ಏಪ್ರಿಲ್ ಒಂದಕ್ಕೂ ಮುಂಚೆ ಫೋಟೋ ಕರಾಮತ್ತು

ಏಪ್ರಿಲ್ ಒಂದಕ್ಕೂ ಮುಂಚೆ ಫೋಟೋ ಕರಾಮತ್ತು

 ತುಮಕೂರಿನಿಂದ ವಾಪಸ್ ಬರ್ಬೇಕಾದ್ರೆ ಸುಮ್ಮನಿರದ ನನ್ನ ಕೈ ತೆಗೆದ ಚಿತ್ರಗಳು ಅನೇಕ. ಅದರಲ್ಲಿ ಒಂದು ಮುಖ್ಯ ಚಿತ್ರ ಇಲ್ಲಿದೆ ನೋಡಿ. ನಮ್ಮನ್ನೆಲ್ಲ ಕಾರ್ ನಲ್ಲಿ ತುಮಕೂರಿನ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆ ಕರ್ಕೊಂಡ್ ಹೋಗಿ ಅಲ್ಲಿಂದ ವಾಪಸ್ ಕರ್ಕೊಂಡ್ ಬಂದ ಅನಿಲ್ ಅವರ ಕಾರ್ ಒಳಗಿಂದ ತಗೆದ ಚಿತ್ರ ಇದು.

ವಾಪಸ್ ಬರ್ಬೇಕಾದರೆ ಮಳೆ ಶುರುವಾಗಿತ್ತು. ಮಾತಾಡ್ಕೊತ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸ್ಕೊಂಡು ಇನ್ನೇನು ಹೊರಡ್ಬೇಕು ಅಂತಿದ್ದಾಗ ನಾನು ಮತ್ತು ವಸಂತ್ ಹಿಂದಿನ ಸೀಟಿನಲ್ಲಿ ಕುಳಿತು ಫೋಟೋ ತಿರುವಿ ಹಾಕ್ತಿದ್ವಿ.  ಕೆಳಗಿನ ಚಿತ್ರ ಕಂಡ ತಕ್ಷಣ ನಾನು ಅನಿಲನನ್ನ ಕರೆದು ಒಂದು ಪ್ರಶ್ನೆ ಕೇಳ್ದೆ. 

ಅನಿಲ, ಇದು ಸರಿನಾ? ಮಳೆ ಬೇರೆ ಸುರೀತಿದೆ, ಏನ್ ಮಾರಾಯ ನೀನು. ಇಲ್ನೋಡಿಲ್ಲಿ, ನಿನ್ನ ಕಾರಿನ ವಿಂಡ್ ಶೀಲ್ಡ್ ನಲ್ಲಿ ಇಷ್ಟು ದೊಡ್ಡ ಪಟ್ಟು ಹಚ್ಚಿಕೊಂಡು ಕಾರು ಓಡಿಸ್ಬಹುದಾ ಅಂತ ಚಿತ್ರ ತೋರಿಸಿ ಕೇಳಿದ್ದೆ ತಡ, ಅವನನ್ನ ನೋಡ್ಬೇಕಿತ್ತು. ತಟ್ಟನೆ ಅತ್ತ ತಿರುಗಿ ಚೆಕ್ ಮಾಡಿದ. ಆಮೇಲೇ ಅವನಿಗೆ ತಿಳಿದಿದ್ದು ಫೋಟೋ ಮಹಾತ್ಮೆ. 

 

 

 

ನಾವೆಲ್ಲ ಅಷ್ಟರಲ್ಲಿ ನಗೆಯ ಕಡಲಲ್ಲಿ ಮುಳುಗಿದ್ವಿ.  ಅನಿಲ ಏಪ್ರಿಲ್ ಗಿಂತ ಮೊದಲೇ ಫೂಲ್ ಆಗೋಗಿದ್ದ. 

Rating
No votes yet

Comments