ಎಂದೆಂದಿಗು ನೀ ಕನ್ನಡವಾಗಿರು
ಎಂದೆಂದಿಗೂ ನೀ ಕನ್ನಡವಾಗಿರು ,
ಉದ್ಯಾನ ನಗರಿ, ಸಿಲಿಕಾನ್ ಸಿಟಿ ಎನ್ನಿಸಿ ಕೊಳ್ಳುವ ಬೆಂಗಳೂರು ಮಹಾನಗರದಲ್ಲಿ ನ ವೈಟ್ಫೀಲ್ಡ್ ಸಾಫ್ಟ್ವೇರ್ ಜನರ ಆಗರ , ಇಂತ ಸ್ಥಳದಲ್ಲಿರುವುದು ನಾವು ವಾಸಿಸುವ ಸಾಯಿ ಪ್ಯಾರಾಗಾನ್ ಮಿಡೊಸ್ ಅಪಾರ್ಟ್ಮೆಂಟ್. ಇಲ್ಲಿ ಸಾಮಾನ್ಯವಾಗಿ ವಾಸಿಸುವ ಜನರೆಲ್ಲಾ ಮಾತನಾಡುವುದು ಆಂಗ್ಲಭಾಷೆ . ನಾವುಗಳು ಇದನ್ನು ಕೇಳಿ ,ಮಾತನಾಡಿ ಸಾಕಾಗಿದ್ದೆವು . ಆಗ ಆರಂಭವಾಯಿತು . ನಮ್ಮ ಮೂರು ಜನರ ತಂಡ . ಜಯಶೀಲ ,ಶಾಲಿನಿ ನಾಡಿಗ್ , ಗೀತಾ ಹೆಗಡೆ ಎಲ್ಲರೂ ಸೇರಿ ಸೃಜನಶೀಲ ಕನ್ನಡಿಗರು ಎಂದು ನಾಮಕರಣ ಮಾಡಿದ ತಂಡ ಪ್ರಾರಂಭಿಸಿದೆವು . ಕನ್ನಡ ರಾಜ್ಯೋತ್ಸವಕ್ಕಾಗಿ ಹೊಸ ಯೋಚನೆ ಮಾಡಿದೆವು. ನಮ್ಮ ಅಪಾರ್ಟ್ಮೆಂಟ್ನಲ್ಲಿರುವ ವಿವಿಧ ರಾಜ್ಯದ ಜನರಿಗೆ , ನಮ್ಮ ರಾಜ್ಯದ ಬಗ್ಗೆ ತಿಳಿಸಿಕೊಡೋಣವೆಂದು ಕೊಂಡು . ಕನ್ನಡರಾಜ್ಯದ ಸಕಲ ಮಾಹಿತಿಗಳನ್ನು ಕಲೆಹಾಕಲು ಪ್ರಾರಂಭಿಸಿದವು . ಕನ್ನಡದ ವಿವಿದ ಪತ್ರಿಕೆಗಳಿಂದ ಹಾಗೂ ದಕ್ಷಿಣ ಭಾರತದ ಪ್ರವಾಸಿ ಪುಸ್ತಕಗಳಲ್ಲಿರುವ ಮಾಹಿತಿಗಳನ್ನು ಸಂಗ್ರಹಿಸಿದೆವು ಅಲ್ಲದೆ ಚಿತ್ರಗಳನ್ನು ಸಂಗ್ರಹಿಸಿದೆವು .
ತೊಂಬತ್ತು ವಿವಿಧ ಪುಟಗಳನ್ನು ತಯಾರಿಸಿದವು . ಗಣೇಶನಿಗೆ ವಂದಿಸುವುದರಿಂದ ಪ್ರಾರಂಭವಾಗಿ ,ಕರ್ನಾಟಕ ರಾಜ್ಯದ ಬಗ್ಗೆ ಸಂಕ್ಷಿಪ್ತ ಮಾಹಿತಿಯ ಪುಟದ ನಂತರ ನಾಡಿನ ವಿವಿದ ಹಿಂದೂ, ಜೈನ, ಮುಸ್ಲಿಂ, ಕ್ರಿಸ್ತ, ದೇವಾಲಯಗಳ ಚಿತ್ರಣವನ್ನು ,ಅದಿ ಶಂಕರಾಚಾರ್ಯ, ಮದ್ವಾಚಾರ್ಯರು, ಬಸವಣ್ಣ ಹೀಗೆ ಕರುನಾಡಿನಲ್ಲಿ ಧರ್ಮಪ್ರಚಾರ ಮಾಡಿದ ಗುರುಗಳ ಸಮಗ್ರ ಚಿತ್ರಣ ,ಗಂಧದ ಬೀಡಿನಲ್ಲಿ ಆಳಿದ ರಾಜರುಗಳು ಹಾಗೂ ಅವರು ನಿರ್ಮಾಣಮಾಡಿದ ವಿವಿಧ ಗುಡಿಗುಂಡಾರಗಳ ಬಗೆಗಿನ ಪುಟಗಳು . ಈ ರಾಜ್ಯದಲ್ಲಿರುವ ವಿವಿಧ ಸಸ್ಯಗಳು,ಪ್ರಾಣಿಗಳು, ಪಕ್ಷಿಗಳು,ಅಭಯಾರಣ್ಯಗಳು,ಸಮುದ್ರಗಳು,ಪರ್ವತಗಳು,ಜಲಪಾತಗಳು, ಅಣೆಕಟ್ಟುಗಳ ಬಗ್ಗೆ ಮಾಹಿತಿಗಳು ಹಾಗೂ ಕರ್ನಾಟಕದಲ್ಲಿನ ವಾಣಿಜ್ಯ,ಉದ್ಯಮ,ಕೈಗಾರಿಕೆ ಇವುಗಳ ಬಗೆಗಿನ ಸಂಗ್ರಹ .ಕಲೆಗಳಿಗೇ ಹೆಸರಾದ ಕರ್ನಾಟಕದ ಹಲವು ಕರಕುಶಲ ಕಲೆಗಳಾದ ಬಿದರಿ,ಮರದ ಕೆತ್ತನೆ , ಲೋಹದ ಮೂರ್ತಿ ತಯಾರಿಕೆ ,ಶಿಲ್ಪಕಲೆ,ಚನ್ನಪಟ್ಟಣ ಗೊಂಬೆ , ಮೈಸೂರು ರೇಷ್ಮೆ ಸೀರೆ ಹಾಗೂ ಮೈಸೂರು ಗಂಧದ ಸಾಬೂನು ತಯಾರಿಕೆ ಮೈಸೂರು ಚಿತ್ರಕಲೆ,ಮಲೆನಾಡು ಹಸೆ ,ಬತ್ತದ ತೋರಣ ಹಾಗೂ ಹತ್ತಿ ಕೈ ಮಗ್ಗ ಸೀರೆ ತಯಾರಿಗಳ ಹಲವು ಕಲೆಗಳ ಸಂಕ್ಷಿಪ್ತ ಮಾಹಿತಿಗಳ ಬಗ್ಗೆ ಅಷ್ಟೇ ಅಲ್ಲದೆ ಕನ್ನಡ ಸಾಹಿತ್ಯದ ಸಂಕ್ಷಿಪ್ತ ಇತಿಹಾಸ , ಆದುನಿಕ ಬರಹಗಾರರು ,ಅಲ್ಲದೇ ಜ್ಞ್ಯಾನಪೀಠ ಪ್ರಶಸ್ತಿ ಪಡೆದ ಕವಿಗಳ ಚಿತ್ರಣ ಹಾಗೂ ಸಂಕ್ಷಿಪ್ತ ವಿವರಣೆಯನ್ನು ಮೂಡಿಸಿದೆವು . ಕರ್ನಾಟಕದ ಜಾನಪದ ಕಲೆಗಳು ಹಾಗೂ ಕನ್ನಡ ಅಕ್ಷರ ಮಾಲೆ , ಕನ್ನಡದ ಅಂಕೆ ,ಕನ್ನಡ ನಾಡಿನ ಉಡುಗೆ ,ಆಭರಣ ,ಕರ್ನಾಟಕ ಸಂಗೀತದ ಬಗ್ಗೆ ಹಾಗೂ ನಾಡಿನ ಪ್ರಸಿದ್ದ ಸಂಗೀತಗಾರರ ಬಗ್ಗೆ ಹಲವು ಪುಟಗಳನ್ನು ಹಾಕಿದೆವು . ಕರ್ನಾಟಕದ ವಿವಿಧ ಬುಡಕಟ್ಟು ಜನಾಂಗಗಳ ಬಗ್ಗಿನ ಮಾಹಿತಿಗಳನ್ನು ಮತ್ತು ಅವರ ವೇಶಗಳ ಮಾಹಿತಿಗಳನ್ನು ಹೊಂದಿರುವ ಪುಟವನ್ನು , ಕರ್ನಾಟಕದ ವಿವಿಧ ಹಬ್ಬಗಳು ,ಇಲ್ಲಿನ ವಿಭಿನ್ನ ಭೋಜನಗಳು ,ಪ್ರಸಿದ್ದ ಹೊಟೇಲ್ಗಳ ಬಗ್ಗೆ ತಿಳಿಸಿದ್ದೆವು .ಇಲ್ಲಿನ ಹಳ್ಳಿಗಳ ಜನ ಜೀವನ ಬಿಂಬಿಸುವ ಚಿತ್ರಗಳು ,ಪ್ರಸಿದ್ಧ ಆಟಗಾರರು ,ರೂಪದರ್ಶಿಗಳು ,ವಾಣಿಜ್ಯ ಉದ್ಯಮಿಗಳ ಚಿತ್ರವನ್ನು ಅಂಟಿಸಿದ ಹಲವು ಪುಟಗಳನ್ನು ಪ್ರದರ್ಶಿಸಿದೆವು
ಇದಲ್ಲದೆ ಕರ್ನಾಟಕದ ವಾಣಿಜ್ಯ ಬೆಳೆಗಳು , ಚನ್ನಪಟ್ಟಣ ಗೊಂಬೆಗಳು ,ಶ್ರೀಗಂಧದಿಂದ ಕೆತ್ತಿದ ಮೂರ್ತಿಗಳು ,ದಸರ ಗೊಂಬೆಗಳು,ತ್ಯಾಜ್ಯದಿಂದ ತಯಾರಿಸಲ್ಪಟ್ಟ ತರತರಾವರಿ ಗೊಂಬೆಗಳು,ಕರ್ನಾಟಕದ ಮನೆಗಳ ಆಟವಾದ ಚನ್ನಮಣ್ಣೆ,ಪಗಡೆ,ಚೌಕಾಬಾರ ಮುಂತಾದ ಆಟಗಳನ್ನು ಸಹ ಪ್ರದರ್ಶಿಸಿದೆವು.
ಈ ಸಮಾರಂಭವು ನವೆಂಬರ್ 14 ಮಕ್ಕಳದಿನಾಚರಣೆಯಂದು ಜರುಗಿತು .ಈ ಸಕಲ ಪ್ರದರ್ಶನವನ್ನು ಸುಬ್ರತೋ ಗೋಷ್ರರ ವರು ಟೇಪು ಕತ್ತರಿಸುವ ಮೂಲಕ ಪ್ರಾರಂಭಿಸಿದರು . ಗಣೇಶನ ಪ್ರಾರ್ಥನೆಯೊಂದಿಗೇ ಮುಂದುವರಿದು,ಕನ್ನಡದ ದೀಪ ಬೆಳಗಿಸುವುದರ ಮೂಲಕ ಪ್ರಾರಂಭಗೊಂಡಿತು .ಕೊನೆಯಲ್ಲಿ ಡಾಕ್ಟರ್ ನಿಸ್ಸಾರ ಅಹ್ಮದ್ರ ಪ್ರಸಿದ್ಧ ಸಾಹಿತ್ಯವಾದ ಜೋಗದ ಸಿರಿ ಬೆಳಕಿನಲ್ಲಿ ಹಾಡಿನ ಗಾಯನದ ನಂತರ ಕೊನೆಗೊಂಡಿತು.ಈ ಸಂಬ್ರಮದ ಕ್ಷಣಗಳನ್ನು ಸಿಹಿ ಅಂದ್ರೇ ನಮ್ಮೂರಿನ ಧಾರವಾಡ ಪೇಡ ಹಂಚುವುದರ ಮೂಲಕ ಕೊನೆಗೊಂಡಿತು .
೧೦೦ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದರು .ಈ ಕಾರ್ಯಕ್ರಮದಿಂದ ಉತ್ತೇಜಿತರಾಗಿ ಕನ್ನಡ ಕಲಿಯಲು ಮುಂದಾದರು .ನಾವು ಇಚ್ಚಿತರಿಗೆ ಕನ್ನಡ ಸಹ ಕಲಿಸುತ್ತಿದ್ದೇವೆ .
ಈ ಪ್ರದರ್ಶನವನ್ನು ಹಲವು ಕಡೆಗೇ ಏರ್ಪಡಿಸಬೇಕೆಂಬ ಆಸೇ ಇದೇ .ಈ ಕಾರ್ಯಕ್ರಮವನ್ನು ಮಕ್ಕಳಿಗಾಗಿ ಆಯೋಜಿಸಿದ್ದೆವು .ಅವರುಗಳು ನಮ್ಮ ರಾಜ್ಯದ ಹಾಗೂ ದೇಶದ ಬಗ್ಗೆ ಹೆಚ್ಚು ಅಭಿಮಾನ ಮೂಡಿಸಿಕೊಳ್ಳಲಿ ಎಂಬುದು ನಮ್ಮ ಉದ್ದೇಶವಾಗಿತ್ತು.
Comments
ಉ: ಎಂದೆದಿಗೂ ನೀ ಕನ್ನಡವಾಗಿರು
ಉ: ಎಂದೆದಿಗೂ ನೀ ಕನ್ನಡವಾಗಿರು
ಉ: ಎಂದೆದಿಗೂ ನೀ ಕನ್ನಡವಾಗಿರು
In reply to ಉ: ಎಂದೆದಿಗೂ ನೀ ಕನ್ನಡವಾಗಿರು by Narayana
ಉ: ಎಂದೆದಿಗೂ ನೀ ಕನ್ನಡವಾಗಿರು
ಉ: ಎಂದೆದಿಗೂ ನೀ ಕನ್ನಡವಾಗಿರು
In reply to ಉ: ಎಂದೆದಿಗೂ ನೀ ಕನ್ನಡವಾಗಿರು by manju787
ಉ: ಎಂದೆದಿಗೂ ನೀ ಕನ್ನಡವಾಗಿರು
ಉ: ಎಂದೆದಿಗೂ ನೀ ಕನ್ನಡವಾಗಿರು
In reply to ಉ: ಎಂದೆದಿಗೂ ನೀ ಕನ್ನಡವಾಗಿರು by shivaram_shastri
ಉ: ಎಂದೆದಿಗೂ ನೀ ಕನ್ನಡವಾಗಿರು
In reply to ಉ: ಎಂದೆದಿಗೂ ನೀ ಕನ್ನಡವಾಗಿರು by shivaram_shastri
ಉ: ಎಂದೆದಿಗೂ ನೀ ಕನ್ನಡವಾಗಿರು
ಉ: ಎಂದೆದಿಗೂ ನೀ ಕನ್ನಡವಾಗಿರು
In reply to ಉ: ಎಂದೆದಿಗೂ ನೀ ಕನ್ನಡವಾಗಿರು by ಅನನ್ಯ
ಉ: ಎಂದೆದಿಗೂ ನೀ ಕನ್ನಡವಾಗಿರು
ಉ: ಎಂದೆದಿಗೂ ನೀ ಕನ್ನಡವಾಗಿರು
In reply to ಉ: ಎಂದೆದಿಗೂ ನೀ ಕನ್ನಡವಾಗಿರು by sada samartha
ಉ: ಎಂದೆದಿಗೂ ನೀ ಕನ್ನಡವಾಗಿರು