ಕನಸಕಾಣುವುದು ತಪ್ಪೇ
ಕನಸುಗಳಿಗೇನು ಕೊರತೆ
ನೂರಾರು ಸಾವಿರಾರು
ನನಸಾಗಲಿಲ್ಲವೆಂದು
ಮಾಡಲಾಗದಲ್ಲ ಕರಾರು
ಕನಸಕಾಣುವುದು ತಪ್ಪೇ
ಕನಸಿಲ್ಲದಜೀವನವದು ಸಪ್ಪೆ
ಕನಸಿಲ್ಲದ ಮನಸಿಗೆಲ್ಲಿದೆ ಆನಂದ
ಕನಸನರಸುವ ಬದುಕೇಚೆಂದ
ಇಂದುಬರಲಾರದು ನಾಳೆ ಅದು
ಒಮ್ಮೆ ತಿರುವಿದ ಪುಸ್ತಕದಹಾಳೆ
ಬದುಕ ಹೊತ್ತಗೆಯ ಪುಟಗಳ ತಿರುವಲಾಗದು ಮತ್ತೆ
ಬದುಕಿದ ಕ್ಷಣಗಳು ಹಿಂತಿರುಗಲಾರವು ಮತ್ತೆ
ಹೀಗಿರುವಾಗ
ಬದುಕಿನರ್ಥಕಳೆದುಕೊಂಡು ಬದುಕಿ ವಿಷದ ಸುಳಿಗಳಲ್ಲಿ
ಮುದುಕರಾದರೆಲ್ಲ ನಿಜದ ಜಗದಿ ಬದುಕುತ
ಮುದದಿ ಕನಸಿನರಮನೆಯಲಿ ಮೋದ ಪಡೆವುದನ್ನು ಬಿಟ್ಟು
ಇದುವೆಸತ್ಯವೆಂದು ನನಸ ಮನೆಯ ಹುಡುಕುತ
ಬಾಳಿನೆಲ್ಲ ಗೋಳುಮರೆತು ಹೋಳಿಯಾಡುವಂಥ ಕನಸ
ಕಾಣಬಾರದೇಕೆ ನಾವನೇಕವರ್ಣಗಳಲಿ
ನಾಳೆಯಂದವನ್ನು ಇಂದು ಕನಸಿನೂರಿನಲ್ಲಿ ಕಳೆದು
ನಾಳೆಬರುವಗೋಳ ಕಹಿಯ ಮರೆಯಬಾರದೆ
ಹಗಲುಗನಸು ಇರುಳುಗನಸು ಯಾವುದಾದರೇನುಮತ್ತೆ
ದುಗುಡ ಮರೆಸಿ ಮನದಿ ನಗುವ ತುಂಬಿತಲ್ಲದು
ಜಗದಿ ಸೊಗವ ಬೆರಸಿ ಹಗಲುಗನಸಕಾಣೆ ಹಳಿಯಲೇಕೆ
ಮನದ ರಾಜ್ಯಕೆಲ್ಲಿಯನಿರ್ಬಂಧ ವಿರುವುದು
ಕನಸ ಕಂಡು ಸುಖಿಸಿರೆಂದುವಿಧಿಯು ಮನುಜಗಿತ್ತವರವು
ಕನಸಕಾಂಬ ಶಕ್ತಿ ಮನುಜಗೊಬ್ಬಗಲ್ಲವೇ
ಮೋಸಕಪಟ ಹಾಸುಹೊಕ್ಕು ಆಗಿ ಇರುವ ನನಸಿಗಿಂತ
ಕನಸಿನಲ್ಲಿ ಬಯಕೆಯನನುಭವಿಸಬಾರದೇ
ನೋವು ನಲಿವು ಬಾಳಿನಲ್ಲಿ ಹಗಲು ಇರುಳಿನಂತೆ ಬರಲು
ಕಾವುದೇಕೆ ನಲಿವಿಗಾಗಿ ಕನಸ ಕಾಣದೇ
ನೋವ ಮರೆತು ಕಣ್ಣ ಮುಚ್ಚಿ ಕನಸಿನೊಡನೆ ಸರಸವಾಡೆ
ಬೇವಿನಂಥ ಕಹಿಯಕೂಡ ಮರೆಸಿಬಿಡುವುದು
ಮೀಟಿ ಮಧುರ ಭಾವನೆಗಳ ಆಶೆಗಳನು ಪೂರೈಸಿರಿ
ಕೋಟಿಗಳಿಸೆ ಕನಸಿನಲ್ಲಿ ತೆರಿಗೆಯಿಲ್ಲವು
ನನಸಲಿರಲಿ ಸೋಲುಗೆಲುವು ಕನಸಲಿಹುದು ಗೆಲುವು ಮಾತ್ರ
ಕನಸ ನನಸಿದೆಂದು ತಿಳಿದು ಸುಖಿಸಿರೆಲ್ಲರು
ತಿರುಕ ಕಂಡ ಕನಸಿನಿಂದ ಹಿಟ್ಟಮಡಕೆಯೊಡೆದರೇನು?
ತಿರುಕರಾಜನಾಗಿ ಕ್ಷಣವು ಮೆರೆಯಲಿಲ್ಲವೇ
ಮರುಕವೇಕೆ ತಿರುಗಿ ಭಿಕ್ಷೆಬೇಡಿ ಹಿಟ್ಟ ಪಡೆಯಬಹುದು
ತಿರುಕ ಕನಸ ಸಿರಿಯ ಪಡೆದು ಸುಖಿಸಲಿಲ್ಲವೇ?
ಕರ್ಮಮಾಡಿ ಫಲದ ಆಶೆಯನ್ನು ಬಿಟ್ಟು ಕನಸಕಂಡು
ಮರ್ಮವರಿತು ಸುಖದ ಬದುಕ ನೆಡೆಸಬಾರದೇ
ಧರ್ಮಪೂರ್ಣ ಕನಸುಗಳನು ಕಂಡು ದಿಟದಿ ಸುಖಿಸುವಂಥ
ನಿರ್ಮಲವಹ ಬದುಕ ನಾವು ಹೊಂದಬಾರದೆ
Rating
Comments
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by raghumuliya
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by partha1059
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by santhosh_87
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by Chikku123
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by ksraghavendranavada
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by ksraghavendranavada
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by asuhegde
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by RAMAMOHANA
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by ನಂದೀಶ್ ಬಂಕೇನಹಳ್ಳಿ
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by saraswathichandrasmo
ಉ: ಕನಸಕಾಣುವುದು ತಪ್ಪೇ
ಉ: ಕನಸಕಾಣುವುದು ತಪ್ಪೇ
In reply to ಉ: ಕನಸಕಾಣುವುದು ತಪ್ಪೇ by kavinagaraj
ಉ: ಕನಸಕಾಣುವುದು ತಪ್ಪೇ