ಕನ್ನಡದಲ್ಲಿ ಎಲ್ಲಾ ಅಕ್ಷರ ಸಾಹಿತ್ಯ, ಗೂಗಲ್ ಟ್ರಾನ್ಸ್ಲೇಟ್ ಮತ್ತು ನಾವು

ಕನ್ನಡದಲ್ಲಿ ಎಲ್ಲಾ ಅಕ್ಷರ ಸಾಹಿತ್ಯ, ಗೂಗಲ್ ಟ್ರಾನ್ಸ್ಲೇಟ್ ಮತ್ತು ನಾವು

ನಮ್ಮ ಪಾಲಿಗೆ ಹೆಚ್ಚಿನ ಜ್ಞಾನ ಮತ್ತು ಮಾಹಿತಿ ಇಂಟರ್ನೆಟ್ ನಲ್ಲಿ ಮತ್ತು ಮುದ್ರಣ ರೂಪದಲ್ಲಿ ಇಂಗ್ಲಿಷ್ ಮತ್ತು ಮತ್ತಿತರ ಭಾಷೆಗಳಲ್ಲಿ ಇದೆ. ಅದು ನಮಗೆ ಮತ್ತು ನಿಮಗೆ ದೊರಕುವುದು ಹೇಗೆ ? ಅದು ಅನುವಾದದ ಮೂಲಕ ತಾನೇ? ಅನುವಾದ ಮಾಡಬೇಕಾದವರು ಯಾರು? ಅವರಿಗೆ ಎರಡೂ ಭಾಷೆಗಳು ಚೆನ್ನಾಗಿ ಬರುತ್ತಿರಬೇಕು ಅಥವಾ ಕನಿಷ್ಠ ಚೆನ್ನಾಗಿರದಿದ್ದರೂ ಒಟ್ಟು ಬರುತ್ತಿರಬೇಕು (ತಕ್ಕ ಮಟ್ಟಿಗೆ ಅನುವಾದ ಆದರೂ ಪರವಾಗಿಲ್ಲ ಅನ್ನಿ) ಅಲ್ಲವೇ? ಅವರು ತಮ್ಮ ಸಮಯವನ್ನು ಬಳಸಿ ಮಾಡಿದ ಅನುವಾದ ನಮಗೆ ಸಿಗಬೇಕು ತಾನೇ ? ಅದು ಹೇಗೆ ?

ಈಗಿನ ಅಂತರ್ಜಾಲ ಯುಗದಲ್ಲಿ ರಾಶಿ ರಾಶಿ ಮಾಹಿತಿ ಈಗ ಅಂತರ್ಜಾಲದಲ್ಲಿ ಮೊಬೈಲ್ ಮೂಲಕ ಸಿಗುತ್ತಿದೆ. ಅದು ಏನೋ ಸರಿ. ಮತ್ತೆ ಅನುವಾದ ? ಅದು ಗೂಗಲ್ ಟ್ರಾನ್ಸ್ಲೇಷನ್ ಮೂಲಕ ಲಭ್ಯವಾಗಿದೆ.

ನಿಮ್ಮ ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ಹಾಕಿಕೊಂಡಿದ್ದರೆ ಕೆಲವೊಂದು ಸೆಟ್ಟಿಂಗ್ಸ್ ಮೂಲಕ ಇಡೀ ಕನ್ನಡದಲ್ಲಿಯೇ ನೋಡಬಹುದು ! ನಾನಂತೂ ಈಗೀಗ ಫ್ರೆಂಟ್ ಲೈನ್, ಇಂಡಿಯಾ ಟುಡೇ , ಎನ್ ಡಿಟಿವಿ ಮುಂತಾದ ಸುದ್ದಿ ತಾಣಗಳನ್ನು ಈ ರೀತಿಯಲ್ಲಿ ಕನ್ನಡದಲ್ಲಿಯೇ ಓದುತ್ತಿದ್ದೇನೆ! ( ಅನುವಾದ ಸರಿಯಾಗಿಲ್ಲದೆ ಇದ್ದು ಸಂಗತಿ ಒಂದಲ್ಲ ಗೊಂದಲಮಯವಾಗಿದ್ದ ರೆ ಅಷ್ಟೇ ಏಕೆ ಗೂಗಲ್ ಟ್ರಾನ್ಸ್ಲೇಟ್ ಆಪ್ ಹಾಕಿಕೊಂಡರೆ ಬಹುತೇಕ ಯಾವುದೇ ಭಾಷೆಯ ಯಾವುದೇ ಬರಹವನ್ನು ಕನ್ನಡದ ಮೂಲಕವೇ ತಿಳಿದುಕೊಳ್ಳಬಹುದು . ಇದು ನಾವು ಕರ್ನಾಟಕದಿಂದ ಹೊರಗೆ ಹೋದಾಗ ಅಥವಾ ಭಾರತದಿಂದ ಹೊರಗೆ ಹೋದಾಗ ನಮಗೆ ಸಹಾಯ ಮಾಡುತ್ತದೆ. ಅಷ್ಟೇ ಏಕೆ? ಯಾವುದೇ ಮುದ್ರಿತ ಬರಹವನ್ನು ಕನ್ನಡದಲ್ಲಿ ಓದಬಹುದು. ಟಿವಿಯಲ್ಲಿ ಕೆಳಗಡೆ ಸರಿದು ಹೋಗುತ್ತಿರುವ ಮಾಹಿತಿಯನ್ನು ಕೂಡ ಅದು ಕನ್ನಡಕ್ಕೆ ಲೈವ್ ಆಗಿ ಅನುವಾದ ಮಾಡುತ್ತದೆ!

ಇದನ್ನು ಯಂತ್ರ ಮಾಡುವುದಾದರೂ ಅಷ್ಟೊಂದು ಸರಿಯಾಗಿರುವುದಿಲ್ಲ. ಕೆಲವೊಮ್ಮೆ ತಪ್ಪಾಗಿಯೂ, ತುಂಬಾ ಹಾಸ್ಯಾಸ್ಪದ ಆಗಿರುತ್ತದೆ . ಆದರೆ ಅದು ಸುಧಾರಿಸುತ್ತಿದೆ ಎಂಬುದು ನಿಜ. ಅದಕ್ಕೆ ನಾವು ನಮ್ಮ ಕಾಣಿಕೆ ಕೊಡಬಹುದು.

ಎರಡು ರೀತಿಯಾಗಿ ಈ ಕೆಲಸ ಮಾಡಬಹುದು

ಒಂದು - https://translate.google.com/community?source=web#en/kn ಈ ತಾಣಕ್ಕೆ ಹೋಗಿ ಗೂಗಲ್ ಕೊಡುವ ಶಬ್ದ ಅಥವಾ ವಾಕ್ಯ ಭಾಗಗಳು ಅಥವಾ ವಾಕ್ಯ ಗಳ ಅನುವಾದವನ್ನು ಮಾಡುವುದು. ಅಲ್ಲಿ ನೀವು ಈ ರೀತಿ ಮುಂದುವರೆದರೆ ಕಾಲಕಾಲಕ್ಕೆ ನಿಮ್ಮ ಸಾಧನೆಯ ಲೆಕ್ಕ ಮತ್ತು ಅದಕ್ಕೆ ಶಹಭಾಸ್ ಗಿರಿ ಸಿಗುತ್ತದೆ.

ಇನ್ನೊಂದು ರೀತಿ - ಗೂಗಲ್ ಟ್ರಾನ್ಸ್ಲೇಟ್ ಅನ್ನು ಬಳಸುವುದು . ಅದಕ್ಕಾಗಿ https://translate.google.com ತಾಣಕ್ಕೆ ಹೋಗಿ ಅದರಲ್ಲಿ ನಿಮಗೆ ಹಾಸ್ಯಾಸ್ಪದ ಎಂದು ತೋರುತ್ತಿರುವ ಗೂಗಲ್ ಟ್ರಾನ್ಸ್ ಲೇಟರ್ ನ ಮೂಲ ಇಂಗ್ಲಿಷ್ ಶಬ್ದ ಅಥವಾ ವಾಕ್ಯ ಭಾಗಗಳು ಅಥವಾ ವಾಕ್ಯ ಗಳನ್ನು ಕೊಟ್ಟು ಅದರ ಅನುವಾದವು ಇದು ತಪ್ಪಾಗಿ ಬರುತ್ತಿದ್ದರೆ ಅಲ್ಲಿರುವ suggest an edit ಆಯ್ಕೆಯನ್ನು ಬಳಸಿ ಸರಿಯಾದ ಅನುವಾದ ಮಾಡಿಕೊಡಬಹುದು. ಇದರಿಂದ ಅನುವಾದ ಮುಂದೆ ಹೆಚ್ಚು ಹೆಚ್ಚು ಸರಿಯಾಗಬಹುದು.

ಇದು ಸದ್ಯಕ್ಕೆ ನಾನು ತೊಡಗಿಕೊಂಡಿರುವ ಕಾರ್ಯ.

ಇದರಿಂದ ಗೂಗಲ್ ಗೆ ನಾವು ಲಾಭ ಮಾಡಿಕೊಡುತ್ತಿರಬಹುದು , ನಿಜ. ಆದರೆ ಕನ್ನಡಕ್ಕೆ, ಕನ್ನಡಿಗರಿಗೆ ಲಾಭ ಆಗುವುದು ಖಂಡಿತ ಅಂತ ನನ್ನ ಅನಿಸಿಕೆ.

ನೀವು ಕೂಡ ಸೇರಿಕೊಳ್ಳಬಹುದು.

Rating
No votes yet