ಕತ್ತರಿ ಅಲಗು ‍ಕಾಲ್ಪನಿಕ ಕಥೆ

ಕತ್ತರಿ ಅಲಗು ‍ಕಾಲ್ಪನಿಕ ಕಥೆ

ಕುಲಾಲಂಪುರದಿಂದ ಬೆಂಗಳೂರಿಗೆ ಹೊರಡುವ ಇಂಡಿಯನ್ ಏರ್ ಲೈನ್ಸ್ ವಿಮಾನ ಏಐ ೩೪೨ ಅಣಿಯಾಗಿ ಕುಲಾಲಂಪುರದ ವಿಮಾನ ನಿಲ್ದಾಣದಲ್ಲಿ ನಿಂತಿದೆ. ಪ್ರಯಾಣಿಕರು ತಪಾಸಣಾ ಕೇಂದ್ರದಿಂದ ಹೊರಬಂದು, ವಿಮಾನವನ್ನು ಹತ್ತಿ ತಮಗಾಗಿ ಗುರುತಿಸಲ್ಪಟ್ಟ ಆಸನಗಳಲ್ಲಿ ಕುಳಿತು ಕೊಳ್ಳುತ್ತಿದ್ದಾರೆ.

ಹಾಗೆ ಕುಳಿತು ಕೊಳ್ಳುವಾಗ ಪಕ್ಕದ ಆಸನದ ಸಹಪ್ರಯಾಣಿಕರನ್ನು ವಿಚಾರಿಸಿ ಪರಿಚಯಿಸಿಕೊಳ್ಳುವುದೂ ನಡೆದಿದೆ. ಆದರೆ ಸೀಟ್ ನಂಬರ್ ೭೩ ಮತ್ತು ೭೪ ರ ಪ್ರಯಾಣಿಕರು ಮಾತ್ರ ಬಹಳ ಗಂಭೀರವಾಗಿ ಕುಳಿತಿದ್ದಾರೆ.

ಪ್ರಯಾಣಿಕರೆಲ್ಲಾ ತಮ್ಮ ತಮ್ಮ ಜಾಗದಲ್ಲಿ ಕುಳಿತು, ಯಾನಕ್ಕೆ ಸಿದ್ದವಾಗಿ ಹೊರಡಲು ಉಳಿದಿರುವ ಕೆಲವೇ ನಿಮಿಷಗಳತ್ತ ಎಲ್ಲರ ಕಾತುರತೆ ತುಂಬಿದೆ.

ಕಾಕ್ ಪಿಟ್ ನಲ್ಲಿ ಕ್ಯಾಪ್ಟನ್ ನಿತೀಶ್ ಭಾರದ್ವಾಜ್, ಸಹ ಪೊಯಲೆಟ್ ರೈನಾ ರೈ ಸಿದ್ದಾವಾಗಿ ಅವರವರ ಸ್ಥಳದಲ್ಲಿ ಕುಳಿತು ಸಂತೋಷವಾಗಿ ಮಾತನಾಡುತ್ತಿದ್ದಾರೆ.

-ಹಾ.. ರೈನ, ದಿಸ್ ಇಸ್ ಯುವರ್ ಫ಼ೈನಲ್ ಫ್ಲೈ ಆಸ್ ಕೊ ಪೊಯಲೆಟ್ ನೋ. ಲೇಟರ್ ಯು ವಿಲ್ ಬಿ ಇನ್ಡಿಪೆನ್ಡೆಂಟ್ ಪೊಯಲೆಟ್.-

-ದಟ್ಸ್ ರೈಟ್ ಸಾರ್. ಆಲ್ ಬಿಕಾಸ್ ಆಫ಼್ ಯು, ಅಂಡ್ ಕ್ರೆಡಿಟ್ ಗೋಸ್ ಟು ಯು ಅಗೈನ್ ಸರ್`-

-ದಟ್ಸ್ ಓಕೆ ಆಲ್ ದ ಬೆಸ್ಟ್ -

ಅಷ್ಟರಲ್ಲಿ ಒಳ ಬಂದ ವಿಮಾನ ಪರಿಚಾರಕಿ ಕವಿತಾ, ಕಾಕ್ ಪಿಟ್ ನಲ್ಲಿ ಮಾತನಾಡುತ್ತಾ ಕುಳಿತ್ತಿದ್ದ ಫ್ಲೈಟ್ ಕ್ಯಾಪ್ಟನ್ ನಿತೀಶ್ ನನ್ನು ನೋಡಿ,

-ಸಾರ್ ವೀ ಆರ್ ರಡಿ ಟು ಫ್ಲೈ- ಅಂದಳು

-ಓಕೆ ಡೀಯರ್ ಲೆಟ್ ಅಸ್ ಫ್ಲೈ ಫ್ಲೀಸ್ ಪ್ರಿಪೇರ್ ದ ಪ್ಯಾಸೆಂಜರ್ಸ್ -

ಕಾಕ್ ಪಿಟ್ ನ ಬಾಗಿಲು ಮುಚ್ಚಿ ಲಾಕ್ ಮಾಡಿಕೊಂಡ ಕ್ಯಾಪ್ಟನ್ ವಿಮಾನವನ್ನು ಹಾರಿಸುವ ವಿಧಾನಕ್ಕೆ ಕೈ ಹಾಕುವ ಮುನ್ನ ತನ್ನ ಮುಂದಿದ್ದ ನಿಯಂತ್ರಕ ಸಾಧನಗಳ ಕಡೆ ಒಮ್ಮೆ ಗಮನಿಸಿ ಎಲ್ಲವೂ ಸರಿ ಇದೆ ಎಂಬ ಸಮಾಧಾನದ ಚಿತ್ತ ಮೂಡಿದಾಗ, ತನ್ನ ಕಣ್ಣುಗಳನ್ನು ಮುಚ್ಚಿ ಒಮ್ಮೆ ದೀರ್ಘವಾದ ಉಸಿರೆಳುದು ಹೊರಗೆ ಬಿಟ್ಟು, ನಿದಾನವಾಗಿ ಕಣ್ಣು ಬಿಡುತ್ತಾ ತನ್ನ ಬಲಕ್ಕೆ ಕುಳಿತ್ತಿದ್ದ ರೈನಾ ಕಡೆ ತಿರುಗಿ ಬಲ ಕಣ್ಣನ್ನು ಮಿಟುಕಿಸಿ, ಬಲಗೈ ಮುಷ್ಟಿಯನ್ನು ಮಡಿಚಿ ವಿಜಯದ ಸಂಕೇತ ತೋರುಬೆರಳನ್ನು ಮೇಲೆತ್ತಿ,

-ಗುಡ್ ಲಕ್- ಎನ್ನುತ್ತಾ ವಿಮಾನವನ್ನು ಹಾರಿಸುವ ಒಪ್ಪಿಗೆ ಕೊಟ್ಟ.

ನಗು ಮುಖದಿಂದ ಅವನ ಹಾರೈಕೆಯನ್ನು ಸ್ವೀಕರಿಸುತ್ತಾ, ತನ್ನ ಎಡಕಣ್ಣನ್ನು ಮಿಟುಕಿಸಿ, ತನ್ನ ಬಲಗೈನಿಂದ ಅದೇ ವಿಜಯದ ಸಂಕೇತ ತೋರುತ್ತಾ, ತ್ಯಾಂಕ್ ಯು ಸರ್ ಅಂದವಳೆ,
ವಿಮಾನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ತೆಗೆದುಕೊಂಡಳು ರೈನಾ.

ಈಗಾಗಲೆ ೧೦೦ ಗಂಟೆಗಳಿಗಿಂತ ಹೆಚ್ಚು ಸಮಯ ವಿಮಾನ ಹಾರಾಟವನ್ನು ಸುಸೂತ್ರವಾಗಿ ಮುಗಿಸಿದ್ದರೂ, ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ನಲ್ಲಿ ಇನ್ನೂ ಹೆದರುತ್ತಿದ್ದಳು ರೈನಾ. ಸಾಕಷ್ಟು ಹಾರಾಟದ ಸಮಯದಲ್ಲಿ ಜೊತೆಗಿದ್ದು ದೈರ್ಯ ತುಂಬಿದ್ದವನು ನಿತೀಶ್ ಭಾರದ್ವಾಜ್. ಹಿಂದೆ ಒಮ್ಮೆ ಲ್ಯಾಂಡಿಂಗ್ ಸಮಯದಲ್ಲಿ ಆಕೆ ಮಾಡಿದ ಸಣ್ಣ ತಪ್ಪಿನಿಂದ ದೊಡ್ಡ ಅವಗಡ ಸಂಭವಿಸುವುದರಲ್ಲಿತ್ತು. ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ಸಂಬಾಳಿಸಿದವ ಇದೆ ಭಾರದ್ವಾಜ್. ಇಂದು ಆಕೆ ತಾನೆ ಸಂಪೂರ್‍ಣ ನಿರ್ವಹಣಿ ಮಾಡುವುದಾಗಿ ಅವನಲ್ಲಿ ಕೇಳಿಕೊಂಡಿದ್ದಳು, ಹಾಗಾಗಿ ಮುಂದುವರೆಯಲು ಸೂಚಿಸಿದ್ದ ಕ್ಯಾಪ್ಟನ್.

ವಿಮಾನದ ಒಳಗಿನಿಂದ ಹೊರಡಲು ಮುಕ್ತವಿದೆ ಎಂಬ ಸೂಚನೆ ಬಂದೊಡನೆ, ಸ್ಟಾಂಡ್ ಬೈ ನಲ್ಲಿದ್ದ ವಿಮಾನಕ್ಕೆ ನಿಧಾನವಾಗಿ ವೇಗ ದೊರೆಯುವಂತೆ, ತ್ರೋಟಲ್ ಅನ್ನು ಹೆಚ್ಚಿಸುತ್ತಾ ಚಾಲನೆಗೆ ಅನುವು ಮಾಡಿಕೊಟ್ಟಳು. ಮಂದಗತಿಯಲ್ಲಿ ಮುಂದುವರೆದ ವಿಮಾನ ರನ್ ವೇನಲ್ಲಿ ಓಡುತ್ತಾ ತನ್ನ ಟೇಕ್ ಆಫ್ ವೇಗವನ್ನು ಪಡೆದು ಕೊಂಡು ಮೇಲೇರಲು ಸನ್ನದ್ದವಾಯ್ತು. ತ್ರೋಟಲ್ ವಾಲ್ವನ್ನು ಸಾಕಷ್ಟು ತೆರೆದಿಟ್ಟಿದ್ದ ಕಾರಣ ಯಂತ್ರದ ಶಬ್ದ ಜೋರಾಗಿತ್ತು. ಯೋಕ್ ಹ್ಯಾಂಡಲನ್ನು ತನ್ನ ಎರಡೂ ಕೈನಲ್ಲಿ ಹಿಡಿದ ರೈನಾ ವಿಮಾನದ ಮೂತಿಯನ್ನು ಮೇಲೆತ್ತಿ ನೆಲದಿಂದ ಹಂತ ಹಂತ ವಾಗಿ ಮೇಲೇಳುವಂತೆ ಮಾಡಿ, ತ್ರೋಟಲನ್ನು ಮತ್ತಷ್ಟು ಹಿಗ್ಗಿಸಿ, ಗಗನದೆಡೆಗೆ ವಿಮಾನವನ್ನು ಒಯ್ದು, ಏರ್ ಟ್ರಾಫಿಕ್ ಕಂಟ್ರೋಲ್ ನಿರ್ಧೇಶಿದ ಎತ್ತರದಲ್ಲಿ ೨೦೦ ನಾಟ್ ವೇಗಕ್ಕೆ ವಿಮಾನವನ್ನು ನಿಯಂತ್ರಿಸಿ, ಎಲ್ಲವೂ ಸರಿಯಾಗಿದೆ ಎಂಬ ಅರಿವು ಮೂಡಿದಮೇಲೆ, ವಿಮಾನವನ್ನು ಆಟೋ ಪೈಯಲೇಟ್ ಮೋಡ್ಗೆ ತಳ್ಳಿ, ಸಾವಕಾಶವಾಗಿ ಹಿಂದಕ್ಕೆ ಒರಗಿ, ಮುಗುಳ್ನಗೆಯೊಂದಿಗೆ ಕ್ಯಾಪ್ಟನ್ ಕಡೆಗೆ ದೃಷ್ಟಿ ಹರಿಸಿ ನೋಡಿದಳು.

- ವೆಲ್ ಡನ್ ರೈನಾ. ಟೇಕ್ ಆಫ್ ವಾಸ್ ಬ್ಯೂಟಿಫುಲ್. ನೊ ಎರ್ರರ್. ಮೇನ್ಟೆನ್ ಅಂಡ್ ಕೀಪ್ ಇಟ್ ಅಪ್.-
ರ್‍ಐನಾ ಮಾಡಿದ ಸರಿಯಾದ ಕೆಲಸಕ್ಕೆ ಶಹಬಾಸ್ ಗಿರಿ ಕೊಟ್ಟು ಹೇಳಿದ ಕ್ಯಾಪ್ಟನ್ ನಿತೀಶ್.

-ತ್ಯಾನ್ಕ್ ಯು ಸರ್-

ವಿಮಾನ ತನ್ನ ಗತಿಯಲ್ಲಿದ್ದುಕೊಂಡು, ಸೇರುವ ಸ್ಥಳದತ್ತ ಪರಿಕ್ರಮಿಸುತ್ತಿದೆ. ಪ್ರಯಾಣಿಕರೆಲ್ಲಾ ನಿದ್ದೆಗೆ ಜಾರುತ್ತಿದ್ದಾರೆ. ಆದರೆ ೭೩ ಮತ್ತು ೭೪ ನೆ ಸೀಟಿನ ಪ್ರಯಣಿಕರು ಮಾತ್ರ ನಿದ್ದೆ ಮಾಡದೆ ತೆರೆದ ಕಣ್ಣು ಬಿಟ್ಟ ಹಾಗೆ ಕುಳಿತ್ತಿದ್ದಾರೆ. ವಿಮಾನ ಪ್ರಯಾಣ ಪ್ರಾರಂಭವಾಗಿ ೨೫-೩೦ ನಿಮಿಷ ಕಳೆದಿದೆ, ೭೩-೭೪ ರ ಪ್ರಯಾಣಿಕರು ಒಬ್ಬರನ್ನೊಬ್ಬರು ನೋಡಿ, ಅಷ್ಟೆ ಗಂಭೀರತೆಯಿಂದ ಅತ್ತ ಇತ್ತ ತಿರುಗಿ ಕುಳಿತರು.

ರೈನಾ ರೈ ಗೆ ಇದು ಅತಿ ಸಂತಸದ ಯಾನ. ಶುಭ ಸಂಕೇತವೆಂಬಂತೆ ಇಂದು ಯಾವುದೆ ಸಣ್ಣ ತಪ್ಪುಗಳೂ ಇಲ್ಲದೆ ಅನಾಯಾಸವಾಗಿ ವಿಮಾನ ಟೆಕ್ ಆಫ್ ಆಯ್ತು. ಕ್ಯಾಪ್ಟನ್ ಕೂಡ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮುಂದಿನ ಈ ದಿನದ ಕೆಲಸಗಳನ್ನೂ ಸಮರ್ಪಕವಾಗಿ ಮುಗಿಸಿದರೆ, ತನ್ನ ಪ್ರಮೋಷನ್ ಗ್ಯಾರಂಟಿ. ನಂತರ ಮುಂದಿನ ಜೀವನದ ಸೊಗಸು, ಕಾರಣ ಈಗಾಗಲೇ ತನನ್ನು ಮೆಚ್ಚಿ ಮದುವೆ ಯಾಗುವುದಾಗಿ ಹೇಳಿರುವ ಸುಭಾಷ್, ತನ್ನ ಒಂದು `ಎಸ್` ಗ್ರ್‍ಈನ್ ಸಿಗ್ನಲ್ಗಾಗಿ ಕಾಯುತ್ತಿದ್ದಾನೆ. ಇಲ್ಲ ಇನ್ನು ಸುಭಾಷ್ನನ್ನು ಹೆಚ್ಚು ಕಾಯಿಸುವುದು ಬೇಡ. ನನ್ನ ಪ್ರಮೋಷನ್ ಅನೌನ್ಸ್ ಆಗುತ್ತಿದ್ದ ಹಾಗೆ ಒಪ್ಪಿಗೆಯನ್ನು ತಿಳಿಸಿಬಿಡೋಣ. ಆಮೇಲೆ ಅಪ್ಪ ಅಮ್ಮಂಗೆ ಹೇಳಿಬಿಡೋಣ. ಅವರೂ ಸಂತೋಷ ಪಡುತ್ತಾರೆ.

ಸುಭಾಷ್ ಮತ್ತು ರೈನಾ ಒಂದೆ ಕಾಲೇಜ್ನಲ್ಲಿ ಓದಿದವರು. ತನಗಿಂತ ಎರಡು ವರ್ಷ ಸೀನಿಯರ್.
ತಾನು ಎಂಜಿನಿಯರಿಂಗ್ ಓದ ಬೇಕೆಂದು ಕೊಂಡಿದ್ದರೂ ಸುಭಾಷ್ ಪೈಯಲೆಟ್ ಆದನಲ್ಲ, ಆದ್ದರಿಂದ
ನಾನೂ ಪೈಲೆಟ್ ಆಗೋಣ ಅಂತ ನಿರ್ಧರಿಸಿ, ಇಂದು ಹೀಗಿದ್ದೇನೆ. ಸುಭಾಷ್ ಮನಸ್ಸು ತನಗೆ ಚೆನ್ನಾಗಿ ಗೊತ್ತಿದೆ. ಆತ ದೈರ್ಯವಂತ. ನೋಡಲಿಕ್ಕೂ ವೆರೆ ಸ್ಮಾರ್ಟ್. ಅವನ್ನನ್ನು ಮದುವೆಯಾಗಿ ಸುಖ ಸಂಸಾರ ಕಟ್ಟಬೇಕು.... ಹೀಗೆ ತನ್ನ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾಳೆ ರೈನಾ.

ಬೆಂಗಳೂರು ಸೇರಲು ಇನ್ನೊಂದು ಅರ್ಧ ಮುಕ್ಕಾಲು ಗಂಟೆ ಪ್ರಯಾಣ. ಪ್ರಯಾಣಿಕರೆಲ್ಲಾ ಆಗಲೆ ಸಿದ್ಧರಾಗುತ್ತಿದ್ದಾರೆ. ೭೩-೭೪ ರ ಪ್ರಯಾಣಿಕರಂತು ಯಾನ ಪ್ರಾರಂಭಕ್ಕೆ ಮುಂಚೆ ಎಷ್ಟು ಗಂಭೀರ ವದನರಾಗಿದ್ದರೋ ಅಷ್ಟೆ ಗಂಭೀರವಾಗಿ ಕುಳಿತಿದ್ದಾರೆ.

ಆಟೋ ಪೈಯಲೆಟ್ ಮೋಡ್ನಲ್ಲಿ ಸಾಗುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ, ಝ್..........ಮ್ ಎಂದು ಯಂತ್ರದ ಶಬ್ದ ಹೆಚ್ಚಾಗುತ್ತಾ, ವಿಮಾನದ ವೇಗ ೨೫೦ ನಾಟ್ ಸ್ಪೀಡ್ಗಿಂತ ಅಧಿಕವಾಗಿ ಗ್ರೀನ್ ಲಿಮಿಟ್ ದಾಟಿ ಮುಂದೆ ಹೋಯ್ತು.

ಕಲ್ಪನೆಯಲ್ಲಿ ತೇಲಿ ಹೋಗಿದ್ದ ರೈನಾ ತಕ್ಷಣ ಎಚ್ಚೆತ್ತು ಏನಾಯ್ತು...?? ಏನಾಗುತ್ತಿದೆ..??!! ಎಂದು ನೋಡುವುದರಲ್ಲಿ, ವಿಮಾನದ ಚಾಲಕನ ಪರದೆಯ ಮೇಲೆ ಒಮ್ಮೆಗೆ ಎರಡು-ಮೂರು ರೆಡ್ ಅಲರ್ಟ್ ಕಾಣಿಸುತ್ತಿದೆ. - `ಕಾಷನ್: ಹೈ ಅಲರ್‍ಟ್- ಆಲ್ಟಿಟುಡ್ ಗೋಇಂಗ್ ಡೌನ್ - ಸ್ಪೀಡ್ ಹೈ - ಲ್ಯಾಂಡಿಂಗ್ ಸಿಸ್ಟೆಮ್ ಮ್ಯಾಲ್ ಫನ್ಕ್ಷನ್ ` -

ತಕ್ಷಣ ನಿತೀಶ್ ಕಡೆ ನೋಡಿದಳು ರೈನಾ. ನಿತೀಶ್ ನ ಪರಿಸ್ಥಿತಿ ನೋಡಿ ಅವಳ ಎದೆ ಒಡೆದು ಹೋ....ಯ್ತು.....??.

ತನ್ನ ಎಡಗೈಯಲ್ಲಿ ಎದೆಯಮೇಲೆ ಹೃದಯದ ಭಾಗವನ್ನು ಅದುಮಿ ಹಿಡಿದು ಕೊಂಡಿದ್ದಾನೆ, ಅವನು ಅನುಭವಿಸುತ್ತಿರುವ ವೇದನೆಯ ಕಾರಣವೋ ಏನೋ ತನ್ನ ಬಲ ಗೈನಿಂದ ಯೋಕ್ ಹ್ಯಾಂಡಲ್ ಹಿಡುದು ಮುಂದಕ್ಕೆ ಒತ್ತುತ್ತಿದ್ದಾನೆ.

ಪರಿಸ್ಥಿಯನ್ನು ಅರಿತ ರೈನಾ ಕ್ಷಣ ಕಾಲವೂ ತಡಮಾಡದೆ, ನಿತೀಶ್ನ ಬಲಗೈಯನ್ನು ಯೋಕ್ನಿಂದ ಬೇರ್ಪಡಿಸಿ, -`ಪ್ಲೀಸ್ ರಿಲ್ಯಾಕ್ಸ್ ಸಾರ್`- ಅಂದವಳೆ, ತನ್ನ ಬಳಿಯಿದ್ದ ಯೋಕ್ ಹ್ಯಾಂಡಲನ್ನು ಹಿಡಿದು, ಕೆಳಗಿಳಿದಿದ್ದ ಆಲ್ಟಿಟುಡನ್ನು ಮರುಸ್ಥಾಪಿಸಿ, ತ್ರೋಟಲನ್ನು ಹಿಂದಕ್ಕೆ ತಂದು ವಿಮಾನದ ವೇಗವನ್ನು ತಗ್ಗಿಸಿ. ಕ್ಯಾಪ್ಟನೆಡೆಗೆ ತಿರುಗಿ,

-ಸಾರ್ ವಾಟ್ಸ್ ಹ್ಯಾಪ್ನಿಂಗ್ ಟು ಯು..??!!..?-

ಅಷ್ಟರಲ್ಲಿ ಹೆಚ್ಚು ಕಡಿಮೆ ಅರೆ ಪ್ರಜ್ಞಾವಸ್ಥೆ ತಲುಪಿದ್ದ ನಿತೀಶ್ ಕ್ಷೀಣ ಸ್ವರದಲ್ಲಿ ನುಡಿದ -`ಚೆಸ್ಟ್ ಪೈನ್ ಮೆಡಿಕಲ್ ಎಮರ್ಜೆನ್ಸಿ, ಹೆಲ್ಪ್ ಮಿ ಪ್ಲೀಸ್`-

ಒಮ್ಮೆಗೆ ರೈನಾಳ ಜಂಗಾಬಲವೇ ಉಡುಗಿ ಹೋಯ್ತು. ಓ... ಮೈ ಗಾಡ್ ಏನು ಮಾಡಲಿ ನಾನೀಗ. ಎಲ್ಲಾ ಸರಿ ಇದೆ ಅಂದು ಕೊಂಡರೆ ಕೊನೆ ಕ್ಷಣದಲ್ಲಿ ಇದೇನಾಗುತ್ತಿದೆ... ಬೆಂಗಳೂರು ಆಗಲೇ ಸಮೀಪಿಸುತ್ತಿದೆ. ಲ್ಯಾಂಡಿಂಗ್ ಬೇರೆ.... ಓ... ಮೈ ಗಾಡ್ ನೋ... ನೊ... ಅಂದುಕೊಂಡಳು. ಒಂದು ಕ್ಷಣ ಕೈ ಕಾಲು ನಡುಗಲಿಕ್ಕೆ ಪ್ರಾರಂಭ ಆಯ್ತು. ಸಾವರಿಸಿಕೊಂಡು, ಕವಿತಾಳನ್ನು ಒಳಗೆ ಕರೆದಳು. ವಿಮಾನವನ್ನು ಆಟೋ ಪೈಯಲೆಟ್ ಮೋಡ್ ಗೆ ತಳ್ಳಿ. ಇರುವ ಪರಿಸ್ಥಿಯನ್ನು ಕವಿತಾಳಿಗೆ ಸೂಕ್ಷ್ಮವಾಗಿ ಹೇಳಿ, ಮತ್ತಿಬ್ಬರು ಪ್ರಯಾಣಿಕರ ಸಹಾಯದಿಂದ ನಿತೀಶ್ನನ್ನು ಅವನು ಕುಳಿತಿದ್ದ ಕಾಕ್ ಪಿಟ್ನ ಪೈಯಲೆಟ್ ಜಾಗದಿಂದ ಹೊರತಂದು ಮಲಗಿಸಿದರು. ಅಷ್ಟರಲ್ಲಿ ಅವನು ಆಗಲೆ ಪ್ರಜ್ಞೆ ಕಳೆದು ಕೊಂಡಿದ್ದ. ಅದೃಷ್ಠವೋ ಎಂಬಂತೆ ಪ್ರಯಾಣಿಕರಲ್ಲಿ ಒಬ್ಬರಾಗಿದ್ದ ಡಾಕ್ಟರ್ ಮುಂದೆ ಬಂದು ಪರೀಕ್ಷಿಸಿ, ಮಾಡಬೇಕಿದ್ದ ಪ್ರಾಥಮಿಕ ಪರೀಕ್ಷೆ ಮಾಡಿ, ಆಮ್ಲಜನಕವನ್ನು ಒದಗಿಸಿ, ಸಾಧ್ಯವಿದ್ದ ಚಿಕೆತ್ಸೆ ನೀಡಿ, ಇಲ್ಲಿ ಸಾಧ್ಯವಾಗುವುದನ್ನ ನಾನು ಮಾಡಿದ್ದೇನೆ, ಇನ್ನು ಆದಷ್ಟು ಬೇಗ ಅವರನ್ನು ಆಸ್ಪತ್ರೆಗೆ ಒಯ್ಯಬೇಕು ಅಷ್ಟೆ ಅಂದರು.

ಇಂಥಹ ಪರಿಸ್ಥಿಯಲ್ಲಿ ಹಾಗೆ ಬಿಟ್ಟರೆ ಪ್ರಯಾಣಿಕರು ಗಾಬರಿಯಾಗುತ್ತಾರೆ ಎಂದರಿತ ರೈನಾ ಮುಂದೆ ತಿರುಗಿದಳು. ಅಷ್ಟರಲ್ಲಿ ಆಗಲೆ ವಿಮಾನ ಬೆಂಗಳೂರು ಏರ್ ಟ್ರಾಫಿಕ್ ಕಂಟ್ರೋಲ್ ಕೊಠಡಿಯ ಮೇಲುಸ್ತುವಾರಿ ಗಮನಕ್ಕೆ ಒಳಪಟ್ಟಿತ್ತು, ಅಲ್ಲಿಂದ ಆಗಲೆ ನಿರ್ಧೇಶನದ ಕರೆ ಪ್ರಾರಂಭವಾಯ್ತು.

-ಏಟಿಸಿ ಬ್ಯಾಂಗ್ಳೂರ್, ಕಾಲಿಂಗ್ ಪ್ಲೈನ್ ಏಐ ತ್ರೀ ಹುನ್ಡ್ರೆಡ್ ಫಾರ್ಟಿಟು, ಕಮ್ ಇನ್ ಫ್ಲೀಸ್. ಓವರ್ -

ಮೈಕ್ರ್‍ಓ ಫೋನ್ ಕೈನಲ್ಲಿ ಹಿಡಿದ ರೈನಾ ಪಿಟಿಟಿ ಪ್ರೆಸ್ಸ್ ಮಾಡಿ

- ತ್ಯಾಂಕ್ಯು ದಿಸ್ ಈಸ್ ಕೋ ಪೈಯಲೆಟ್ ರೈನ ಕಾಲಿಂಗ್. ಮೆಡಿಕಲ್ ಎಮರ್ಜೆನ್ಸಿ, ಕ್ಯಾಪ್ಟನ್ ಸಿಕ್ ಕೀಪ್ ತಿನ್ಗ್ಸ್ ರೆಡಿ. ಓವರ್ -

-ಏನಾಯ್ತು ರೈನಾ..?? - ಕಂಟ್ರೋಲ್ ರೂಂನಿಂದ ಗಾಬರಿಯಾಗಿ ಕೇಳಿದ ಕಂಟ್ರೋಲರ್

- ಕ್ಯಾಪ್ಟಂಗೆ ಸೀರಿಯಸ್ ಚೆಸ್ಟ್ ಪೈನ್, ಆಲ್ಮೋಸ್ಟ್ ಅವ್ರು ಅನ್ ಕಾನಿಶಿಯಸ್ ಆಗಿದಾರೆ. ಇಟ್ಸ್ ಅರ್ಜೆಂಟ್. ಪ್ಲೀಸ್ ಬೀ ರೆಡಿ. ಓವರ್ -

- ಒಕೆ ಒಕೆ ನಾನು ಆರ್ಗನೈಸ್ ಮಾಡ್ತೀನಿ. ಯು ಗೆಟ್ ರೆಡಿ ಟು ಲ್ಯಾಂಡ್ ಅಟ್ ರನ್ ವೇ ೪. ಓವರ್ ಅಂಡ್ ಔಟ್-

ರೈನಾಗೆ ಈಗ ನಿಜವಾದ ಅಗ್ನಿ ಪರೀಕ್ಷೆ. ವಿಮಾನವನ್ನು ಲ್ಯಾಂಡಿಂಗ್ ಮಾಡುವುದು ಅಂದ್ರೆ ಒಳಗಿರುವ ಅಷ್ಟು ಜನರಿಗೆ ಮತ್ತೊಮ್ಮೆ ಜೀವದಾನ ಮಾಡಿದ ಹಾಗೆ ಎಂಬುದು ಆಕೆಗೆ ಗೊತ್ತು. ಸ್ವಲ್ಪ ಹೆಚ್ಚು ಕಡಿಮೆಯಾದರೆ ಎಲ್ಲರ ಜೀವಕ್ಕೂ ಕುತ್ತು. ಜೊತೆಗೆ ಸಹಾಯಕ್ಕೆ ನಿಲ್ಲಲು ಕ್ಯಾಪ್ಟನ್ ಇಲ್ಲ. ಯಾರ ಬಳಿಯೂ ಹೇಳಿಕೊಳ್ಳುವ ಹಾಗಿಲ್ಲ. ಅವಳ ಎದೆ ಡವಗುಟ್ಟುತ್ತಿದೆ.

ಬೆಂಗಳೂರು ವಿಮಾನ ನಿಲ್ದಾಣ ಕೆಳಗೆ ಕಾಣಿಸುತ್ತಿದೆ. ತಾನೀಗ ಏಕಾಂಗಿಯಾಗಿ ಲ್ಯಾಂಡಿಂಗ್ ಮಾಡಬೇಕು..... ಓ... ದೇವರೆ ನನಗೆ ಶಕ್ತಿ ಕೊಡು. ಈ ಅಗ್ನಿ ಪರೀಕ್ಷೆಯಲ್ಲಿ ನನ್ನನ್ನು ಪಾರಾಗಿಸು. ಸುಭಾಷ್ ಎಲ್ಲಿದ್ದೀಯ ನೀನಾದರೂ ಜೊತೆ ಇದ್ದಿದ್ದರೆ....., ಛೇ.. ಎಲ್ಲಾ ಸರಿ ಇತ್ತು.. ಹೀಗೇಕಾಯ್ತು..??!!?....  ಮೇಲೆದ್ದು ಬರುತ್ತಿದ್ದ ನೂರೆಂಟು ಯೋಚನಾ ಲಹರಿಯನ್ನು ನಿಯಂತ್ರಿಸಿ.. ಇಲ್ಲ ಇದು ಯೋಚಿಸುವ ಸಮಯವಲ್ಲ... ನಾನು ಲ್ಯಾಂಡಿಂಗ್ ಮಾಡುತ್ತೇನೆ. ಇದನ್ನು ಸಮರ್ಥವಾಗಿ ಎದುರಿಸುತ್ತೇನೆ, ಎಂಬ ದೈರ್ಯವನ್ನು ತಂದುಕೊಂಡ ರೈನಾ ಧೀರ್ಘವಾದ ಉಚ್ವಾಸ ನಿಸ್ವಾಸದೊಂದಿಗೆ ಸಿದ್ದಳಾಗಿ ತನ್ನ ಆಸನದಲ್ಲಿ ನೇರವಾಗಿ ಕುಳಿತಳು.

ಆಟೋ ಮೋಡ್ನಲ್ಲಿದ್ದ ವಿಮಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದು ಕೊಂಡ ರೈನಾ ಕಂಟ್ರೋಲ್ ರೂಂ ನೊಡನೆ ಸಂಪರ್ಕಿಸಿ,

- ಕಾಲಿಂಗ್ ಏಟಿಸಿ ಬ್ಯಾಂಗಲೂರ್, ದಿಸ್ ಈಸ್ ರೈನಾ ಕೋ ಪೊಯಲೆಟ್ ಫ್ಲೈಟ್ ನಂಬರ್ ಏ ಐ ತ್ರೀ ಹಂಡ್ರೆಡ್ ಫಾರ್ಟಿಟು. ರಿಕ್ವೆಸ್ಟೆಡ್ ಲ್ಯಾಂಡಿಂಗ್ ಪರ್ಮಿಷನ್. ಓವರ್ -

- ಓ. ಕೆ ಯು ಆರ್ ಪರ್ಮಿಟೆಡ್ ಟು ಲ್ಯಾಂಡ್ ಅಟ್ ರುನ್ ವೇ ಫೋರ್. ಕಂ ದೇರ್ ಅಟ್ ರನ್ ವೇ ಫೋರ್. ಓವರ್-

ವಿಮಾನದ ವೇಗವನ್ನು ಕಡಿಮೆಗೊಳಿಸುತ್ತಾ ನಿಧಾನವಾಗಿ ತನಗಾಗಿ ಸೂಚಿಸಿದ್ದ ರನ್ ವೇ ಕಡೆ ವಿಮಾನವನ್ನು ಕೆಳಗಿಳಿಸತೊಡಗಿದಳು. ಆಲ್ಟಿಟುಡ್ ಕೆಳಗೆ ಇಳಿಯುತ್ತಿದ್ದಂತೆ, ಸರಿಯಾದ ಸಮಯಕ್ಕೆ ಕಾಯ್ದು, ಲ್ಯಾಂಡಿಂಗ್ ಗೇರ್ ಅಪ್ಲೈ ಮಾಡಲು, ತನ್ನ ಎಡ ಪಕ್ಕದಲ್ಲಿದ್ದ ಗೇರನ್ನು ಒತ್ತಿದಳು ರೈನಾ.

ಯಾವ ಕ್ಷಣದಲ್ಲಿ ಅವಳು ಮನದಲ್ಲಿ ಲ್ಯಾಂಡಿಂಗನ್ನು ಅಗ್ನಿ ಪರೀಕ್ಷೆ ಅಂದು ಕೊಂಡಳೋ ಏನೋ ಅದು ನಿಜವಾದ ಅಗ್ನಿ ಪರೀಕ್ಷೆಯೇ ಆಗಿ ಪರಿಣಮಿಸಿತ್ತು. ಎಷ್ಟು ಪ್ರಯತ್ನ ಪಟ್ಟರೂ ಲ್ಯಾಂಡಿಂಗ್ ಗೇರ್ ಓಪನ್ ಆಗುತ್ತಿಲ್ಲ. ಗಾಬರಿಯಾಯ್ತು ರೈನಾಗೆ.

- ಕಮಾನ್ ಯು ಚೀಟ್... ಅನ್ನುತ್ತಾ ಒಮ್ಮೆ ರಭಸವಾಗಿ ಅದನ್ನ ಒದ್ದಳು.-

ಅವಳು ಒದ್ದ ರಭಸಕ್ಕೆ ಲ್ಯಾಂಡಿ ಗೇರ್ ಕೆಳಗೆ ತಳ್ಳಲ್ಪಟ್ಟಿತು, ಆದರೆ ಮುಂದಿದ್ದ ಪರದೆಯ ಮೇಲೆ ರೆಡ್ ಅಲರ್ಟ್ ಮಿಂಚಿನ ವೇಗದಲ್ಲಿ ಪ್ರತ್ಯಕ್ಷವಾಯ್ತು.

- ಹೈ ಅಲರ್ಟ್ ಲ್ಯಾಂಡಿಗ್ ಸಿಸ್ಟೆಮ್ ಮ್ಯಾಲ್ ಫಂಕ್ಷನ್.-- ಜೊತೆಯಲ್ಲಿ ಬೀಪ್....... ಎನ್ನುವ ನಿರಂತರ ಅಲಾರಾಂ ಶಬ್ಧ..-

ಒಮ್ಮೆಗೆ ತಲೆ ಗಿರ್ರ್...ರ್..ರ್ರ್... ಎಂದಿತು ರೈನಾಗೆ. ಏನಾಗುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲಿ, ಕಂಟ್ರೋಲ್ ರೂಂನಿಂದ ಕರೆ ಅರುಚಿತು.

- ರೈನಾ... ಲ್ಯಾಂಡಿಂಗ್ ಪರ್ಮಿಷನ್ ಡಿಕ್ಲೈನ್ಡ್, ಟೆಕ್ ದ ಪ್ಲೇನ್ ಟು ಸ್ಕೈ.-

ಇತ್ತ ಕಡೆಯಿಂದ ಅಷ್ಟೆ ಅಬ್ಬರದಲ್ಲಿ ರೈನಾ ಕೂಗಿದಳು.

- ವೈ......??!!?-

-ನೋ ಡಿಲೆ, ಒಬೆ ದ ಆರ್ಡರ್, ಗೋಬ್ಯಾಕ್ ಟು ಸ್ಕೈ. ಓವರ್ ಅಂಡ್ ಔಟ್. -

- ಸ್ವಲ್ಪವೂ ತಡಮಾಡದೆ, ರೈನಾ ತ್ರೋಟಲ್ ವಾಲ್ವನ್ನು ಒಮ್ಮೆಗೆ ಹೆಚ್ಚಿಸಿದಳು, ಕೆಳಗೆ ಬೀಳುತ್ತಿದ್ದ ಯೋಕ್ ಹ್ಯಾಂಡಲನ್ನು ಮೇಲೆತ್ತಿ, ರಾಕೆಟ್ ಮೇಲೆ ಎತ್ತುವಂತೆ ಹಾರಿಸುತ್ತಾ ವಿಮಾನವನ್ನು ಮೇಲೆ ಒಯ್ದಳು. ಲ್ಯಾಂಡಿಂಗ್ ಗೇರ್ ದಡ್ ಎಂಬ ಶಬ್ದದೊಂದಿಗೆ ಹಿಂದೆ ಬಂತು. ಬೀಪ್.... ಶಬ್ದ ನಿಶಬ್ದವಾಯ್ತು.

ಇನ್ನೆರಡು ಇಂಚು ಕೆಳಗಿಳಿದಿದ್ದರೆ ವಿಮಾನದ ಹಿಂದಿನ ಚಕ್ರಗಳು ನೆಲ ತಾಗುತ್ತಿದ್ದವು, ಮುಂದಿನದು ದೊಡ್ಡ ಘೋರವೆನಿಸುತ್ತಿತ್ತು. ಅದಕ್ಕೆ ಕಾರಣ, ವಿಮಾನದ ಲ್ಯಾಂಡಿಂಗ್ ಸಮಯದಲ್ಲಿ ಮೊದಲು ಹಿಂದಿನ ಚಕ್ರಗಳು ನೆಲವನ್ನು ಸವರುತ್ತದೆ. ನಂತರ ಮುಂದಿನ ಮೂತಿಯ ಭಾಗದ ಚಕ್ರ ನೆಲ ಸೇರುತ್ತದೆ. ವಿಮಾನ ಕೆಳಗಿಳಿಯುವಾಗ ಕಂಟ್ರೋಲ್ ರೂಂನಿಂದ ಕಂಟ್ರೋಲರ್ ಗಮನಿಸಿದ್ದ ಮೂತಿಯಭಾಗದ ಚಕ್ರಗಳೆ ಇಲ್ಲ. ತಕ್ಷಣವೇ ನಿರ್ಧಾರ ಮಾಡಿ ವಿಮಾನವನ್ನು ಮತ್ತೆ ಮೇಲೇರುವಂತೆ ಸೂಚಿಸಿದ್ದ. ಇನ್ನು ಕೆಲವೆ ಕ್ಷಣ ಅತ್ತ ಇತ್ತ ಆಗಿದ್ದರೂ, ದೊಡ್ಡ ಅಪಘಾತ ವಾಗಿ ಹೋಗುತ್ತಿತ್ತು.

ವಿಮಾನದ ಒಳಗಿದ್ದ ಪ್ರಯಾಣಿಕರಿಗೆ ಆಶ್ಚರ್ಯ ಜೊತೆಗೆ ಗಾಬರಿ ಎರಡೂ ಒಂದೆ ಸಲಕ್ಕೆ ಆಯ್ತು. ಇದೇನು ವಿಮಾನ ಲ್ಯಾಂಡಿಂಗ್ ಆಗುವುದರಲ್ಲಿತ್ತು. ಇದ್ದಕ್ಕಿದ್ದ ಹಾಗೆ ಮತ್ತೆ ಮೇಲೇರಿ ಗಗನಕ್ಕೆ ತಲುಪಿದೆ. ಏನಾಯ್ತು....?? ಏಕೆ.....?!!?. ಗಾಬರಿಯಾಗಿದ್ದ ಎಲ್ಲರಿಗೂ ಸಮಾಧಾನ ಹೇಳುತ್ತಾ ಪರಿಚಾರಕಿ ಕವಿತಾ,

- ಟೆಕ್ನಿಕಲ್ ಪ್ರಾಬ್ಲಂ, ವೀ ವಿಲ್ ಲ್ಯಾಂಡ್ ಸೂನ್, ಪ್ಲೀಸ್ ಬೇರ್ ವಿತ್ ಅಸ್. - ಅನೌನ್ಸ್ ಮಾಡಿದಳು.

ನೇರ ಕಾಕ್ ಪಿಟ್ ಗೆ ಬಂದ ಕವಿತಾ ಗಾಬರಿಯಲ್ಲಿದ್ದ ರೈನಾಳನ್ನು ನೋಡಿ

-ಏನಾಯ್ತು ರೈನಾ..?? ವೈ ಯು ಹ್ಯಾವ್ ನಾಟ್ ಲ್ಯಾಂಡೆಡ್..??!!?? ಎನಿ ಪ್ರಾಬ್ಸ್...?? -

- ಯೆಸ್ ಕವಿತಾ ದೇರೀಸ್ ಸಂ ಪ್ರಾಬ್ಲೆಮ್ ಇನ್ ಲ್ಯಾಂಡಿಂಗ್ ಸಿಸ್ಟೆಮ್, ಲಾಸ್ಟ್ ಮೂಮೆಂಟ್ನಲ್ಲಿ ದೆ ಆರ್ಡರ್ಡ್ ಮೀ ಟು ಫ್ಲೈ ಬ್ಯಾಕ್ ಟು ಸ್ಕೈ. ಐ ಡೊಂಟ್ ನೋ ಎಕ್ಸಾಕ್ಟಿಲಿ. ವೈಟಿಂಗ್ ಫಾರ್ ಆನ್ಸರ್ -

- ಓ.. ಮೈ ಗಾಡ್.... ??!!...?- ಕವಿತಾಳ ಉದ್ಘಾರ. ಮುಂದೆ ಇಬ್ಬರೂ ಒಬ್ಬರಿಗೊಬ್ಬರು ನೋಡುತ್ತಾ ಫೇಲವ ವದನರಾದರು. ರೈನಾಳಿಗೆ ಇದು ಇಬ್ಬಂದಿ ತೊಡಕು. ಇತ್ತ ಸಹಾಯ ಹಸ್ತ ನೀಡಲು ವಿಮಾನದ ಒಳಗೆ ಕ್ಯಾಪ್ಟನ್ ಕೂಡ ಇಲ್ಲ, ಸಿಕ್ ಆಗಿ ಮಲಗಿದ್ದಾನೆ. ಜೊತೆಗೆ ಅವನಿಗೆ ಶೀಘ್ರವಾಗಿ ಮೆಡಿಕಲ್ ಹೆಲ್ಪ್ ಬೇಕು. ಅತ್ತ ಕೆಳಗಿಳಿಯಲು ವಿಮಾನ ಸಹಕರಿಸುತ್ತಿಲ್ಲ. ಕತ್ತರಿಯ ಅಲಗಿಗೆ ಸಿಕ್ಕ ಹಾಗೆ ಆಗಿದೆ. ಎತ್ತಲೂ ಆಡುವಂತಿಲ್ಲ ರೈನಾಳ ಪರಿಸ್ಥಿತಿ.

ಪ್ರಯಾಣಿಕರಿಗೆಲ್ಲ ಗಾಬರಿ. ಅವರ ಅರಿವಿಗೆ ಬಂತು, ಏನೋಹೆಚ್ಚು ಕಡಿಮೆಯಾಗಿದೆ ಎಂದು. ಇಷ್ಟಾದರೂ ೭೩ ಮತ್ತು ೭೪ ರ ಇಬ್ಬರು ಪ್ರಯಾಣಿಕರು ಗಂಭೀರವಾಗಿ ಕುಳಿತಿದ್ದರು.

ಇತ್ತ ಕಂಟ್ರೋಲ್ ರೂಂ ನಲ್ಲಿ ಆಗಲೆ ಉನ್ನತ ಅಧಿಕಾರಿಗಳು ಸೇರಿದ್ದಾರೆ. ಇಂಥಹ ಸೂಕ್ಷ್ಮ ಸಮಯದಲ್ಲಿ ಬೇಕಾದ ಎಲ್ಲಾ ಸಿದ್ದತೆಯನ್ನೂ ಮಾಡಿ, ಎಲ್ಲರೂ ಏರ್ ಪೋರ್‍ಟ್ ಕಂಟ್ರೋಲರ್ನ ಮುಂದಿನ ವಾಕ್ಯಕ್ಕಾಗಿ ಕಾಯುತ್ತಿದ್ದಾರೆ. ಎಲ್ಲವನ್ನೂ ಬಹು ಸೂಕ್ಷ್ಮವಾಗಿ ಯೋಚಿಸಿ ತರ್ಕ ಮಾಡಿಕೊಂಡು ನಿರ್ಧಾರಕ್ಕೆ ಬಂದ, ಅಧಿಕಾರಿ.

-ಕಾಲ್ ಸುಭಾಷ್ ಇಮ್ಮಿಡಿಯೆಟ್ಲೀ- ಎಂದ ತನ್ನ ಅಧಿಕಾರ ವಾಣಿಯಿಂದ.

ಅಲ್ಲಿದ್ದ ಎಲ್ಲರಿಗೂ ಗೊತ್ತು, ಸುಭಾಷ್ ಮತ್ತು ರೈನಾ ನಡುವಿನ ಪ್ರೀತಿಯ ಸಂಬಂಧ, ಜೊತೆಗೆ ಇಂಥಹ ಸಮಯದಲ್ಲಿ ಅವನ ಧ್ವನಿ ಕೇಳಿದರೆ ರೈನಾ ಕೂಡ ಗೆಲುವಾಗುತ್ತಾಳೆ, ಅಲ್ಲದೆ ಸುಭಾಷ್ ದು ಅತ್ಯಂತ ದೈರ್ಯವಂತ ಮನಸ್ಸು. ಕ್ಲಿಷ್ಠ ಸಮಯಕ್ಕೆ ತಕ್ಕ ನಿರ್ಧಾರದ ಜೊತೆಗೆ, ಅವನ ಧ್ವನಿಯಲ್ಲಿ, ಎದುರಿಗೆ ಮಾತನಾಡುವವರ ಮನಸ್ಸನ್ನು ಆಕರ್ಷಿಸಿ ಒಂದು ಹಿಡಿತಕ್ಕೆ ತರಬಲ್ಲ ಮತ್ತು ನಿಯಂತ್ರಿಸುವ ಶಕ್ತಿ ಇತ್ತು. ಇದನ್ನು ಅನುಭವದಿಂದ ಅರಿತಿದ್ದ
ಆ ಆಡಳಿತಾಧಿಕಾರಿ,ಸುಭಾಷ್ಗೆ ಸಾಧ್ಯವಾದಷ್ಟು ಬೇಗ ಬರಲು ಕರೆ ಕಳುಹಿಸಿದ್ದ

ಆಜ್ಞೆಯಾದ ೩೦ ನಿಮಿಷಗಳಲ್ಲಿ, ಸುಭಾಷ್ ತನ್ನ ಮುಖ್ಯ ಅಧಿಕಾರಿಯ ಎದುರು ನಿಂತಿದ್ದ.

ವಿವರಿಸಿದ ಪರಿಸ್ಥಿಯನ್ನು ಮನಗಂಡು, ಅವಲೋಖಿಸಿ ತಕ್ಷಣವೆ ಕಂಟ್ರೋಲರ್ ಸ್ಥಾನವನ್ನು ಹೊಂದಿ ಕುಳಿತವನೆ ಮೈಕ್ರೋಫೋನ್ ಕೈಯಲ್ಲಿ ಹಿಡಿದು,

- ಕಾಲಿಂಗ್ ಫ್ಲೈಟ್ ನಂಬರ್ ಏ ಐ ತ್ರೀಹಂಡ್ರೆಡ್ ಫಾರ್ಟಿಟು, ರೈನಾ ಕಂ ಇನ್, ದಿ ಈಸ್ ಸುಭಾಷ್ ಅಟ್ ಕಂಟ್ರೋಲ್ ರೂಂ, ರೈನಾ ಕಂಇನ್ ಫ್ಲೀಸ್ -

ಹೆಚ್ಚೂ ಕಡಿಮೆ ಒಂದು ಗಂಟೆಯಿಂದ ವಿಮಾನವನ್ನು ಅಂತರಿಕ್ಷದಲ್ಲಿ ಎರಡು ಮೂರು ಸುತ್ತು ಹಾಕಿಸಿದ್ದ ರೈನಾ, ಮುಂದಿನ ಸೂಚನೆಗಾಗಿ ಕಾಯುತ್ತಾ ತಳಮಳಗೊಂಡಿದ್ದಳು.
ಸುಭಾಷ್ ನ ಧ್ವನಿ ಕೇಳಿದ ತಕ್ಷಣ ರೈನಾ ಮೈಯಲ್ಲಿ ವಿದ್ಯುತ್ ಸಂಚರಿಸಿದಂತಾಯ್ತು.

- ಸುಭಾಷ್,... - ಮುಂದೆ ಮಾತು ಹೊರ್‍ಅಡಲಿಲ್ಲ ರೈನಾ ಗಂಟಲಿಂದ. ಕಣ್ಣುಗಳಲ್ಲಿ ನೀರಾಡಿತು.

ಪಕ್ಕದಲ್ಲೆ ಇದ್ದ ಕವಿತಾ ಅವಳ ಭುಜವನ್ನು ಒತ್ತಿ, ಸಮಾಧಾನ ಮಾಡಿಕೊಳ್ಳುವಂತೆ ಕಣ್ಸನ್ನೆ ಮಾಡಿ, ಮಾತನಾಡುವಂತೆ ಸೂಚಿಸಿದಳು.

ಅತ್ತಲಿಂದ ಸುಭಾಷ್ ಮತ್ತೆ ಕರೆಯುತ್ತಿದ್ದಾನೆ. - ರೈನಾ ಕಂ ಇನ್ ಪ್ಲೀಸ್ ದಿ ಇಸ್ ಸುಭಾಷ್ ಅಟ್ ಕಂಟ್ರೋಲ್ ರೂಂ, ವೇರ್ ಆರ್ ಯು ರೈನಾ ಕಂ ಇನ್ -

- ಸುಭಾಷ್ ನಾನು ರೈನಾ, ಏನಾಗ್ತಿದೆ..?? ಏಕೆ ಲ್ಯಾಂಡಿಂಗ್ ಕ್ಯಾನ್ಸೆಲ್ ಆಯ್ತು. ಇಲ್ಲಿ ಸಿಸ್ಟೆಂ ಮ್ಯಾಲ್ ಫಂಕ್ಷನ್ ಅಲರ್ಟ್ ಇದೆ. -

- ಯೆಸ್ ರೈನಾ ಯು ಆರ್ ಆಟ್ ಪ್ರಾಬ್ಲಂ. ಆದ್ರೆ ನಾನು ಹೇಳಿದ ಹಾಗೆ ಕೇಳು, ನಾನು ನಿನ್ನನ್ನು ಕೆಳಕ್ಕೆ ತರುತ್ತೇನೆ. ಯು ಆರ್ ಮೈ ಏಂಜಲ್ ನೋ, ಐ ಲವ್ ಯು ರೈನಾ -

ವಿಮಾನದಲ್ಲಿನ ತೊಂದರೆಯನ್ನು ನಿಧಾನವಾಗಿ ವಿವರಿಸಿ, ಅವಳಿಗೆ ದೈರ್ಯ ತುಂಬಿ, ಲ್ಯಾಂಡಿಂಗ್ ಮಾಡಲು ಸಿದ್ದಗೊಳಿಸಿದ.

- ರೈನಾ ನೌ ಜುಸ್ಟ್ ಫಾಲೋ ಮೈ ಇನುಸ್ಟ್ರಕಶನ್ಸ್, ಓಕೆ.. ಸ್ಟಾರ್ಟ್ ಡಂಪಿಂಗ್ ದ ಫ್ಯೂಯಲ್, ಅಂಡ್ ಕೀಪ್ ಇಟ್ ಫಾರ್ ೨ ಲ್ಯಾಂಡಿಂಗ್. ಬುಟ್ ಯು ವಿಲ್ ಡೂ ಇಟ್ ಇನ್ ಒನ್ ಟ್ರೈ ಐ ನೊ..-

- ಏನು ಫ್ಯೂಯಲ್ ಡಂಪ್ ಮಾಡ್ಲ...? ವೈ....??!!??, ಯು ವಾಂಟ್ ಮೀ ಟು ಡೈ..?-

- ನೋ ಡಿಯರ್.. ನಾನು ಹೇಳಿದ್ನಲ್ಲ ಜೆಸ್ಟ್ ಫಾಲೋ ಮೀ.-

- ಓ... ಕೆ.. ಸುಭಾಷ್ - ಅಂದವಳೆ, ಡಂಪ್ ಫ್ಯೂಯಲ್ ಬಟನನ್ನು ಒತ್ತಿ ಅಲ್ಪ ಪ್ರಮಾಣದ ಫ್ಯೂಯಲನ್ನು ಉಳಿಸಿಕೊಂಡು,

- ಓಕೆ ಸುಭಾಷ್ ಈಗ ಇರುವ ಫ್ಯೂಯಲ್ ಮಿನಿಮಮ್ ಲೆವೆಲ್ ಇದೆ, ವಾಟ್ ಶುಡ್ ಐ ಡು ನೆಕ್ಸ್ಟ್..?-

- ಗುಡ್, ನೇರವಾಗಿ ೮ ನೇ ರನ್ ವೇ ಬಳ ಬಾ, ಅಲ್ಲಿ ಲ್ಯಾಂಡ್ ಮಾಡು. ಹಾ..-

ಅವನು ಹೇಳಿದಂತೆ ೮ ನೇ ರನ್ ವೇ ಬಳಿ ವಿಮಾನವನ್ನು ತಂದ ರೈನಾ, ಸರಿಯಾದ ಸಮಯಕ್ಕೆ ಲ್ಯಾಂಡಿಗ್ ಗೇರ್ ಅಪ್ಲೈ ಮಾಡಿದಳು. ಮತ್ತದೆ ಕಿರಿಕಿರಿಯೊಂದಿಗೆ ತೆರೆದು ಕೊಂಡ ಗೇರ್, ಜೊತೆಗೆ ಬೀಪ್..... ಅಲರಾಂ...

-ಓ ಕೆ ರೈನಾ ಈಗ ಲ್ಯಾಂಡ್ ಆಗ್ತಾ ಇದೆ ಗೆಟ್ ರೆಡಿ, ನೆವರ್ ಅಲೊ ದ ಯೋಕ್ ಟು ಗೆಟ್ ಡೌನ್. ಕೀಪ್ ಹೋಲ್ಡಿಂಗ್ ಫರ್ಮ್ಲಿ ಅಪ್.-

ಹಿಂದಿನ ಎರಡು ಚಕ್ರಗಳು ಸರ್ರ್.. ಎಂದು ಉಜ್ಜುತ್ತಾ ಬೆಂಕಿಯ ಕಿಡಿಯೊಂದಿಗೆ ನೆಲದ ಮೇಲೆ ಹೆಜ್ಜೆಯೂರಿದವು. ಮುಂದಿನ ಮೂತಿ ಮೇಲೆತ್ತಿಕೊಂಡು ವಿಮಾನ ವೀಲಿ ಮಾಡುತ್ತಾ ಮುಂದೆ ಚಲಿಸುತ್ತಿದೆ.

-ಸುಭಾಷ್ ತುಂಬಾ ಪ್ರೆಶರ್ ಬರ್ತಿದೆ, ಐ ಕ್ಯಾನಾಟ್ ಹೋಲ್ಡ್ ಇಟ್ ಮೋರ್,-

- ನೋ... ರೈನಾ ಡೊನ್ಟ್ ಡ್ರಾಪ್, ಟ್ರಿಮ್ ದ ಬುಟನ್ಸ್ ಟು ಕಂಟ್ರೋಲ್ ದ ಪ್ರೆಶರ್, ಹೋಲ್ಡ್ ದ ಯ್ಯಾಂಗಲ್, ಡುಯಿಂಗ್ ಗುಡ್, ನವ್ ರೆಡ್ಯುಸ್ ದ ತ್ರೋಟಲ್ ಸ್ಲೋಲಿ, ಕೀಪ್ ದ ಯೋಕ್ ಅಪ್. ಕಾಮಾನ್ ಯು ಆರ್ ಡುಇಂಗ್ ಗುಡ್.-

ವಿಮಾನ ನಿಧಾನವಾಗುತ್ತಾ ರನ್ ವೇಯನ್ನು ದಾಟಿ ಮುಂದಿದ್ದ ಮರಳಿನಂಥಹ ನೆಲದ ಮೇಲೆ ಚಲಿಸುತ್ತಾ ವೇಗವನ್ನು ಕಳೆದು ಕೊಂಡಿತು.

- ಓಕೆ ರೈನಾ ನೌ ಡ್ರಾಪ್ ದ ಯೋಕ್ ಸ್ಲೋಲಿ ವೆರಿ ಸ್ಲೋಲಿ. ಅಪ್ಲೈ ರಿವರ್ಸ್ ತರ್ಸ್ಟ್, ಓಕೆ ನೌ ಪ್ರೆಸ್ ರಡರ್. ಗುಡ್ ರೈನಾ ವೆಲ್ ಡನ್. -

ನಿಧಾನವಾಗಿ ಯೋಕ್ ಹ್ಯಾಂಡಲನ್ನು ಕೆಳಗೆ ಬಿಡುತ್ತಾ ಹೋದಳು ರೈನಾ. ಚಕ್ರಗಳಿಲ್ಲದೆ ನೆಲಕ್ಕೆ ಉಜ್ಜುತಾ ಅನತಿ ದೂರ ಸಾಗಿ, ವೇಗ ಪೂರ್ತಿಯಾಗಿ ಕಳೆದುಕೊಂಡಿದ್ದ ವಿಮಾನ ಮುಂದಿನ ಮೂತಿಯ ಭಾಗ ಹೆಚ್ಚು ಕಡಿಮೆ ನೆಲವನ್ನು ಸೋಕುತ್ತಿದೆಯೇನೋ ಅನ್ನುವಂತೆ ನಿಂತು ಕೊಂಡಿತು. ಸ್ಟಾಂಡ್ ಬೈ ಮೋಡ್ ಗೆ ವಿಮಾನವನ್ನು ತಂದಳು ರೈನಾ.

- ವೆಲ್ ಡನ್ ರೈನಾ ಯು ಡಿಡ್ ಇಟ್. ಕಂಗ್ರಾಡುಲೇಶನ್ಸ್. ಐ ವಿಲ್ ಕಂ ದೇರ್. ಆಲ್ ಓವರ್. - ಕಂಟ್ರೋಲ್ ರೂಂ ನಿಂದ ಸುಭಾಷ್ ಕೂಗಿ ಹೇಳಿದ.

ರೈನಾ ಒಮ್ಮೆ ಧೀರ್ಘ ಶ್ವಾಸವನ್ನೆಳೆದು ಕಣ್ಣುಮುಚ್ಚಿ ಹಿಂದಕ್ಕೆ ಒರಗಿ ಕೆಲವು ಕ್ಷಣಗಳ ಹಿಂದಿನ ತನ್ನ ಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಿದ್ದಾಳೆ.

ರೈನಾಗೆ ನಿಜಕ್ಕೂ ಆಶ್ಚರ್ಯ. ಇದೆಲ್ಲಾ ಹೇಗಾಯ್ತು. ಅರೆ ವಿಮಾನ ಸ್ವಲ್ಪವೂ ತೊಂದರೆ ಇಲ್ಲದೆ ಲ್ಯಾಂಡ್ ಆಗಿದೆ. ಯಾರ ಜೀವಕ್ಕೂ ತೊಂದರೆಯಾಗುವುದಿರಲಿ ಯಾರಿಗೂ ಸ್ವಲ್ಪವೂ ಗಾಯವಾಗಿಲ್ಲ. ಓ.... ಮೈ ಗಾಡ್ ಇದು ನನ್ನಿಂದ ಸಾಧ್ಯವಾಯ್ತಾ..?!!?? ಅಬ್ಬಾ ಎಷ್ಟೊಂದು ಹೆದರಿದ್ದೆ. ಸುಭಾಷ್ ಇಸ್ ಗ್ರೇಟ್. ಅಷ್ಟು ಅಂದುಕೊಳ್ಳುವುದರಲ್ಲಿ ಸುಭಾಷ್ ಕಾಕ ಪೀಟ್ ನಲ್ಲಿ ಬಂದುನಿಂತಿದ್ದ. - ರೈನಾ... ಐ ಲವ್ ಯು ---

ಸುಭಾಷ್ ಧ್ವನಿ ಕೇಳಿ ಅತ್ಯಂತ ಸಂತೋಷದಿಂದ ಒಮ್ಮೆಗೆ ಅವನ ಬಳಿ ಬಂದು ಭರದಿಂದ ಅವನನ್ನು ತಬ್ಬಿ ಕೊಂಡಳು ರೈನಾ. ಅವಳ ಮನದ ದುಗುಡ, ಭಯ, ಏನನ್ನೊ ಸಾಧಿಸಿದ ಉತ್ಸಾಹ ಎಲ್ಲವೂ ಒಟ್ಟಿಗೆ ಸೇರಿ ಕಣ್ಣ ನೀರ ಹನಿಗಳಾಗಿ ಹೊರಗೆ ಹರಿದಿತ್ತು. ಅವಳನ್ನು ಸಂತೈಸುತ್ತಾ,

- ಓಕೆ ಕೂಲ್ ರೈನಾ.. ಕೂಲ್ ಇಟ್ಸ್ ಆಲ್ ಓವರ್..- ಸಮಾಧಾನ ಪಡಿಸಿದ ಸುಭಾಷ್.

ಇಷ್ಟಾಗುವುದರಲ್ಲಿ ಆಗಲೆ ಹೊರಗೆ ಆಂಬುಲೆನ್ಸ್, ಫ಼ೈರ್ ಎಂಜಿನ್ಗಳು ಮತ್ತಿತರ ಸಿಬ್ಬಂಧಿ ವಾಹನಗಳು ಎಚ್ಚರಿಕೆಯ ಗಂಟೆ ಬಾರಿಸುತ್ತಾ ವಿಮಾನದ ಬಳಿ ಬಂದಿದ್ದವು. ನಿತೀಶ್ನನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಭರದಿಂದ ಸಾಗಿತ್ತು. ಭಯದಲ್ಲಿದ್ದ ಪ್ರಯಾಣಿಕರೆಲ್ಲ ಜೀವ ಉಳಿದ ಸಂತಸದಲ್ಲಿ, ರೈನಾಳ ಬಗ್ಗೆ ಮತ್ತು ವಿಮಾನದ ಸಿಬ್ಬಂದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ಸಂಭ್ರಮದಿಂದ ಹೊರ ನಡೆಯುತ್ತಿದ್ದರು. ಇಷ್ಟೆಲ್ಲ ಸಂಭವಸಿದರೂ ೭೩ ಮತ್ತು ೭೪ ರ ಪ್ರಯಾಣಿಕರು ಮಾತ್ರ ಗಂಭೀರ ವದನರಾಗಿ ವಿಮಾನದಿಂದ ಇಳಿದು ತಮ್ಮ ಹೆಜ್ಜೆ ಹಾಕುತಿದ್ದರು....

ಮುಗಿಯಿತು.

-ರಾಮಮೋಹನ






 

Rating
No votes yet

Comments