ಕಥೆ = ಆ ರಾತ್ರಿ
ಸಮಯ ರಾತ್ರಿ ೮.೩೦. ನಾನಿನ್ನೂ ಆಫೀ
ವಿಕ್ಕಿಗೆ ಹೊಸ ಹೊಸ ಜಾಗಗಳನ್ನು ನೋಡುವ ಹುಚ್ಚು ವಿಪರೀತ. ಒಂದು ಸಲ ನೋಡಿದ ಜಾಗಕ್ಕೆ ಮತ್ತೊಮ್ಮೆ ಹೋಗಲು ಒಪ್ಪುತ್ತಿರಲಿಲ್ಲ. ತಿಂಗಳಲ್ಲಿ ಒಂದು ಸಲ ಇಲ್ಲ ಎರಡು ಸಲ ಈ ರೀತಿ ಹೊಸ ಜಾಗಗಳಿಗೆ ಹೋಗುವುದು ಅವನಿಗೆ ಚಟವಾಗಿತ್ತು. ಎಷ್ಟೋ ಸಲ ಅವನ ಈ ಅಭ್ಯಾಸದಿಂದ ಹಲವಾರು ತೊಂದರೆಗಳನ್ನು ಅನುಭವಿಸಿದ್ದಾನೆ. ಕೆಲವು ಸಲ ತಾನು ಹುಡುಕಿ ಕೊಂಡು ಹೋದ ಜಾಗ ಸಿಗದೇ ದಾರಿ ತಪ್ಪಿ ಇನ್ನೆಲ್ಲೋ ಹೋಗಿ ಅಲ್ಲಿಂದ ಆಚೆ ಬಂದು ಮತ್ತೆಲ್ಲೋ ಹೋಗಿ ತೊಂದರೆಗಳನ್ನು ಅನುಭವಿಸಿದ್ದ. ಆದರೂ ಅದರಿಂದ ಅವನು ಪಾಠ ಕಲಿತಿರಲಿಲ್ಲ. ಏನಾದರೂ ಕೇಳಿದರೆ ಹೌದು ಆ ಜಾಗ ಸಿಗಲಿಲ್ಲ ಆದರೆ ಇನ್ನೊಂದು ಹೊಸ ಜಾಗ ಅಂತೂ ಕಂಡು ಹಿಡಿದೆನಲ್ಲ ಎಂದು ಕಿಸಿಯುತ್ತಿದ್ದ. ಇವನ ಈ ಹುಚ್ಚಾಟದಿಂದ ಹೆಚ್ಚು ಜನ (ಸ್ನೇಹಿತರು) ಇವನ ಜೊತೆ ಹೋಗಲು ಒಪ್ಪದೇ ಏನಾದರೂ ಕಾರಣ ಹೇಳಿ ತಪ್ಪಿಸಿ ಕೊಳ್ಳುತ್ತಿದ್ದರು. ಆದರೆ ನಾನು ವಿಕ್ಕಿ ಬಾಲ್ಯದಿಂದಲೂ ಸ್ನೇಹಿತರಾದ್ದರಿಂದ ನಾನು ಅವನಿಗೆ ಬೈದರೂ ಅವನು ನನಗೆ ಬೈದರೂ ಕೊನೆಗೆ ಹೋಗುತ್ತಿದ್ದದ್ದು ನಾನು ಅವನೇ. ಎಷ್ಟೋ ಸಲ ನಾನು ಹೋಗಲು ಆಗದಿದ್ದಾಗ ಅವನೊಬ್ಬನೇ ಹೋಗಿ ಬರುತ್ತಿದ್ದನು. ಈ ಬಾರಿ ನಾವು ಹೊರಟಿದ್ದು ಬೆಂಗಳೂರು ತಿರುಪತಿ ಹೈವೇ ಮಧ್ಯದಲ್ಲಿ ಇದ್ದ ಮದನಪಲ್ಲಿ ಬಳಿ ಇರುವ "ಹಾಸ್ಲೆ ಹಿಲ್ಲ್ಸ್" ಎಂಬ ಜಾಗಕ್ಕೆ. ಅವನು ಅಂತರ್ಜಾಲದಲ್ಲಿ ಹುಡುಕಿದ್ದ ಜಾಗ ಅಂತೆ ಅದು ಅದ್ಭುತವಾಗಿದೆ ಅದೂ ಇದು ಎಂದು ಏನೇನೋ ಹೇಳಿದ್ದ. ನಾನು ಆಯ್ತು ನಡಿಯಪ್ಪ ಎಂದು ಹೊರಟಿದ್ದೆವು. ವಾರಾಂತ್ಯವಾದ್ದರಿಂದ ಟ್ರಾಫಿಕ್ ದಾಟಿಕೊಂಡು ಕೃಷ್ಣರಾಜಪುರ ದಾಟುವ ಹೊತ್ತಿಗೆ ೧೧.೪೦ ಆಗಿತ್ತು. ಅಲ್ಲಿಂದ ಹೊಸ ರಸ್ತೆ ಅದ್ಭುತವಾಗಿತ್ತು. ಬೇಸಿಗೆ ಆದ್ದರಿಂದ ವಾತಾವರಣ ಅಷ್ಟೇನೂ ಹಿತವಾಗಿರದೆ ಕಾರಿನ ಕಿಟಕಿಗಳನ್ನು ತೆಗೆದೇ ಕುಳಿತಿದ್ದೆವು. ಕಾರು ೧೦೦-೧೨೦ ರ ವೇಗದಲ್ಲಿ ಹೋಗುತ್ತಿತ್ತು. ನಾನು ವಿಕ್ಕಿಗೆ ಹೇಳಿದೆ, ಲೋ ವಿಕ್ಕಿ ಯಾಕೋ ಇಷ್ಟು ಸ್ಪೀಡ್ ಈ ಸ್ಪೀಡ್ ಅಲ್ಲಿ ಹೋದರೆ ನಾಲ್ಕು ಗಂಟೆಗೆಲ್ಲ ಮದನಪಲ್ಲಿ ಸೇರಿ ಬಿಡುತ್ತೇವೆ. ಅಷ್ಟು ಬೇಗ ಹೋಗಿ ಅಲ್ಲಿ ಏನು ಮಾಡ್ತೀಯ. ಸ್ವಲ್ಪ ನಿಧಾನಕ್ಕೆ ಹೋಗು ಆರಾಮಾಗಿ ಹೋಗೋಣ ಎಂದಿದ್ದಕ್ಕೆ ತಲೆ ಆಡಿಸಿ ಕಾರಿನ ವೇಗವನ್ನು ೮೦ ಕ್ಕೆ ಇಳಿಸಿದ. ಸ್ವಲ್ಪ ದೂರ ಹೋದನಂತರ ನನಗೆ ಕಡಿಮೆ ಸ್ಪೀಡಿನಲ್ಲಿ ಓಡಿಸಿದರೆ ಮಜಾ ಇಲ್ಲ ಎಂದು ಮತ್ತೆ ವೇಗ ಹೆಚ್ಚಿಸಿದ. ಮಾತಾಡುತ್ತ ಆಡುತ್ತ ಕರ್ನಾಟಕದ ಗಡಿಗೆ ಬಂದು ತಲುಪಿದೆವು. ಸಮಯ ನೋಡಿದರೆ ೩.೦೦ ಗಂಟೆ ತೋರಿಸುತ್ತಿತ್ತು. ಲೋ ವಿಕ್ಕಿ ನನ್ನ ಮಾತು ಕೇಳಲ್ಲ. ಇಷ್ಟು ಬೇಗ ಗಡಿಗೆ ಬಂದು ಬಿಟ್ಟೆವು. ಇಲ್ಲಿಂದ ಇನ್ನೊಂದು ಘಂಟೆ ಅಷ್ಟೇ ಅಲ್ಲಿ ಹೋಗಿ ಏನು ಮಾಡೋದು. ಲೋ ಕಿಟ್ಟಿ ಮೊದಲು ಅಲ್ಲಿ ಹೋಗೋಣ ಆಮೇಲೆ ನೋಡೋಣ ಏನು ಮಾಡೋದು ಎಂದು ಗಾಡಿಯ ವೇಗ ಹೆಚ್ಚಿಸಿದ. ಸ್ವಲ್ಪ ದೂರ ಬರುವಷ್ಟರಲ್ಲಿ ಮದನಪಲ್ಲಿ ಎಡಗಡೆಗೆ ಎಂದು ಬಾಣದ ಚಿಹ್ನೆ ಇದ್ದ ಬೋರ್ಡ್ ಕಂಡಿತು. ವಿಕ್ಕಿ ಗಾಡಿಯ ವೇಗವನ್ನು ಕಡಿಮೆ ಮಾಡಿ ಎಡಕ್ಕೆ ತಿರುಗಿಸಲು ಮುಂದಾದ. ವಿಕ್ಕಿ ಇಷ್ಟು ಬೇಗ ಮದನಪಲ್ಲಿ ಬರಲ್ಲ ಕಣೋ ಇನ್ನು ಮುಂದೆ ಹೋಗಬೇಕು ಇದ್ಯಾವುದೋ ಬೇರೆ ಹಳ್ಳಿ ಇರಬೇಕು ಕಣೋ. ಇರು ಅಲ್ಯಾರೋ ಕೂತಿದ್ದಾರೆ ಅವರನ್ನೊಮ್ಮೆ ಕೇಳುತ್ತೇನೆ ಕಾರಿನಿದ ಇಳಿದು ಆ ವ್ಯಕ್ತಿಯ ಬಳಿ ಹೋಗಿ ಸ್ವಾಮಿ ಎಂದೆ. ಆ ವ್ಯಕ್ತಿ ತಲೆಯ ಮೇಲೊಂದು ಶಾಲು ಹೊದ್ದುಕೊಂಡು ತಲೆ ತಗ್ಗಿಸಿ ಕೊಂಡು ಕುಳಿತಿದ್ದ. ನನ್ನ ಧ್ವನಿ ಕೇಳಿ ತಲೆ ಮೇಲೆತ್ತಿದ ಅಷ್ಟೇ ಎರಡು ಕ್ಷಣ ಬೆಚ್ಚಿ ಹಿಂದಕ್ಕೆ ಹೆಜ್ಜೆ ಇಟ್ಟೆ. ಏಕೆಂದರೆ ಅವನ ಮುಖ ಅಷ್ಟು ವಿಕಾರವಾಗಿತ್ತು. ಅರ್ಧ ಮುಖ ಸುಟ್ಟು ಒಂದು ಕಣ್ಣೇ ಇರಲಿಲ್ಲ. ಹಾಗೆ ಕೆಳಗೆ ನೋಡಿದರೆ ಎರಡೂ ಕಾಲು ಇರಲಿಲ್ಲ. ಮೊಣಕಾಲಿನವರೆಗೆ ಮಾತ್ರ ಇತ್ತು. ನಾನು ಸ್ವಲ್ಪ ಸುಧಾರಿಸಿಕೊಂಡು ಮದನಪಲ್ಲಿಗೆ ಅಂದೇ ಅಷ್ಟೇ. ಅವನು ಕ್ಷಣಕಾಲ ನನ್ನ ಮುಖವನ್ನು ತನ್ನ ಒಕ್ಕಣ್ಣಿ ನಿಂದ ದಿಟ್ಟಿಸಿ ನೋಡಿ ಎಡಗಡೆ ಕೈ ತೋರಿಸುತ್ತ ಏನಪ್ಪಾ ಈಗ ಬರ್ತಾ ಇದ್ದೀಯ. ಎಲ್ಲ ಮ ಆ ವ್ಯಕ್ತಿ ಮನೆ ಒಳಗೆ ಕರೆದುಕೊಂಡು ಹೋಗಿ ಬನ್ನಿ ಮನೆ ಸಮಯ ಎಷ್ಟು ಏನು ಒಂದೂ ಅರಿವಿಲ್ಲದಂತೆ ನಿದ್ದೆ ಬಂದಿ ನಮಗೆ ಹೇಗಾಯಿತು ಎಂದರೆ..
Comments
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by kavinagaraj
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by makara
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by Chikku123
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by sathishnasa
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by RAMAMOHANA
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by RAMAMOHANA
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by ಗಣೇಶ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by venkatb83
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by Jayanth Ramachar
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by ಗಣೇಶ
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by venkatb83
ಉ: ಕಥೆ = ಆ ರಾತ್ರಿ
ಉ: ಕಥೆ = ಆ ರಾತ್ರಿ
In reply to ಉ: ಕಥೆ = ಆ ರಾತ್ರಿ by bhalle
ಉ: ಕಥೆ = ಆ ರಾತ್ರಿ