ಒಮ್ಮೆ ನಕ್ಕು ಬಿಡಿ _ ೧೫
ಒಮ್ಮೆ ಪ್ರೊಪೆಸರ್ ಒಬ್ಬರು ಹಳ್ಳಿಗೆ ಹೋಗಿದ್ದರು. ಮನೆಯ ಮುಂದೆ ಹೋಗುತ್ತ , ಮನೆಯೊಂದರ ಮುಂದೆ ಗೋಡೆಗೆ ತಟ್ಟಿದ್ದ ಬೆರಣಿಯನ್ನು ಅಚ್ಚರಿಯಿಂದ ನೋಡುತ್ತ ನಿಂತು ಬಿಟ್ಟರು. ಮನೆಯೊಡತಿ ಹೊರಬಂದಳು ಸೂಟು ಬೂಟು ದರಿಸಿ ಕಣ್ಣರಳಿಸಿ ನಿಂತಿದ್ದ ಸಾಹೇಬರನ್ನು ಕಂಡು ಕೇಳಿದಳು
"ಏಕೆ ಸ್ವಾಮಿ ಹಾಗೆ ನೋಡ್ತಾ ನಿಂತಿರಿ?"
ಆಶ್ಚರ್ಯದಿಂದ ಎಂಬಂತೆ ನುಡಿದರು ಪ್ರೊಪೆಸರ್ ಸಾಹೇಬರು
"ಅಲ್ಲ ಹಸು ಇಷ್ಟು ಎತ್ತರಕ್ಕೆ ಹೇಗೆ ಎಗರಿ ಎಗರಿ ಸಗಣಿ ಹಾಕ್ತು ಅಂತ ಯೋಚಿಸುತ್ತಿದ್ದೀನಿ"
:)
Rating