ಎ ಬಿ ತಪ್ಪಿದ್ದೆಲ್ಲಿ?

ಎ ಬಿ ತಪ್ಪಿದ್ದೆಲ್ಲಿ?

ಬೆಲ್ ಬಾಟಮ್ ಪ್ಯಾಂಟ್,ಷರ್ಟ್ ನ ಮೇಲಿನ ಎರಡು ಗುಂಡಿ ಬಿಚ್ಚಿ ,ಮೂಳೆ ಕಾಣಬಾರದೆಂದು ಬನಿಯನ್ ಹಾಕಿಕೊಂಡು, ಷರ್ಟ್ ಕೈನ ಎರಡು ಮಡಕೆ ಮಡಚಿ,ತಲೆಯ ಗುಂಗುರು ಕೂದಲನ್ನೂ ಸಹ ನೀರು ಹಾಕಿ ಒತ್ತಿ ಒತ್ತಿ ಬಾಚಿ, ಅಮಿತಾಬ್ ಸ್ಟೈಲಲ್ಲಿ ತಿರುಗುತ್ತಿದ್ದೆವು.
ಶಮ್ಮಿ,,ದೇವ್,ಜಿತೇಂದ್ರ,ದರ್ಮೇಂದ್ರ,ಸಂಜೀವ್ ಕುಮಾರ್,ಕಿಶೋರ್,ರಾಜೇಶ್ ರೋಷನ್ ರಷ್ಟುಚಂದವೂ ಇರಲಿಲ್ಲ.ಆಕ್ಟಿಂಗ್,ಡ್ಯಾನ್ಸ್ ನಲ್ಲೂ ಹಿಂದೆ ಇದ್ದ ಅಮಿತಾಬ್ ನನ್ನಂತಹ ಕೋಟ್ಯಾಂತರ ಅಭಿಮಾನಿಗಳ ಬೆಂಬಲದಿಂದ ನಂ. ೧ ಸ್ಥಾನಕ್ಕೆ ಲಗ್ಗೆ ಹಾಕಿದರು.
ಅಮಿತಾಬ್ ಗೆ ಏಟಾದಾಗ,ಖಾಯಿಲೆಯಿದ್ದಾಗ ನಾವೂ ದುಃಖಿಸಿದೆವು,ದೇವರ ಬಳಿ ಪ್ರಾರ್ಥಿಸಿದೆವು.
ರಾಜೀವ್ ಗಾಂಧಿ ಜತೆ ಸೇರಿ ಚುನಾವಣೆಗೆ ನಿಂತಾಗ ಬೇಸರವಾದರೂ ಬೆಂಬಲಿಸಿದೆವು.
ಕೌನ್ ಬನೇಗಾ ಕರೋಡ್ ಪತಿ ಸುರುವಾದಾಗ ,ಅಮಿತಾಬ್ ಜತೆ ಹಾಟ್ ಸೀಟಲ್ಲಿ ಕುಳಿತುಕೊಳ್ಳಲಿಕ್ಕಾಗಿ ಪ್ರಯತ್ನಿಸಿ,ಪ್ರಯತ್ನಿಸಿ, “ಏರ್ ಟೆಲ್” ಕೋಟ್ಯಾಂತರ ರೂಪಾಯಿ ಸಂಪಾದಿಸುವಂತೆ ಮಾಡಿದೆವು.
ಅಮಿತಾಬ್ ಮಗ ಎಂಬ ಒಂದೇ ಕಾರಣದಿಂದ ಅಭಿಷೇಕ್ ನ ಸಿನೇಮಾಗಳನ್ನು ನೋಡಿ ಅವನೂ ಹೀರೋ ಆದ.
ಇಷ್ಟೆಲ್ಲಾ ಸರಿ.
ಕಡೇ ಪಕ್ಷ ಅಭಿ-ಐಶ್ ಮದುವೆ ಆಮಂತ್ರಣ ಪತ್ರಿಕೆ ಕಳುಹಿಸಬೇಕಿತ್ಊ. ಹೋಗಲಿ ಬಿಡಿ. ಒಂದೆರಡು ಟಿ.ವಿ.ಯವರಿಗಾದರೂ ನೇರ ಪ್ರಸಾರಕ್ಕೆ ಅವಕಾಶ ಕೊಡಬಾರದಿತ್ತಾ? ಆರಂಭದಿಂದ ಜತೆಗಿದ್ದ ಪತ್ರಿಕೆ,ಅಬಿಮಾನಿಗಳಿಗಿಂತ ಅಮರ್ ಸಿಂಗ್ ಬಳಗ, ಮತ್ತು ನಿನ್ನೆ ಮೊನ್ನೆಯ ಜ್ಯೋತಿಷಿಗಳು ಮುಖ್ಯವಾದರೆ?
ಅಮರ್ ಸಿಂಗ್ ಬಳಗ ಸೇರಿದ ಮೇಲಲ್ವೇ ಈ ಸುಳ್ಳು ರೈತನ ಸೋಗಿನಲ್ಲಿಜಮೀನು ಒಳ ಹಾಕುವ ಬುದ್ಧಿ ಬಂದುದು.ಮಾಯಾವತಿ ಗೆದ್ದುದಕ್ಕೂ ಐಶ್ವರ್ಯ ನ ನಕ್ಷತ್ರವೇ ಕಾರಣ! ಎನ್ನುವ ಜ್ಯೋತಿಷಿಯನ್ನು ಹತ್ತಿರಸೇರಿಸಿದ್ದೇ ಇಷ್ಟಕ್ಕೆಲ್ಲಾ ಕಾರಣ.

Rating
No votes yet

Comments