ಕನ್ನಡದಲ್ಲೇ ಪ್ರೋಗ್ರಾಮ್ಮಿಂಗ್ ಮಾಡಿ!

ಕನ್ನಡದಲ್ಲೇ ಪ್ರೋಗ್ರಾಮ್ಮಿಂಗ್ ಮಾಡಿ!

ನಮಸ್ಕಾರ,

ನಾನು ಹಲವು ವರ್ಷಗಳ ಹಿಂದೆಯೇ ಲೋಗೋ ಎಂಬ ಗಣಕ ಕ್ರಮವಿಧಿ ರಚನೆಯ ತಂತ್ರಾಶವನ್ನು ಕನ್ನಡೀಕರಿಸಿದ್ದೆ. ಲೋಗೋ ಎಂಬುದು ತುಂಬ ಜತ್ಪ್ರಸಿದ್ಧವಾದ ತಂತ್ರಾಂಶ. 8ರಿಂದ 14 ವರ್ಷ ಪ್ರಾಯದ ಮಕ್ಕಳು ಪ್ರೋಗ್ರಾಮ್ಮಿಂಗ್ ಕಲಿಯಲು ಇದನ್ನು ಬಳಸುತ್ತಾರೆ. ಇದರ ಪ್ರಾತ್ಯಕ್ಷಿಕೆಯನ್ನು ನೋಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರು ಈ ತಂತ್ರಾಂಶವನ್ನು ಕರ್ನಾಟಕ ಸರಕಾರದ ಕನ್ನಡೆ ಕಂಪ್ಯೂಟರ್ ಕ್ರಿಯಾ ಯೋಜನೆಯಲ್ಲಿ ಸೇರಿಸಿಕೊಂಡಿದ್ದರು. ಕನ್ನಡ ಗಣಕ ಲೋಕದಲ್ಲಿ ಹಲವು ಬಿರುಗಾಳಿಗಳು ಬೀಸಿ, ಏನೇನೆಲ್ಲಾ ಆಗಿ ಹೋದವು. ಈ ತಂತ್ರಾಶವನ್ನು ಇದುತನಕ ಸರಕಾರ ಸ್ವೀಕರಿಸಿ ಶಾಲೆಗಳಿಗೆ ನೀಡಲಿಲ್ಲ. ಈಗ ನಾನು ಅದನ್ನು ಅಂತರಜಾಲದ ಮೂಲಕ ನೀಡಲು ತೀರ್ಮಾನಿಸಿದ್ದೇನೆ. ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿ, ಬಳಸಿ, ನನಗೆ ನಿಮ್ಮ ಸಲಹೆ ನೀಡಿರಿ. ಹಾಗೆಯೇ ದೇಣಿಗೆಯನ್ನೂ ನೀಡಬಹುದು :-). ಹೆಚ್ಚಿನ ಮಾಹಿತಿಗಳು ನನ್ನ [http://vishvakannada.com/KannadaLogo|ಅಂತರಜಾಲ ತಾಣದಲ್ಲಿ] ಲಭ್ಯವಿವೆ.

ಸಿಗೋಣ,
ಪವನಜ

Rating
No votes yet

Comments