ಎಲ್ಲಿದೆ ಮುಕ್ತಿ
ಎಲ್ಲಿದೆ ಮುಕ್ತಿ
ಬೆಟ್ಟದ ತಪ್ಪಲಲ್ಲೋ,
ಹೆಣ್ಣಿನ ನಿತಂಬಗಳಲ್ಲೋ?
ಯವ್ವನ ಪೂರ್ತಿ ಇದನ್ನೇ ಕೇಳುತ್ತದೆ!
(ಮುಪ್ಪಿಗೆ ಉತ್ತರಿಸುವ ಶಕ್ತಿಯೇ ಇಲ್ಲ!!)
ಬೆಟ್ಟವಲೆದರೂ, ಕಾಡು-ಮೇಡು
ಸುತ್ತಿದರೂ ಭಗವಂತನ ಪತ್ತೆಯಿಲ್ಲ.
ಜೀವ ಕೇಳುವುದಿಲ್ಲ,
ಹುಲ್ಲುಕಡ್ಡಿ ಜೀವ ತಳೆದು ಹೆಣ್ಣಾಗುವುದಾದರೆ
ಈ ಹುಲ್ಲು ಕಡ್ಡಿಯ ಮೇಲಿನ ಪ್ರೇಮ
ಅದೆಂತು ಆಗಸಕ್ಕೇರಬಹುದು!
ನಿರ್ಧಾರಗಳು ಎಷ್ಟೇ ಕಠಿಣವಿರಲಿ,
ಕಾಲ ಹೇಗೇ ಹರಿಯುತಿರಲಿ
ನವಿಲಗರಿಗೆ, ಕೊಳಲದನಿಗೆ
ಕೊರಗುವ ಜೀವ ಬೇಸರಗೊಳ್ಳುತ್ತದೆ,
ಕಾಡು ಮರಗಳ ನಡುವೆ
ಗೆಜ್ಜೆದನಿಗೆ, ಹೆಣ್ಣದನಿಗೆ ತುಡಿಯುತ್ತದೆ
ತನ್ನ ಬದುಕಿಗೆ ಇನ್ನಿಲ್ಲವೆಂದು
ಕಂಬನಿ ಮಿಡಿಯುತ್ತದೆ.
Rating