ಎತ್ತ ಸಾಗುತಿದೆ ಈ ಪಯಣ..!
ಅತ್ತ ಇತ್ತ ಎತ್ತೆತ್ತಲೋ ಸಾಗಿ ಹೊತ್ತು ಮಾಸುವ ಮುನ್ನ ಇತ್ತ ಬಂದೆ ಎನ್ನುವ ರಾಜಕಾರಣ ಗೌಡರದ್ದಲ್ಲ.ಅವರು ರಾಜಕೀಯದಂತಹ ರಾಜಕೀಯಕ್ಕೆ ರಾಹುಗನ್ನಡಿ ಹಿದಿದಂತೆ,ಅಂತೆ ಕಂತೆಯಾಗಿ ಮುಗಿಯದ ಕಂತು ಕಂತುಗಳ ನಾಟಕದ ಸೂತ್ರದಾರ.ಕಣ್ಣಿಗೆ ಕಾಣುವದೆಲ್ಲ ಸತ್ಯವೆಂದು ನಂಬುವುದಾದರೆ ಇವರು ಈಗ ವಾನಪ್ರಸ್ಥಾಶ್ರಮ ಸೇರಹೊರಟ ಮಹಾರಾಜ.!!!!
ಯುವರಾಜನ ಪಟ್ಟಾಭಿಷೇಕ ನಡೆಯಬಹುದು,ಆದರೆ ಕುಮಾರಣ್ಣ ಆ ಹಳೆಯ ಇತಿಹಾಸದ ರಾಜಮನೆತನದವರಲ್ಲಾ..ಗತ್ತಿದೆ ಜೊತೆಗೊಂದಿಷ್ಟು ಗಮ್ಮತ್ತಿದೆ.ಗೌಡರು ಹಿಡಿದ ಕೆಲಸ ಮುಗಿದಂತೆ ಹಿಂದಿರುಗಿದ್ದಾರೆ..! ಇನ್ನೇನಿದ್ದರೂ ಸ್ವಾಮಿಗಳ ಕಾರುಬಾರು;ಸಂಸ್ಥಾನಗಳದ್ದೇ ದರ್ಬಾರು!ಜೊತೆಗೆ ಈ ಗಡೀಪಾರೆಂಬ ಎರಡನೇ ನಾಟಕದ ಜೋರು.ನಮ್ಮ ಗೌಡರಿಗೆ ಬಾರದ ಕಣ್ಣೀರನ್ನು ಒರೆಸಲು ನಾವು ಕರವಸ್ತ್ರ ಕೊಡಬೇಕೆ ಎಂದು ಕೇಳುವವರಾರಿದ್ದಾರೆ..? ಸಲಹೆ ಕೊಟ್ಟವರೇ ಮರಳಿ ಕರೆವವರು,ಎಲ್ಲರೂ ಕೊರಗುವವರು.
ಇನ್ನು, "ಆಗುವದೆಲ್ಲ ಒಳ್ಳೆಯದಕ್ಕೆ" ಭಗವದ್ಗೀತೆಯ ಸಾಲನ್ನು ಮನದಲ್ಲೇ ಮರುಕಳಿಸುತ್ತಿರಬೇಕು ನಮ್ಮ ಕೃಷ್ಣ! ಇದ್ದರೂ ಇಲ್ಲದಂತೆ ಮೆದ್ದರೂ ಉಣ್ಣದಂತೆ..!!ಬರೀ ಸಾರಥಿ ಮಾತ್ರ..ದ್ವಾಪರ ಯುಗ ನೆನಪಾಗುತ್ತದಲ್ಲವೇ?
ಆಗುವುದೆಲ್ಲ ಆಗುತ್ತಿದೆ,ಏನೋ ಒಂದು ಯಾರಾದರೂ ಅಷ್ಟೇ ಅನ್ನುವ ನಾವು ಬದಲಾವಣೆಯನ್ನು ತರಲಾಗದವರು,ಮನೆಯ ಮೂಲೆಯೊಂದರಲ್ಲಿ ಮಲಗಿ ನಿದ್ರಿಸುವವರು.ನೆತ್ತಿ ಕಾದರೆ ಅದಕ್ಕೂ ಆ ಸೂರ್ಯನೇ ಹೊತ್ತಿಕೊಂಡು ಉರಿಯುತ್ತಿದ್ದಾನೆ ಆ ಮಸರಧಾರೆ ಎಂದಾದರೂ ಆರಿಸೀತು ಅನ್ನುವವರು! ಇಲ್ಲಿ ಅಳಿದವರಾರು..??...ಉಳಿದವರಾರು..??
Comments
ರಾಮಾಯಣ-ಮಹಾಭಾರತ-ಭಾಗವತ??