ಓ ದೇವರೇ ...,

ಓ ದೇವರೇ ...,

ಓ ದೇವರೇ .,
ಜಗತ್ತಿನ ಪ್ರತಿ ಜೀವಿಯ ಕತೃ ನೀನೆ ..
ನಿನ್ನ ಬೇಡದಿದ್ದರೂ ಜೀವ ನೀಡಿ ಧರೆಗಿಳಿಸುತ್ತೀಯ.,
ನಿನ್ನ ಸೃಷ್ಠಿಯ ಅರಿಯಲು ನಾನಾ ಬಗೆಯ ಕಷ್ಟ ಕೊಡುತ್ತೀಯ .,
ಕೊನೆಗೆ ನಿನ್ನ ನೆಲೆ ಅರಸುವಂತೆ ಮಾಡಿ ಅವರ ಪ್ರಾಣ ಹಿಂಡುತ್ತೀಯ., 
ಓ ದೇವರೇ ., 
ಸಾಲದೆಂಬಂತೆ ಕಾಯಿ ಕರ್ಪೂರಗಳ ನ್ಯೆವೇದ್ಯ
ಆಹುತಿ ತೆಗುದುಕೊಳ್ಳುತ್ತಿರುವೆಯ 
ಜಗದ ಅಸ್ಟೂ ನೆಮ್ಮದಿಯ .,?? 
ನಿನಗರಿವಿಲ್ಲದೇ ಕಳಚುತ್ತಿರುವೆಯ 
ಪ್ರತಿ ಜೀವಿಯ ಬಾಳಕೊಂಡಿಯ ., ??
ಓ ದೇವರೇ .,
ಪ್ರತಿ ಜೀವಿಯ ಸುಧಾರಿಸಲು ಒಬ್ಬನಿಗೆ ಕಷ್ಟವಾದೀತೆಂದು  
ನಿನ್ನಂತ ನೂರು ಮಂದಿ ಹುಟ್ಟು ಹಾಕಿದರು
ಆದರೂ ಜೀವಿಗಳ ಕಷ್ಟ ತೀರಲಿಲ್ಲ .,
ನಿಮ್ಮ ಹುಟ್ಟಿಸಿದ ಸಾರ್ಥಕತೆಯ ಅನುಭವವಂತೂ
ಅವರಿಗಾಗಲೇ ಆಗಲೇ ಇಲ್ಲ .,
ಓ ದೇವರೇ ., 
ನಿನ್ನ ಇರುವಿಕೆ ನಿಜವಾದರೆ .,
ಒಮ್ಮೆಯಾದರು ಎದ್ದು ಬಾ
ಜಗದ ಅಸ್ಟೂ ದುಷ್ಟ ಶಕ್ತಿಗಳ ಸಂಹರಿಸು ಬಾ  
ಜಗದ ಪ್ರತಿ ಜೀವಿಯ ಬಾಳ ಬೆಳಗಿಸು ಬಾ .,
ಓ ದೇವರೇ ., 
ಎಸ್ಟೆe ಅರಿಯಲೆತ್ನಿಸಿದರೂ ಮಾನವನಿಂದ ನಿನ್ನ ಅರಿಯಲಾಗಲಿಲ್ಲ.,
ನಿನ್ನ ಎಸ್ಟೆe ಬೇಡಿದರೂ ಅವರ ಜೀವನ ಸಾಕಾರಗೊಳ್ಳಲಿಲ್ಲ .,
ನಿನ್ನ ಎಸ್ಟೆe ಅಂಗಲಾಚಿದರೂ ಅವರಸ್ಟೂ ಕನಸುಗಳು ನನಸಾಗಲಿಲ್ಲ .,
ನಿನ್ನೊಂದಿಗೆ ಎಸ್ಟೆe ಹೊಡೆದಾಡಿದರು ಪರಿಪೂರ್ಣ ಸ್ಥಿತಿಗೆ ಅವ ತಲುಪಲೇ ಇಲ್ಲ.,
ನೀ ಮಾತ್ರ ಅವರ ನಂಬಿಕೆ ಮೇಲೆ ಸಮಾಧಿ ಕಟ್ಟಿ ಭದ್ರ ನೆಲೆಮಾಡಿಕೊಂಡಿರುವೆ !!!
ಓ ದೇವರೇ .,
ಎಲ್ಲರೂ ನಿನ್ನ ಸೂರ್ಯ ಚಂದ್ರ
ನಕ್ಷತ್ರಗಳಿಗೆ ಹೋಲಿಸುತ್ತಾರೆ .,
"ನಂಬಿದವರ ಬೆನ್ನಿಗೆ ಚೂರಿ ಹಾಕುವ ನಿನ್ನ"
ನಾ ಮಾತ್ರ "ಗುಳ್ಳೆ ನರಿಗೆ" ಹೊಲಿಸುವೆ .,
ಓ ದೇವರೇ .,
ಬಾಳದಾರಿಯಲಿ ಏಕಿಂತ ಯಾತನೆ .,
ಕೆಲವರಿಗಸ್ಟೆ ಏಕೆ ಸುಖದಾ ಹೊಳೆ .,
ಮಿಕ್ಕ ಎಲ್ಲರಿಗೇಕೆ ಕಷ್ಟಗಳ ಸರಮಾಲೆ .,
"ಒಂದು ಕಣ್ಣಿಗೆ ಬೆಣ್ಣೆ -ಮತ್ತೊಂದಕ್ಕೆಸುಣ್ಣ"
ನಿನ್ನ ಈ ನಡತೆ ಸರಿಯೇ ???

ಓ ದೇವರೇ .,
ನಿನ್ನ ಕಾಡಿ ಬೇಡಿ ನ ಪಡೆದದ್ದಾದರು ಏನು .,
ನಿನ್ನ ಸೇವೆ ಮಾಡಿ ನ ಗಳಿಸಿದ್ದಾದರೂ ಏನು .,
"ಅಂತೂ ಇಲ್ಲ - ಇಂತೂ ಇಲ್ಲ "
ನೆಲೆ ಕಾಣದಂತೆ ಮಾಡಿರುವೆ .,
ನನ್ನ ಬಾಳಬೆಳಗಿದ್ದವರನೆಲ್ಲ ನೀ ದೂರಮಾಡಿರುವೆ !!!

Rating
No votes yet