ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು
ಈವರೆಗೆ ನನ್ನ ಹೊಸ ಆವೃತಿಯ ಕಂಪ್ಯೂಟರ್ ಪುಸ್ತಕದ ಬರವಣಿಗೆ ಮತ್ತು ಪ್ರಕಟಣೆಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ನನಗೆ ಇಲ್ಲಿ ಬರೆಯಲಾಗಿರಲಿಲ್ಲ. ನನ್ನ ಕನ್ನಡ ಕಂಪ್ಯೂಟರ್ ಪುಸ್ತಕಗಳ ಬಗ್ಗೆ ಸಂಪದ ಓದುಗರಲ್ಲಿ ಹೇಳಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೀಗ ಒದಗಿ ಬಂದಿದೆ. ಯಾಕೆಂದರೆ, ಎಲ್ಲಿಂದಲೋ ನನ್ನ ಕಂಪ್ಯೂಟರ್ ಪುಸ್ತಕಗಳ ಬಗ್ಗೆ ಹಿರಿಯರು ಕಿರಿಯರೆನ್ನದೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಅವು ತುಂಬ ಉಪಯುಕ್ತವಾಗಿವೆ ಎಂದು ಹೇಳುವಾಗ ನಾನು ಪಟ್ಟ ಪರಿಶ್ರಮ ಸಾರ್ಥಕವಾಗಿದೆ ಎನಿಸುತ್ತದೆ. ಆದ್ದರಿಂದ, ಕನ್ನಡದಲ್ಲಿ ಕಂಪ್ಯೂಟರ್ ಕಲಿಯುವವರಿಗೆ ಮತ್ತು ಕಲಿಸುವ ಶಿಕ್ಷಕರಿಗೆ ಅಪರೂಪವೆನಿಸಿರುವ ಮತ್ತು ಹೆಚ್ಚು ಬೇಡಿಕೆಯಲ್ಲಿರುವ ನನ್ನ ಈ 3 ಪುಸ್ತಕಗಳ ಪರಿಚಯ ಸಂಪದ ಓದುಗರಿಗೆ ಮಾಡಿಕೊಡುತ್ತಿದ್ದೇನೆ-
1.ವಿನ್ ಕಂಪ್ಯೂಟರ್ (Software Made Simple- Revised 6th edition
2.ವಿನ್ ಯುವರ್ PC (Hardware Made Easy)-Revised 3rd editon
3.ಮೇಜಿನ ಮೇಲಿನ ಪ್ರಕಾಶನ (D.T.P.Made Easy)-Revised 3rd edition
ಕಂಪ್ಯೂಟರ್ ಶಿಕ್ಷಣದಲ್ಲಿಯೆ ಅತ್ಯಂತ ಸರಳ ಹಾಗೂ ಸುಲಭ ವಿಧಾನಗಳನ್ನು ಹೊಂದಿರುವ ಈ ಮೊರು ಪುಸ್ತಕಗಳು ಪ್ರಾಥಮಿಕ ಕಲಿಕೆಯಲ್ಲಿ ಇರಬಹುದಾದ ಎಲ್ಲ ಇತಿಮಿತಿಗಳನ್ನೂ ಮೀರಿ ನಿಲ್ಲುತ್ತವೆ. ಕಂಪ್ಯೂಟರ್ ಶಿಕ್ಷಕರಿಗೆ ಹಾಗೂ
ಕಂಪ್ಯೂಟರ್ ಬಗ್ಗೆ ಏನೇನೂ ಗೊತ್ತಿಲ್ಲದವರಿಗೂ ಮನೆಯಲ್ಲೇ ಕುಳಿತು ಸ್ವತಃ ಕಲಿಯಲು ನೆರವಾಗುತ್ತವೆ.
ಅಷ್ಟೇ ಅಲ್ಲ;ಕಲಿಕೆಯಲ್ಲಿ ನಿಮಗೆ ಔದ್ಯೋಗಿಕವಾಗಿಯೊ ಬಹಳ ಉಪಯುಕ್ತವಾಗಿವೆ.
ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃ ಭಾಷೆಯಲ್ಲೇ ಆಗ ಬೇಕು ನಿಜ.
ಆದರೆ,ಇಂಗ್ಷೀಷ್ ಜತೆಗಿರಬೇಕು ಎಂಬ ಮಾತೂ ನಿಜವೇ ಆಗಿದೆಯಲ್ಲ...
ಅಂತೆಯೆ ಇದೀಗ ಕನ್ನಡದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಈ ಮೊರು ಕಂಪ್ಯೂಟರ್ ಪುಸ್ತಕಗಳು -
ನಾಡು ನುಡಿಗೆ ಮೀಸಲಾದ
ದೇಶ ಭಾಷೆಗೆ ಮಿಗಿಲಾದ
ಜ್ಞಾನ ದಾಹಿಗಳಿಗೆ,
ಅರ್ಪಣೆಯಾಗಿವೆ.
ಪರಿಚಯ ಮತ್ತು ಹೆಚ್ಚಿನ ಮಾಹಿತಿಗೆ [http://sites.google.com/site/ritershivaram|ಇಲ್ಲಿ ಕ್ಲಿಕ್ಕಿಸಿ]
Comments
ಉ: ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು
In reply to ಉ: ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು by hpn
ಉ: ಕನ್ನಡದಲ್ಲಿ ಅತ್ಯಧಿಕ ಬೇಡಿಕೆಯಲ್ಲಿರುವ ಕಂಪ್ಯೂಟರ್ ಪುಸ್ತಕಗಳು