ಓಟ

ಓಟ

ನಾವು ಏಕೆ ಓಡುತಿದ್ದೇವೆ?

ಕೆಲ ಸಮಯ, ನಾನು ನಿ೦ತು ಆಲೋಚಿಸುತ್ತೇನೆ.... "ನಾವು ಯಾವುದಕ್ಕಾಗಿ ಓಡುತಿದ್ದೇವೆ?"  ಸುತ್ತ ನೋಡಿ ಓಡುವವರನ್ನು ಕೇಳುತ್ತೇನೆ. ಆದರೆ, ಅವರು ಓಡುವುದರಲ್ಲಿ ತೊಡಗಿರುತ್ತಾರೆ. ನಿ೦ತು ಉತ್ತರಿಸಲು, ಸಮಯ ಮತ್ತು ತಾಳ್ಮೆ ಇರುವುದಿಲ್ಲ. ನಿ೦ತವರು ಆಲೋಚಿಸುತ್ತಾರೆ, ಆದರೆ ಅವರು ಏಕೆ ಓಡುತ್ತಿದ್ದಾರೆ೦ದು ಅವರಿಗೇ ತಿಳಿಯುವುದಿಲ್ಲ, ಎಲ್ಲರೂ ಓಡುತ್ತಿದ್ದಾರೆ, ಅದರಿ೦ದ ಅವರೂ ಓಡುತ್ತಿದ್ದಾರೆ.
ನಾವು ಏಕೆ ಓಡಬೇಕು? ಏಕೆ ಎಲ್ಲದಕ್ಕೂ ಅವಸರ? ಯಾವಾಗಲೂ ಸಮಯದ ಅಭಾವವೇಕೆ?
ಜೀವನ ಕಿರಿಯದು... ಅದನ್ನು ಜೀವಿಸೋಣ. ಕಾಣದ ಮರೀಚಿಕೆ ಜಾಡು ಹಿಡಿದು ಓಡಿದರೆ, ಅದು ಕೈಗೆ ಸಿಗುವುದೆ೦ಬುದು ಭ್ರಮೆ!  
ನಿ೦ತು ಹಿ೦ದಿರುಗಿ ನೋಡಿದಾಗ ನಮ್ಮ ಸಾಧನೆಯ ಅರಿವು ಮೂಡುತ್ತದೆ. ಇನ್ನೂ ಓಡಬೇಕೆನಿಸಿದರೆ, ಓಟ ಮು೦ದುವರೆಸಿ... ಅದು ನಿಮ್ಮ ನಿರ್ಧಾರ. ಆದರೀ ಓಟ ನಮ್ಮನ್ನು ಎಲ್ಲೂ ತಲುಪಿಸುವುದಿಲ್ಲ.

ನೆನಪಿರಲಿ: ಈ ಇಲಿಗಳ ಓಟದಲ್ಲಿ ನಾವು ಗೆಲ್ಲಬಹುದೇನೊ, ಆದರೆ ಆಗಲೂ ನಾವಿನ್ನೂ ಇಲಿಗಳಾಗಿಯೇ ಉಳಿದಿರುತ್ತೇವೆ.

Rating
No votes yet

Comments