ಕಥೆಯಾದಳು ಹುಡುಗಿ

ಕಥೆಯಾದಳು ಹುಡುಗಿ

ನನ್ನ ಪಾಡಿಗೆ ನಾನು ಇದ್ದೆ. ಸ್ನೇಹ ಜೀವಿಯಾಗಿ, ಎಲ್ಲ ತರಹದ ಸ್ನೇಹವಾ ನಾ ಕಂಡಿದ್ದೆ, ಆದರೆ ನೀ ಬಿಟ್ಟ ಛಾಪು ಅಳಿಸಲಾಗುತಿಲ್ಲ...
 ಇದೇನಿದು  ಅಂತ ನಾ ತಡಕಾಡಿದ್ದೆ ... ಆದರೆ ಉತ್ತರ ಇನ್ನೂ ಸಿಗಲಿಲ್ಲ....   
ಆರ್ಕುಟ್ಟ್  ಎಂಬ ಸಾಮಾಜಿಕ ಜಾಲ ಸ್ನೇಹಿತರು ಒಂದಾಗಿರಲಿ ಎಂದು ರಚಿಸಿದವನಿಗೆ ನಾನು ಧಾನ್ಯನಾಗಿರುವೆ. ಅವನಿಂದ ನಾನು ನನ್ನ ಸ್ನೇಹ ಇನ್ನೂ ಸಂತೋಷದಿಂದ ಇದ್ದೇವೆ.  ಅದೇನು ವಿಚಿತ್ರವೆಂದರೆ ಸ್ನೇಹ ಎಲ್ಲಿ ಹೇಗೆ  ಶುರುವಾಗುತ್ತೆ ಅಂತ ತಿಳಿಯೋಲ್ಲ  ಅಲ್ವೇ?  ಇದು ಎಲ್ಲರಿಗೂ ಗೊತ್ತು (ಇದ್ರಲ್ಲೇನಿದೆ ಹೊಸತು ಅಂದುಕೊಂಡಿರಾ) ಇಲ್ಲಿದೆ ಕೇಳಿ   

 
ಆರ್ಕುಟ್ನಲ್ಲಿರೋ ಒಕ್ಕೂಟಗಳು, ಅದ್ರಲ್ಲೂ ನಮ್ಮಂತಾ ಭಾಷಾಭಿಮನಿಗಳು ಮತ್ತು ಯುವ ಜೀವಿಗಳಿಗೆಂದೇ ಇದ್ದಂತಾ ಒಕ್ಕೂಟಗಳು .  ಅದ್ರಲ್ಲಿ ಇದ್ದದ್ದು ಎರಡು  ಎಳೆಗಳು  "ಕನ್ನಡ ಅಕ್ಷರಮಾಲೆ"  ಮತ್ತು " ಈ ಹಾಡು ನಿನಗಾಗಿ"  ಈ ಎಳೆಗಳನ್ನು ಯಾರು ಹುಟ್ಟು ಹಾಕಿದ್ದಾರೋ ತಿಳಿಯದು ಅಂತೂ ನಮ್ಮಿಬ್ಬರ ಸ್ನೇಹಕ್ಕೆ ನಾಂದಿಯಾಯಿತು.  ನೀ ಪ್ರತಿದಿನ ನನಗಾಗಿ ಕಾಯುತಿದ್ದೆಯೋ ಅಥವಾ ನಾನು ನಿನಗಾಗಿಯೋ ತಿಳಿಯದು,  ಆದರೆ ಅಲ್ಲಿ ನಮ್ಮಿಬ್ಬರ ನಡುವೆ ಹಾಡುಗಳ ಬಂಡಿ ಚಲಿಸುತಿದ್ದವು .  ಈ ಹಾಡುಗಳ ಮಧ್ಯೆ ಭಾವನೆಗಳು ಇದ್ದವೋ ಇಲ್ಲವೋ ತಿಳಿಯದು .  ಅದ್ಯಾರ ಕಣ್ಣು ಬಿತ್ತೋ ನಮ್ಮಿಬ್ಬರ ಈ ಗಾನ ಲಹರಿಯ ಮೇಲೆ .... ಆರ್ಕುಟ್ ಎಂಬ ಜಾಲಕ್ಕೆ ಕಡಿವಾಣ ಹಾಕಿ ಬಿಟ್ಟರು ನಮ್ಮಿಬರ ಕಛೇರಿಗಳಲ್ಲಿ...   
 
ಆದರೆ ನಮಗಾದ ದಿನಂಪ್ರತಿ ರೂಢಿ  ಒಬ್ಬರಿಗೊಬ್ಬರು ಹಾಡುತಿದ್ದ ಹಾಡುಗಳು ನಮ್ಮನ್ನು ಆರ್ಕುಟ್ ನಿಂದ ಹೊರಗಡೆ ಬಂದು ಸ್ನೇಹ ಮಾಡಲು ಪ್ರೇರಣೆ ನೀಡಿತು.  ಅಂದು ನೀನು ನನ್ನ ಈಮೇಲ್ ಐಡೀ ಹುಡುಕಿ ಮಾಡಿದ ಈಮೇಲ್ ನನಗೆ ನಮ್ಮ ಸ್ನೇಹದ ಬಗ್ಗೆ ನಂಬಿಕೆ ಹುಟ್ಟಿಸಿತು ... ಮೊದ ಮೊದಲು ಅಷ್ಟು ಮಾತನಾಡದಿದ್ದರು ದಿನ ಕಳೆದಂತೆ ನಾವು ಒಬ್ಬರಿಗೊಬ್ಬರು ಹತ್ತಿರವಾದೇವು.  ಮುಖ ನೋಡದೇ ಸ್ನೇಹ ಮಾಡಿದೆವು ಯೋಗಕ್ಷೇಮ ವಿಚಾರಣೆಯಿಂದ ಹಿಡಿದು ಕೌಟುಂಬಿಕ ವಿಚಾರಕ್ಕೆ ತಿರುಗಿತು ನಮ್ಮ ಮಾತುಗಳ ಲಹರಿ.

ಮುಂದುವರಿದ ಭಾಗ .......

ಅದೊಂದು ದಿನ ನೀನು ಇಸ್ಕ್ಕೋಂನ್  ಮಂದಿರಕ್ಕೆ ಹೋಗಿ ದೀಕ್ಷೆ ತಗೋತೀನಿ ಅಂತ ಹೇಳಿದೆ.  ನಿನ್ನ ಆ ನಿರ್ಧಾರ ನನ್ನ ಮನದಲ್ಲಿ ನೂರೆಂಟು ಪ್ರಶ್ನೆಗಳನ್ನ ಹುಟ್ಟಿಸಿತು. ಏನಾಯಿತು ಈ ಹುಡುಗಿಗೆ ಈ ಚಿಕ್ಕ ವಯಸಿನಲ್ಲಿ ದೀಕ್ಷೆಯ ಮಾತ್ಯಾಕೆ ಆಡುತಿರುವಳೆಂದು .  ನಿನ್ನ ಕೇಳಿದರೆ ನಿನ್ನ ಮನದಲ್ಲಿರೋ ನೋವನ್ನು ಹೆಚ್ಚು ಹೇಳದಂತಹ ಹಸು ಮಾನಸಿನ ಹೆಣ್ಣು ನೀನು .  ಆದರೂ ನಾನು ನನ್ನ ಹಟಮಾರಿ ಸ್ವಭಾವದಿಂದ ನಿನ್ನ ನೋವನ್ನು ಹೇಳುವಂತೆ ಮಾಡಿದಾಗ ತಿಳಿದ ವಿಚಾರಗಳು ಇನ್ನೂ ನನ್ನ ಹೃದಯವನ್ನು  ಕೊರೆಯುತ್ತವೆ.

ನಿನ್ನ ತಂದೆಯ ಸಾವಿಗೆ ನೀನೆ ಕಾರಣ ಎಂದು ದೂಷಿಸುವ ತಾಯಿ,  ಜವಾಬ್ದಾರಿ ಸ್ವೀಕರಿಸಲು ಸಿದ್ಧನಿಲ್ಲದ ತಮ್ಮ  ಪ್ರಪಂಚವನ್ನು ನೋಡಬೇಕಿರುವ ತಂಗಿ. ಇವರೆಲ್ಲರ ಪೋಷಣೆಯ ಭಾರ ನಿನಗೆ.  ಕೆಲಸಕ್ಕೆ ಹೋಗಲು ಬಸ್ಚಾರ್ಜ್  ಇಲ್ಲದೇ  ನೀನು ಎರೆಡು ಮೈಲಿ ಹೆಚ್ಚು ನಡೆದು ಮುಂದೆ ಹೋಗಿದ್ದು, ಕೆಲವೊಮ್ಮೆ  ಬೇರೆಯವರ ಮೇಲೆ ಸಾಲದ ಹೊರೆ ಹೊರೆಸಿ ದುಡಿಯಲು ಹೋಗುತಿದ್ದುದ್ದು  ನಿನ್ನ ಮನಸನ್ನು ಎಷ್ಟು ಕೊಲ್ಲುತಿತ್ತೋ?

ಪ್ರತಿದಿನ ಒಂದಿಲ್ಲೊಂದು ಕಾರಣದಿಂದ ತಿಂಡಿ ತಿನ್ನದೇ ಕೆಲಸಕ್ಕೆ  ಬರುತ್ತಿದೆ.  ಕೇಳಿದ್ರೆ ಹಾರಿ ಹೋಗುವ ಕಾರಣಗಳು ನಿನ್ನಲ್ಲಿ ಸದಾ ಸಿದ್ಧ. ಯಾಕಂದ್ರೆ ಮನೆಯವರ ಮೇಲೆ ನಾನು ಕೋಪ ಮಾಡಿಕೊಳ್ಳದಿರಲಿ ಎಂದು .  ಅದಿರಲಿ ಊಟವನ್ನಾದರೂ  ಸರಿಯಾಗಿ ಮಾಡುತಿದೆಯ ಅದು ಇಲ್ಲ. ಲಂಚ್ ಬಾಕ್ಸ್ ಇಲ್ಲದೇ ಬಂದಾಗ ಊಟ ಮಾಡಿರುವೆ ಎಂದು ಸುಳ್ಳು ಹೇಳುತಿದ್ದೆ , ಪದೇ ಪದೇ ಕೇಳಿದಾಗ ಹಣವಿಲ್ಲ ಎಂಬ  ನಿಜ ಹೇಳುತ್ತಿದೆ ನೀನು. ಹಾಗೂ ಹೀಗೂ ಮಾಡಿ ಊಟವಿಲ್ಲದೇ ನೀನು ಕಳೆದ ದಿನಗಳೆಷ್ಟೋ?

ನಿನ್ನ ನೋಡಿದರೆ ನನಗೆ ಇದದ್ದು ಸ್ನೇಹವೊ ಕರುಣೆಯೋ ಇನ್ನೂ ತಿಳಿಯದ ನನ್ನ ಜೀವನದ ಒಂದು ಜಟೀಲ ಪ್ರಶ್ನೆಯಾಗಿದೆ. ನೀನು ನನ್ನ ಜೊತೆ ಮಾತಾಡಿದರೆ ನಿನಗೆ ಸಂಕಟವಾಗುತಿತ್ತೋ ಅಥವಾ ಸಮಾಧಾನವಾಗುತಿತ್ತೋ ಇನ್ನೂ ಪ್ರಶ್ನೆನೇ ನನಗೆ . ನಿನ್ನ ಎಲ್ಲ ಸಮಸ್ಯೆಗಳಿಗೆ ನನ್ನಿಂದ ಸಮಾಧಾನ ಅಥವಾ ಸಹಾಯ ಸಿಕ್ಕಿದೆಯ ಗೊತ್ತಿಲ್ಲ, ಆದರೆ ನಾನು ನಿನ್ನ ಜೀವನವ ಅರಿತುಕೊಳ್ಳುವ ಪ್ರಯತ್ನ  ಮಾಡುತಲೇ ಇದ್ದೇ ಸದಾಕಾಲ.  ನೀನೊಮ್ಮೆ ಕೇಳಿದೆ "ನನ್ನನು ಕರೆದುಕೊಂಡು ಹೋಗ್ತೀಯ?" ಅಂತ, ಆಗ ನಾನು ಇದ್ದ ಪರಿಸ್ತಿತಿಯಲ್ಲಿ  ಅದು ಸಾಧ್ಯವಾಗದ ಮಾತಾಗಿತ್ತು. ಆದರೂ ಏನೋ ಧೈರ್ಯ ಮಾಡಿ ನಿನಗೆ ಸಹಾಯ ಮಾಡೋಣ ಎಂದು ಯೋಚಿಸಿದರೆ, ಅದಕ್ಕೆ ಪೂರಕವಾದ ಮಾಹಿತಿ ನಿನ್ನಿಂದ ಸಿಗುತಿರಲಿಲ್ಲ . ನೀನಿರುವ ತಾಣ ಯಾವುದುಎಂದು ಹೇಳಲಿಲ್ಲ ನೀನು ನನಗೆ.   

ಇಂದಿಗೂ ನೀನು ಸಿಕ್ಕರೆ ನೀನು ಬಯಸುವ ಎಲ್ಲ ಸ್ನೇಹ/ ಸಹಕಾರ ನೀಡಲು ನಾನು ಸದಾ ಸಿದ್ದ....

ನನಗೆ ತಿಳಿದಂತೆ ನಿನಗೆ ನಾನಲ್ಲದೇ ಬೇರೆಯವರ ಸ್ನೇಹ ಬೇಡವಾಗಿತ್ತು , ಆದರೂ ನೀನು ನನ್ನಿಂದ ಈಗ ದೂರ ಇರುವೆ, ಅದು ಏಕೆ ಎಂದು ನೀನಲ್ಲದೇ ಬೇರೆಯವರು ಉತ್ತರಿಸಲು ಸಾಧ್ಯವಿಲ್ಲ!!!!!!!!!!!!!!!!!

 


ನೀನೆಲ್ಲಿರುವೆ ಎಂದು ಒಂದೇ ಒಂದು ಸಾರಿ ಹೇಳು.... 


ಒಂದೇ ಒಂದು ಬಾರಿ ನನ್ನೆಡೆಗೆ ತಿರುಗಿ ಮಾತನಾಡು ...... 


 


ನಿನ್ನ ಸಂತಸವನ್ನೇ ಸದಾ ಬಯಸುವ ನಿನ್ನ ಅಮ್ಮು ಕಾದಿರುವ ನಿನ್ನ ಒಂದೇ ಒಂದು ಪ್ರತಿಕ್ರಿಯೆಗಾಗಿ..... 


 


 


ಮರಳಿ ಬಾರೆ

 

Rating
No votes yet

Comments