ಎಲ್ಲರಲೂ ಓರ್ವ ಬರಹಗಾರ.

ಎಲ್ಲರಲೂ ಓರ್ವ ಬರಹಗಾರ.

ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳುತ್ತದೆ.

ಪ್ರತಿಯೊಬ್ಬರಲ್ಲೂ ವೈವಿಧ್ಯವುಳ್ಳ ವಿಚಿತ್ರ ಮನಸ್ಸು ಇರುತ್ತದೆ. ಆ ಮನಸ್ಸು ಹಲವು ರೀತಿ ಯೋಚಿಸಿ, ಅಂತೆಯೇ ಹಲವು ರೀತಿಯ ಸಲಹೆ, ಸೂಚನೆ, ಅನಿಸಿಕೆಗಳನ್ನು ನೀಡುತ್ತಿರುತ್ತವೆ. ಆದರೆ, ನಾವು ಆ ಮನಸ್ಸನ್ನು ನಿಯಂತ್ರಿಸಿ, ನಮ್ಮ ಪ್ರತಿಭೆಗಳನ್ನು ಹೊರಹೊಮ್ಮಲು ಬಿಡುವುದೇ ಇಲ್ಲ.

ಇನ್ನು ಕೆಲವರು, ಮನಸ್ಸು ಹೇಳಿದಂತೆಯೇ ಮಾಡಿ, ಮಹಾನ್ ವ್ಯಕ್ತಿಗಳಾಗಿಯೂ, ರಾಜಕಾರಣಿಗಳಾಗಿಯೂ, ಬರಹಗಾರರಾಗಿಯೂ ರೂಪುಗೊಳ್ಳುತ್ತಾರೆ. ಮಿಕ್ಕವರು, ಅದು ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಯನ್ನು ತಮ್ಮ ಮುಂದೆ ಇರಿಸಿಕೊಂಡು ಶೂನ್ಯತಾಭಾವದಲ್ಲೇ ಜೀವನವನ್ನು ಸವೆಸುತ್ತಾರೆ.

ನಮ್ಮೊಳಗಿರುವ ಚಿಂತಕನ, ಬರಹಗಾರನ, ಅಥವಾ ಚಿತ್ರಕಾರನನ್ನು ಕಟ್ಟಿಹಾಕದೇ, ಹರಿಯಬಿಟ್ಟರೆ, ಮನಸ್ಸಿನ ಆಲೋಚನೆಗಳಿಗೆ, ಆಕೃತಿಯನ್ನು ನೀಡುವ ಸಾಧನಗಳನ್ನು ಕೈಯಲ್ಲಿ ಹಿಡಿದಾಗ ಮನಸ್ಸಿನ ಆಕೃತಿಗಳು ಹೊರಹೊಮ್ಮುತ್ತವೆ. ಆಕೃತಿಯ ಸಾಧಕ-ಬಾಧಕಗಳ ಬಗ್ಗೆ ತಲೆಕೆಡಸಿಕೊಳ್ಳಬಾರದು. ಎಲ್ಲರು ಮೆಚ್ಚುವಂತಿರಬೇಕೆಂದಿಲ್ಲ. ಬೆರಳೆಣಿಕೆಯಷ್ಟು ಮಂದಿಯಾದರೂ ಮೆಚ್ಚಿದರೆ ಸಾಕು, ನಮ್ಮೊಳಗಿನ ಆ ವ್ಯಕ್ತಿಯಲ್ಲಿ ಸಾರ್ಥಕ ಮನೋಭಾವ ಉಂಟಾಗುತ್ತದೆ.

‪#‎ಅನುಭವ‬

Rating
No votes yet

Comments

Submitted by ravindra n angadi Sat, 06/13/2015 - 10:56

ಅನಿಲ್ ರಮೇಶ್ ಅವರಿಗೆ ನಮಸ್ಕಾಗಳು,
ಮೇಲೆ ಹೇಳಿದ ನಿಮ್ಮ ಮಾತು ನಿಜ, ನನ್ನ ಮನಸ್ಸು ಕೆಲವೊಮ್ಮೆ ಕೆಲವೊಂದು ವಿಷಯಗಳ ಬಗ್ಗೆ ಬರಿ ಎಂದು ಹೇಳುತ್ತಿ ತ್ತು ಆದರೆ ನಾನು ಯಾವಾಗ ಆ ಮನಸ್ಸಿಗೆ ಪದಗಳ ರೂಪ ಜೋಡಿಸಲು ಪ್ರಾರಂಭಿಸಿದೆನೊ ಆಗಲೇ ಕವನದ ಮಹತ್ವ ಅರಿಯುವಂತಾದೆನು.
ಧನ್ಯವಾದಗಳು.

Submitted by anil.ramesh Sun, 06/14/2015 - 11:38

In reply to by ravindra n angadi

ರವೀಂದ್ರ,
ಪ್ರತಿಕ್ರಿಯೆಗೆ ನಂನಿ!!!
ಓದುವುದರಿಂದ ಜ್ಞಾನ ಹೆಚ್ಚುತ್ತದೆ.
ಬರವಣಿಗೆಯಿಂದ ಅರಿತ ಜ್ಞಾನವನ್ನು ಹಂಚಿಕೊಳ್ಳಬಹುದು.
ಹಾಗಾಗಿ, ಓದು-ಬರಹಗಳಿಂದ ಜ್ಞಾನ ವೃದ್ಧಿಗೊಂಡು, ಮನುಷ್ಯನ ಏಳಿಗೆ ಉಂಟಾಗುವುದು.

Submitted by Vighnesh CS Thu, 08/20/2015 - 16:14

ಸರ್, ಈ ನಿಮ್ಮ ಲೇಖನವು ತುಂಬಾ ಇಷ್ಟವಾಯಿತು.
ಧನ್ಯವಾದಗಳು.
( ನನಗೆ ಗೊತ್ತಿರುವ ಕೆಲವು ವಿಷಯಗಳನ್ನು ಹಂಚಿಕೊಳ್ಳೋಣವೆಂದಾದರೆ, ನಾನು ಬರೆದಿರುವವುದನ್ನು ಓದುಗರು ಟೀಕೆ ಮಾಡುತ್ತಾರೆ ಎನ್ನುವ ಭಯ ಕಾಡುತ್ತದೆ) ಈ ನಿಮ್ಮ ಸಲಹೆಯಿಂದ ಧೈರ್ಯ ಬಂದಂತಾಯಿತು.