ಏನ ಬರೆಯಲಿ
ಏನ ಬರೆಯಲಿ? ಇದು ಇತ್ತೀಚೆಗೆ ನನ್ನನ್ನು ಕಾಡುತ್ತಿರುವ ಪ್ರಶ್ನೆ. ದಿನಗಳೆದಂತೆ ಬರೆಯುವುದರತ್ತ ಮನಸ್ಸು ಹೋಗ್ತಾನೇ ಇಲ್ಲ.
ಯಾಕೋ ಗೊತ್ತಿಲ್ಲ.Inspiration ಇಲ್ವೋ, ಅಥವಾ, ಬರೆಯೋದಕ್ಕೆ ಸಮಯ ಸಾಕಾಗ್ತಾ ಇಲ್ವೋ.
ಉಹುಂ... ಉತ್ತರ ಸಿಗ್ತಾ ಇಲ್ಲ. ಯಾಕೋ ಗೊತ್ತಿಲ್ಲ.
ನನ್ನ ಈ ಪ್ರಲಾಪಕ್ಕೆ ಕಾರಣವೂ ಇಲ್ಲದಿಲ್ಲ. ಕಳೆದ ಕೆಲ ತಿಂಗಳುಗಳು ನನಗೆ ನಿರಾಶಾದಾಯಕವಾಗಿತ್ತು. ಬಹಳ
activity ಇದ್ದೇ ಇತ್ತು. ಜೀವನ ನಿಂತ ನೀರಾಗಲಿಲ್ಲ. ಆದರೆ, ಆದರೆ, ನಾನು ನಾನಾಗಿ ಉಳಿದಿದ್ದೇನಾ?
ಇಲ್ಲ, ಹಾಗನಿಸೋದಿಲ್ಲ.ನಾನು ನಾನಾಗಿ ಉಳಿದಿಲ್ಲ.
ಕ್ರೀಡೆ ಎಂಬ ನನ್ನದಲ್ಲದ ಅಂಗಣದಲ್ಲಿ ಕಳೆದ ಕೆಲ ತಿಂಗಳಿನಿಂದ ನಾನು ಆಟವಾಡ್ತಾ ಇದ್ದೇನೆ.
May be, ಕಾಲಕ್ಕೆ ತಕ್ಕ ಕೋಲ ಅನ್ನೋದು ಇದಕ್ಕೇ ಇರಬೇಕು.ನನ್ನದಲ್ಲದ್ದು, ನನಗೆ ಬೇಡದ್ದು ಅಂತ ಹೇಳಿಕೊಳ್ಳುತ್ತಿದ್ದ
ಆ ಕ್ಷೆತ್ರದಲ್ಲಿ ನಾನು debut ಮಾಡಿದ್ದೇನೆ. ಈಗ ಅಲ್ಲೇ ಹೊರಳಾಡ್ತಾ ಇದ್ದೇನೆ. ಹುಂ. ಇನ್ನೆಷ್ಟು ಕಾಲ?
ಗೊತ್ತಿಲ್ಲ. ಅದರರ್ಥ ನನಗಿದು ಇಷ್ಟವಿಲ್ಲವಂತಲ್ಲ. ಆದರೆ, ನಾನದನ್ನು ಮಾಡಬೇಕೆಂದುಕೊಂಡಿರಲಿಲ್ಲ ಅಂತ.
ಆದರೆ, ನನಗೇನು ಮಾಡಬೇಕೆಂದುಕೊಂಡಿದ್ದೇನೋ, ಅದನ್ನು ಮಾಡಿದ್ದೇನೆ ಅಂದುಕೊಳ್ಳುತ್ತೇನೆ.
ಹುಂ. ಇದು ನನ್ನ ambiguityಯ ಪ್ರತಿಫಲನ ಅನ್ನೋಣ. ಆದರೆ, ನನಗೇನು ಆಗಬೇಕಿತ್ತೋ, ಅದು ಆದದ್ದಾಗಿದೆ. ಆದರೆ, ಅದರ ನಡುವೆ,
ಇನ್ನುಳಿದ passionಗಳೇನಿತ್ತೋ ಅದು ಈ ಎಲ್ಲದರ ನಡುವೆ ಮುಳುಗಿಹೋಗಿದೆ.
ಏನೇ ಇರಲಿ, ಇದು ಸದ್ಯದ ಪರಿಸ್ಥಿತಿ.
ಕಾಲ ಇಲ್ಲಿಗೇ ನಿಲ್ಲಲ್ಲ ಅಂದುಕೊಳ್ಳುತ್ತೇನೆ.
(ಈ ಲೇಖನ ಗೊಂದಲಮಯವಾಗಿದ್ದರೆ ದಯವಿಟ್ಟು ಕ್ಷಮಿಸಿ)