ಎಲ್ಲ ಪಯಣವೂ ಚಟದಿಂದ ದೂರವಾಗುವುದೇ - ಗಾದೆಗೊಂದು ಗುದ್ದು--೭೦
(೩೫೬) ಪ್ರತಿಯೊಬ್ಬ ಸಫಲ ಗಂಡಿನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ. ಆದರೆ ಪ್ರತಿಯೊಬ್ಬ ಸಫಲ ಗಂಡೂ ಸಹ ಒಂದಕ್ಕಿಂತಲೂ ಹೆಚ್ಚಿನ ಹೆಣ್ಣಿನ ಹಿಂದೆ ಬೀಳುತ್ತಾನೆ--ನಿಜ ಜೀವನದ ಹೆಣ್ಣೊಬ್ಬಳಾದರೆ ಸಫಲತೆ ಎಂಬ ರೂಪಕದ ಹೆಣ್ಣು ಎರಡನೆಯವಳು.
(೩೫೭) ಗುಡಿಸಲುವಾಸಿಗಳು ಅರಮನೆಯಲ್ಲಿ ವಾಸಿಸುವ ಕನಸು ಕಾಣಬಲ್ಲರು. ಆದರೆ ಅರಮನೆ ವಾಸಿಗಳಿಗೆ ಅಂತಹ ಕನಸಿನ ಭಾಗ್ಯವಿಲ್ಲ.
(೩೫೮) ಯಾರಾದರೂ ಕೈಗೊಳ್ಳಬಹುದಾದ ಒಂದೇ ಒಂದು ಪಯಣವೆಂದರೆ ಅದು ಚಟಗಳಿಂದ ದೂರ.
(೩೫೯) ನಾವು ಮರೆತುಹೋದುದನ್ನು ನೆನಪಿಸಿಕೊಳ್ಳುವುದೇಕೆಂದರೆ ಅದು ಲಾಭದ ಸೊಬಗನ್ನು ಒಳಗೊಂಡಿರಬಹುದೆಂಬ ಆಶಾವಾದದಿಂದಾಗಿ. ನಮಗೆ ನೆನಪಿರುವುದನ್ನು ಎಂದಿಗೂ ಮರೆಯಲಾಗದೇಕೆಂದರೆ ದುರಂತಗಳನ್ನು ಅದರ ಎಲ್ಲ ಸೂಕ್ಷ್ಮಗಳೊಂದಿಗೆ ಗಮನಿಸಿರುತ್ತೇವೆ, ಅದಕ್ಕೆ!
(೩೬೦) ಮಾನವಜೀವಿಯು ಅತಿಯಾಗಿ ತಿಂದುಂಡು ಕುಡಿದದ್ದರಿಂದಲೇ ಹಾರಲಾರನೆಂದು ನಂಬುವ ಜೀವಿಗಳೇ ಹುಳುಹುಪ್ಪಟೆಗಳು.
Rating