ಕುಡಿಯುವುದ್ದಿಲ್ಲ. ಉಂಡು ಕೈತೊಳೆದು ಗಟ ಗಟ ಎಂದು ಇಡೀ ತಂಬಿಗೆ ನೀರನ್ನು ಕುಡಿದುಬಿಡುತ್ತಾರೆ. ಹೀಗಾಗಿ ಅವರ ಪಂಕ್ತಿಯಲ್ಲಿ ನೀರಿನ ಲೋಟ ಇರುವುದಿಲ್ಲ.

    ಒಮ್ಮೆ ಒಂದೂರಿನ ಒಂದು ಮನೆಯಲ್ಲಿ ಏನು ಕಾರಣವೋ ಗೊತ್ತಿಲ್ಲ. ಹೊಟ್ಟೆ ತುಂಬ ಬಡಿಸಲೇ ಇಲ್ಲ. ನನ್ನ ಜೊತೆಗಿದ್ದ ಶಿಕ್ಷಕರೊಬ್ಬರು ನನಗೆ ಸಲಹೆ ಕೊಟ್ಟರು, 'ನೀರು ಕುಡಿಯ ಬೇಡಿರಿ. ಶಾಲೆಗೆ ಬರುವಾಗ ಬುತ್ತಿ ತಂದಿದ್ದೇನೆ. ಅಲ್ಲೇ ಉಂಡು ನೀರು ಕುಡಿಯೋಣ'. ಅವರ ನಂಬಿಗೆಯಂತೆ ಎದ್ದು ಹೋಗುವುದು, ಊಟದ ಮುಕ್ಟಾಯವಲ್ಲ. ನೀರು ಕುಡಿದರೆ ಆ ಹೊತ್ತಿನ ಊಟ ಮುಗಿದಂತೆ.

  • ಬಾಳೆ ಎಲೆಯನ್ನು ಕುಡಿ ಎಡಕ್ಕೆ ಬರುವಾಹಾಗೇ ಇಡಬೇಕು. ಬೆಂಗಳೂರಿನ ಒಂದು ಬ್ರಾಹ್ಮಣರ ಮನೆಯ ಊಟದಲ್ ಲಿ, ಒಬ್ಬ ಬಲಕ್ಕೆ ಕುಡಿ ಮಾಡಿ ಇಡುತ್ತಿದ್ದ. ಅವನಿಗೆ ಎಡಕ್ಕೆ ಕುಡಿ ಬರುವಂತೆ ತಿಳಿಸಿದೆ. ಎಡಕ್ಕೆ ಕುಡಿಮಾಡುವುದೇ ಸರಿ ಎಂಬ ನನ್ನ ಭಾವನಗೂ ಒಮ್ಮೆ, ಧಕ್ಕೆ ಬಂದಿತು..ನನ್ನ ಪಕ್ಕದಲ್ಲಿ ಕುಳಿತಾತ ಎಲೆ ಇಟ್ಟ ಪದ್ದತಿ ಸರಿ ಇಲ್ಲ ಎಂದು ನನ್ನ ಗಮನಸೆಳೆದ. ಪಂಕ್ತಿಯನ್ನು ಪರಿಶೇಲಿಸಿದಾಗ ಎಲ್ಲವೂ ಎಡಕ್ಕೆ ಕುಡಿಯಾಗೇ ಇತ್ತು. ಅವನ ಆಚಾರದ ಪ್ರಕಾರ ಕುಡುಯು ಮುಂದೆ ಬರಬೇಕು. ಅವನು ತನ್ನ ಪದ್ದತಿಯಂತೆ ಕುಡಿಯನ್ನು ಮುಂದೆಮಾಡಿಕೊಂಡೇ ಊಟ ಮುಗಿಸಿದ್ದ. ದೇವರಿಗೆ ಎಡೆ ಇಡುವುದು ಮುಂತಾದ ಸಮಯದಲ್ಲಿ ಹೀಗೆ ಎಲೆಯ ಕುಡಿಯನ್ನು ಮುಂದೆ ಮಾಡುವುದಿದೆ.

  • ಸಾಧಾರಣವಾಗಿ ಮದು ಮಕ್ಕಳಿಗೆ ಊಟಬಡಿಸುವಾಗ ರಂಗೋಲಿ ಹಾಕುವುದಿದೆ. ಹರಿಹರ ಭಾಗದಲ್ಲಿ ಇಡೀ ಪಂಕ್ತಿಗೇ ರಂಗೋಲಿ ಹಾಕುತ್ತಾರೆ. ಈ‌ಭಾಗದ ಜನರಿಗೆ ಊಟವಾಗಲೀ ಉಪ್ಪಿಟ್ಟಾಗಲಿ ಚಟ್ನೆಪುಡಿ ಅವಸ್ಯವಾಗಿ ಬಡಿಸಲೇ ಬೇಕು. ಮಕ್ಕಳು ಬೋರ್ನವಿಟಾ ಕುಡಿಯುವುದಿದ್ದರೂ ಚಟ್ನಿಪುಡಿ ಬೇಕೇ ಬೇಕು!!

  • "ಊಟಕ್ಕೆ ಬಾಡು ಇದ್ದರೇ ಸೊಗಸು.” ಈ ಮಾತನ್ನು, ಉತ್ತರ ಕರ್ನಾಟಕದ ಒಕ್ಕಲಿಗನೂ ಹೇಳುತ್ತಾನೆ. ದಕ್ಷಿಣ ಕರ್ನಾಟಕದ ಒಕ್ಕಲಿಗನೂ ಹೇಳುತ್ತಾನೆ. ಆದರೆ ನೆನಪಿರಲಿ ದಕ್ಷಿಣ ಕರ್ನಾಟಕದಲ್ಲಿ ಬಾಡು ಎನ್ದರೆ ಮಾಂಸದ ಅಡಿಗೆ. ಉತ್ತರ ಕರ್ನಾಟಕದಲ್ಲಿ ತರಕಾರಿಗೆ ಬಾಡು ಎನ್ನುತಾರೆ. ರೊಟ್ಟಿ ಇತ್ಯಾದಿಗಳನಡುವೆ ಬಾಯಿ ಆಡಿಸಿಕೊಳ್ಳಲು ಉಪಯೋಗಿಸಸುವ ಮೂಲಂಗಿ ಗಜ್ಜರಿ ಇತ್ಯಾದಿಗಳು ಬಾಯಾಡು= ಬಾಡು. ಉತ್ತರ ಕರ್ನಾಟಕದ ಒಕ್ಕಲಿಗರು ಶುದ್ಧ ಸಸ್ಯಾಹಾರಿಗಳು. ದಕ್ಷಿಣ ಕರ್ನಾಟಕದ ಒಕ್ಕಲಿಗರು ಮಾಂಸಾಹಾರಿಗಳು

  • ದಕ್ಷಿಣ ಭಾಗವನ್ನು ಕಂಡು ಬಂದ ರೊಟ್ಟಿ ಉಂಣ್ಣುವ ಜನರ ಬಾಯಲ್ಲಿ ದಕ್ಷಿಣದ ಜನರ ಊಟದ ಬಗ್ಗೆ ಟಿಪ್ಪಣೆಗಳು ಹೀಗಿವೆ.--- 'ಬೆಕ್ಕು ಹಾರಬಾರದು' ಅಷ್ಟು ಎತ್ತರ ಅನ್ನದ ರಾಸಿ ಹಾಕಿಕೊಳ್ಳುತ್ತಾರಿ. ಮಧ್ಯದಲ್ಲಿ ಒಂದು ಬಾವಿ ತೋಡಿಕಳ್ಳುತ್ತಾರೆ. ಅದರಲ್ಲಿ ಸಾಂಬಾರ ಸುರಿದಿಕೊಂಡು ಸರಾಬರಾ ಸುರಿಯುತ್ತಾರೆ.. ಅನ್ನವನ್ನು ಮುಷ್ಟಿಕಟ್ಟಿ .ಕಿವಚುತ್ತಾರೆ. ಬೆರಳ ಸಂಧಿಯಲ್ಲಿ ಗಿಜಿಗಿಜಿ ಹರಿಯುತ್ತದೆ.

    ಇನ್ನೊಬ್ಬನ ಪದ್ದತಿಯೇ ಬೇರೆ --ಅನ್ನವನ್ನು , ಕ್ರಿಕೆಟ್ ಬಾಲ್ ನ ಆಕಾರದಲ್ಲಿ ಕಟ್ಟಿಕೊಂಡು ಬಾಯಿಗೆ ತುರುಕುತ್ತಾರೆ.

    ಹೀಗೆ ಅನ್ನವನ್ನು ಸರಾಬರಾ ಸುರಿಯುವವನೂ ಕ್ರಿಕೆಟ್ ಬಾಲ್ ತುರುಕುವವನೂ ಒಬ್ಬರನ್ನು ಒಬ್ಬರು ದೂಷಿಸುತ್ತಾ ಊಟಮಾಡಿದ ಪ್ರಸಂಗವೊಂದನ್ನು ಮಿತ್ರರೊಬ್ಬರು ವರ್ಣಿಸಿದರು.

    ಉತ್ತರ ಕರ್ನಾಟಕದ ಬಹಳ ಜನರು ಊಟಮಾಡಿದಮೇಲೂ ಅಂಗೈಗೆ ಏನೂ ಮೆತ್ತದ ರೀತಿಯಲ್ಲಿ ಬೆರಳ ತುದಿಯಲ್ಲೆ ಊಟ ಮುಗಿಸುತ್ತಾರೆ.

Rating
Average: 5 (1 vote)

Comments