ಒಂದೊಳ್ಳೇ ಹಳೇ ಹಾಡು ಕೇಳ್ರಿ - ನಾನೂ ನೀನೂ ಜತೆಗಿರಲೂ

ಒಂದೊಳ್ಳೇ ಹಳೇ ಹಾಡು ಕೇಳ್ರಿ - ನಾನೂ ನೀನೂ ಜತೆಗಿರಲೂ

ಮೊದಲು ಹಾಡು ಕೇಳಿ
( http://www.kannadaaudio.com/Songs/Compilations/Preethne-Aa-Dyavru-Thandha-PB-Srinivas-Hits/Naanu-Neenu.ram )

ನಾನೂ ನೀನೂ ಜತೆಗಿರಲೂ
ಕಾಲದ ನೆನಪೇ ಬೇಕಿಲ್ಲ
ಋತುಗಳು ಕಾಲದ ಮಾತುಗಳು
ಅವುಗಳ ಭೇದವೇ ನಮಗಿಲ್ಲ

ಕಣ್ಣು ಕಣ್ಣೂ ಕಲೆತಿರಲು
ಹಗಲೂ ಇರುಳಿನ ಅರಿವಿಲ್ಲ
ತುಟಿಯೂ ತುಟಿಯೂ ಸೇರಿರಲು
ಮಧುಮಾಸವೇ ಪ್ರತಿಕ್ಷಣವೆಲ್ಲ

ಮನಸೂ ಮನಸೂ ಬೆರೆತಿರಲೂ
ಅಂದವೇ ನೋಡಿದ ಕಡೆಯೆಲ್ಲ
ತನುವೂ ತನುವೂ ಬೆಸೆದಿರಲೂ
ಸ್ವರ್ಗವೇ ನಮಗೇ ಬಾಳೆಲ್ಲ

ಸರಸದಿ ವೇಳೆಯು ಕಳೆದಿರಲು
ಬರಿ ಬೆಳದಿಂಗಳೇ ಬಿಸಿಲೆಲ್ಲ
ಪ್ರಣಯದ ಪಯಣವು ಸಾಗಿರಲು
ಹರುಷವು ನಮಗೆ ಬದುಕೆಲ್ಲ

ಒಲವಿನ ಗೀತೆಯ ಹಾಡುತಿವೆ
ಕಾಮನಬಿಲ್ಲಿನ ಬಣ್ಣಗಳು
ಪ್ರೇಮದ ಸುಧೆಯನು ಸವಿಯುತಿವೆ
ಬಾಳಿನ ಜೋಡಿಯ ಕಣ್ಣುಗಳು

( ಈ ಹಾಡನ್ನ ಮೂವತ್ ವರ್ಷದ ಹಿಂದೆ ಒಂದ್ಸಲ ಕೇಳಿದ್ದೆ ಮೊದಲಿನ ಪ್ಯಾರಾ ಮಾತ್ರ ನೆನಪಿನಲ್ಲಿತ್ತು . ಋತುಗಳು ಕಾಲದ ಮಾತುಗಳೋ ಮಾಪುಗಳೋ ಅಂತ ಕನ್ಫ್ಯೂಸೂ ಆಗಿತ್ತು :)
ಇವತ್ತು ಹಾಡು ಸಿಕ್ತು . ನಿಮಗೆ ಬರ್ಕೋ ಬೇಕು , ಹಾಡ್ಕೊಳ್ತಿರಲಿಕ್ಕೆ ಅನ್ಸಿದ್ರೆ ನಿಮಗೆ ಆ ತೊಂದ್ರೆ ತಪ್ಪ್ಸಿಸಿದ್ದೀನಿ . )

Rating
No votes yet

Comments