ಎಲ್ಲೆಲ್ಲೂ ಸಂಗೀತವೇ...
ರಾತ್ರಿ ಝೀ,ಸ್ಟಾರ್ ಪ್ಲಸ್, ಸೋನಿ ಟಿ.ವಿ. ನೋಡಿ ಜೇಸುದಾಸ್ ಅವರು ಹಾಡಿದ ಹಾಡು ನೆನಪಾಯಿತು.
ಒಂದರಲ್ಲಿ Voice of India, ಇನ್ನೊಂದರಲ್ಲಿ Challenge SaReGaMaPa, ಮತ್ತೊಂದರಲ್ಲಿ Indian Idol, ಜತೆಜತೆಯಲ್ಲೇ ಬಿತ್ತರವಾಗುತ್ತಿದೆ.
ಬೇಸರದ ಸಂಗತಿಯೆಂದರೆ ಸಂಗೀತದ ಸ್ಪರ್ಧೆಗಿಂತ, ಚಾನಲ್ ಗಳೊಳಗೆ ವೀಕ್ಷಕರನ್ನು ಆಕರ್ಷಿಸುವುದಕ್ಕೋಸ್ಕರ ಹಾಡುಗಾರರನ್ನು ಹೀಗಳೆಯುವುದು,ಅಳಿಸುವುದು ಜಾಸ್ತಿಯಾಗುತ್ತಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತೀರ್ಪುಗಾರರು ಅವರೊಳಗೆ ಕಚ್ಚಾಡುತ್ತಿದ್ದಾರೆ. ಜಗಳದ ಸೀನನ್ನು ನಾಳೆ ನೋಡಿ ಎಂದು ಜಾಹೀರಾತು ಬೇರೆ!
ಅದೇ ಈ ಟಿ.ವಿ.ಯಲ್ಲಿ S.P. ನಡೆಸಿಕೊಡುವ “ಎದೆ ತುಂಬಿ ಹಾಡುವೆನು” ಪ್ರೋಗ್ರಾಂ ,ಕಣ್ಣು ತುಂಬ ನೋಡಿ, ಹ್ರದಯ ತುಂಬಿ ಮೆಚ್ಚುವಂತಿದೆ. ಬಾಲು ಸರ್ ಅಷ್ಟು ದೊಡ್ಡ ಹಾಡುಗಾರರಾದರೂ ಎಷ್ಟೊಂದು ವಿನಯ. ಪ್ರತೀವಾರ ಬರುವ ತೀರ್ಪುಗಾರರೂ ಹಾಗೆ.ಒಂದೇ ಒಂದು ಹಾಡುಗಾರರನ್ನು ಅವಮಾನಿಸಿದ ಉದಾಹರಣೆ ಇಲ್ಲ.