ಐದೇನು ಐವತ್ತೇನು ಸಂಪದವಿರಲಿ ನೂರೈನೂರು ವರುಷ!

ಐದೇನು ಐವತ್ತೇನು ಸಂಪದವಿರಲಿ ನೂರೈನೂರು ವರುಷ!

ಐದೇನು ಐವತ್ತೇನು ಸಂಪದವಿರಲಿ ನೂರೈನೂರು ವರುಷ

 

ಐದು ತುಂಬಿದ ಸಂಪದವೀಗ ಹೊಸ ರೂಪ ತಾಳಿದೆ,
ಸಂಪದದಲ್ಲಿಯೇ ನಿಜವಾಗಿಯೂ ನನ್ನಂಥವರ ಬಾಳಿದೆ;

ಅಭ್ಯಾಸವಾಗಿದೆ ನನಗೀ ಸಂಪದದಂಗಳದಲ್ಲಿನ ಕೂಟ,
ಬಾಲ್ಯದಲಿ ರೂಢಿಯಾಗಿ ಇದ್ದಿದ್ದಂತೆ ಲಗೋರಿಯಾಟ;

ಬದಲಾವಣೆ ಜಗದ ನಿಯಮ ಸಂಪದವೂ ಹೊರತಲ್ಲ,
ಸಂಪದದಲೂ ಬಂದರೆ ಬದಲಾವಣೆ ಸ್ವಾಗತವಿದೆಯಲ್ಲ;

ಹೊಸತರಲ್ಲಿ ಯಾವುದೂ ಬೇಗನೇ ಇಷ್ಟವಾಗುವುದಿಲ್ಲ,
ಆದರೆ ನಾಲ್ಕಾರು ದಿನಗಳಲ್ಲಿ ನಾವದನು ಒಪ್ಪುತ್ತೇವಲ್ಲ;

ಐದೇನು ಐವತ್ತೇನು ಸಂಪದವಿರಲಿ ನೂರೈನೂರು ವರುಷ,
ಕನ್ನಡದ ಕಂಪ ಹರಡುತ್ತಾ ನೀಡುತ್ತಿರಲೆಲ್ಲರಿಗೂ ಹರುಷ!!

********

ಆತ್ರಾಡಿ ಸುರೇಶ ಹೆಗ್ಡೆ

 

Rating
No votes yet

Comments