ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ

ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ

ಗೂಗಲ್ ಅರ್ಥ್ ಬಗ್ಗೆ ನನ್ನ ಲೇಖನ ಎರಡು ವಾರಗಳ ಹಿಂದಿನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸಂಪದ ಓದುಗರಲ್ಲಿ ಹಲವರು ಅದನ್ನು ಓದಿದ್ದೀರಾ ಮತ್ತು ಮೆಚ್ಚಿಕೊಂಡಿದ್ದೀರಾ. ಈಗ ನಾನು ಹೇಳ ಹೊರಟಿರುವುದು ಆ ಲೇಖನದ ಬಗ್ಗೆ ಅಲ್ಲ. ಸಾಮಾನ್ಯವಾಗಿ ಕನ್ನಡ ಪತ್ರಿಕೆಗಳು (ಕನ್ನಡಿಗರು ಕೂಡ) ಹಿಂಬಾಲಕರಾಗಿರುವುದೇ ಹೆಚ್ಚು. ವಿಜ್ಞಾನ ತಂತ್ರಜ್ಞಾನದ ಲೇಖನಗಳ ವಿಷಯದಲ್ಲಂತೂ ಇದು ಇನ್ನೂ ಹೆಚ್ಚು. ಅದು ಹೇಗೆಂದರೆ ಒಂದು ಹೊಸ ವಿಷಯದ ಬಗ್ಗೆ ಇಂಗ್ಲೀಶಿನ ಎಲ್ಲ ಪತ್ರಿಕೆಗಳಲ್ಲಿ ಲೇಖನ ಬಂದ ನಂತರವೇ ಕನ್ನಡ ಪತ್ರಿಕೆಗಳಲ್ಲಿ ಲೇಖನ ಬರುವುದು. ಆದರೆ ಗೂಗಲ್ ಅರ್ಥ್ ವಿಷಯದಲ್ಲಿ ಇದು ತಿರುವುಮುರುವಾಗಿದೆ. ಇಂದಿನ (೨೧/೯/೨೦೦೫) ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಗೂಗಲ್ ಅರ್ಥ್ ಬಗ್ಗೆ ಚಿಕ್ಕದಾಗಿ ಒಂದು ಲೇಖನ ಬಂದಿದೆ. ಅಂದರೆ ಅವರು ಕನ್ನಡ ಪತ್ರಿಕೆಗಿಂತ ಎರಡು ವಾರ ಹಿಂದೆ ಇದ್ದಾರೆ ಎಂದಾಯಿತು. ಇದು ಹೆಮ್ಮೆಯ ವಿಷಯವಲ್ಲವೇ? ಏನಂತೀರಾ?

ಸಿಗೋಣ,
ಪವನಜ

Rating
No votes yet

Comments