ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

Saw this compact and wonderful post ..

...... authored by Pratap Simha, Vijaya karnataka

ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇನಾ ?

ಅಂದು ಬಸ್ಸಿನಲ್ಲಿ ಹೋಗುತ್ತಿದ್ದೆ. ಲೋಕಾಭಿರಾಮವಾಗಿ ಪರಿಚಯವಾದ ನನ್ನ ಪಕ್ಕದ ಸಹಪ್ರಯಾಣಿಕ ಒಬ್ಬರೊಡನೆ ಹರಟೆ ಶುರುವಾಯಿತು. ಅದೂ ಇದೂ ಮಾತನಾಡುತ್ತಾ ಕೊನೆಗೆ ವಿಷಯ ಡಾ.ರಾಜ್ ಬಗ್ಗೆ ತಿರುಗಿತು. ಇದ್ದಕ್ಕಿದ್ದಂತೆ ಆ ವ್ಯಕ್ತಿ " ಕನ್ನಡ ಅಂದ್ರೆ ರಾಜ್‍ಕುಮಾರ್ ಒಬ್ರೇ ಏನಲ್ಲಾ ಬಿಡ್ರಿ. ಎಷ್ಟೋ ಜನ ಸಾಹಿತಿಗಳೂ ಕವಿಗಳೂ ಕನ್ನಡಕ್ಕಾಗಿ ದುಡಿದಿರುವಾಗ ಕೇವಲ ರಾಜ್‍ಕುಮಾರ್ ಹೆಸರನ್ನ ಹೇಳುವುದು ಅನ್ಯಾಯವಲ್ಲವಾ? ಅಷ್ಟಕ್ಕೂ ರಾಜ್‍ಕುಮಾರ್ ಕನ್ನಡಕ್ಕಾಗಿ ಏನು ತಾನೇ ಮಾಡಿದ್ದಾರೆ? " ಎಂಡುಬಿಡಬೇಕಾ.

ಅದಕ್ಕೆ ನಾನು ಹೇಳಿದೆ.
" ಮಾಹಾಸ್ವಾಮಿ, ಎಷ್ಟೋ ಜನ ಸಾಹಿತಿಗಳೂ, ಕವಿಗಳೂ ಕನ್ನಡಕ್ಕಾಗಿ ದುಡಿದಿದ್ದಾರೆ ನಿಜ. ಆ ಎಷ್ಟೋ ಜನ ಸಾಹಿತಿಗಳೂ, ಕವಿಗಳೂ ಬರೆದ ಎಷ್ಟೋ ಸಾಹಿತ್ಯದಲ್ಲಿ ನೀವೆಷ್ಟರ ಮಟ್ಟಿಗೆ ಓದಿದ್ದೀರಾ? ಕುವೆಂಪು ಬರೆದಿರುವ 'ರಾಮಾಯಣ ದರ್ಶನಂ' ಓದಿದ್ದೀರಾ? ಅಥವಾ ತ.ರಾ.ಸು ಅವರ ದುರ್ಗಾಸ್ತಮಾನವನ್ನೇನಾದರೂ ಓದಿದ್ದೀರಾ? At least 'ಜೈ ಭಾರತ ಜನನಿಯ ತನುಜಾತೆ' ಗೀತೆಯ ಅರ್ಥವಾದರೂ ಗೊತ್ತೇ ನಿಮಗೆ? ಕನ್ನಡ ಸಾಹಿತ್ಯ ಕ್ಷೇತ್ರ ಎಷ್ಟೇ ಅಗಾಧವಾಗಿದ್ದರೂ ಕನ್ನಡ ಓದುವ ಹವ್ಯಾಸದವರೇ ಇಲ್ಲದಿರುವಾಗ ಅವೆಲ್ಲ ಪುಸ್ತಕದ ಬಡನೆಯಂತಾಗಿವೆ. ಸುಮ್ನೇ, ರಾಜ್‍ಕುಮಾರ್ ಮೇಲಿನ ಹೊಟ್ಟೆ ಕಿಚ್ಚಿಗೆ ಅವ್ರನ್ ಬೈದ್ರೇ ಏನ್ ಬಂತು ರೀ. ಇಲ್ಲಿ ಕೇಲ್ರಿ ಹೇಳ್ತೀನಿ. ಕನ್ನಡದ ಮೊದಲ ರಾಜ ಕದಂಬರ ಮಯೂರ ವರ್ಮ ಹೀಗಿದ್ದ. ಚಾಲುಕ್ಯರ ಪುಲಿಕೇಶಿ ಪಲ್ಲವರೊಡನೆ ಹೀಗೆಲ್ಲ ಯುದ್ಧ ಮಾಡಿದ್ದ. ಕೃಷ್ಣದೇವರಾಯ ನ ಆಸ್ಥಾನ ಹೀಗಿತ್ತು. ಮೈಸೂರಿನ ರಣಧೀರ ಕಂಠೀರವ ನರಸರಾಜ ಒಡೆಯರರ ಗಾಂಭೀರ್ಯ (body language) ಹೀಗಿತ್ತು. ಕನ್ನಡದ ಕವಿ ಸರ್ವಜ್ಞ ಹೀಗಿದ್ದ. ನವಕೋಟಿ ನಾರಾಯಾಣನಾಗಿದ್ದ ಜಿಪುಣ, ಪುರಂದರ ದಾಸರಾಗಿ ಬಹಲ್‍ಷ್ಟು ಕೀರ್ತನೆಗಳನ್ನು ರಚಿಸಿದರು ಎಂಬಂತಹ ಕನ್ನಡ ಸಾಹಿತ್ಯ ಚರಿತ್ರೆಯ ಮಹತ್ವಪೂರ್ಣ ಅಂಶಗಳನ್ನೆಲ್ಲ ತೆರೆಯ ಮೇಲೆ ಅಮೋಘವಾಗಿ ಅಭಿನಯಿಸಿ ಕನ್ನಡ ನಾಡಿನ ಮೂಲೆ ಮೂಲೆಗೂ ಕನ್ನಡದ ಬಗ್ಗೆ ಕಾಳಜಿ ಬರುವಷ್ಟು ಕನ್ನಡಕ್ಕಾಗಿ ದುಡಿದಿರುವುದು ಡಾ.ರಾಜ್‍ಕುಮಾರ್ ತಿಳ್ಕೊಲ್ರೀ. ಕರ್ನಾಟಕದ ಏಕೀಕರಣವಾದ ಮೇಲೆ, ಕನ್ನಡದ ಬಗ್ಗೆ ಪ್ರಾಥಮಿಕ ಮತ್ತು ಮೂಲಭೂತವಾದ ಒಂದು ಅರಿವು ಜನಗಳಿಗೆ ಬಂದಿದ್ದು ಡಾ.ರಾಜ್‍ಕುಮಾರ್ ಸಿನಿಮಾಗಳಿಂದ. ಅಂಥವರು ತಾವು ದುಡಿದ ದುಡ್ಡನ್ನು ದಾನ ಮಾಡಿ ಬೆಂಗಳೂರನ್ನು ಸಿಂಗಾಪುರ ಮಾಡುವು ದೇನೂ ಬೇಡ. ಅವರು ಚಿತ್ರಗಳ ಮೂಲಕ ಕನ್ನಡಿಗರಲ್ಲಿ ಮೂಡಿಸಿರುವ ಜಾಗೃತಿ ಇದೆಯಲ್ಲಾ ಅಷ್ಟು ಸಾಕು. ಇನ್ಮೇಲೆ ರಾಜ್‍ಕುಮಾರ್ ಬಗ್ಗೆ ಬಾಯಿಗೆ ಬಂದಂತೆಲ್ಲಾ ಮತಾಡಕ್ಕೆ ಹೋಗ್‌ಬೇಡಿ " ಎಂದೆ.

ಆ ಮಹಾಪುರುಷ ಇನ್ನೂ ತನ್ನ ಹಟ ಬಿಡದೆ ಇನ್ನೇನೋ ರಾಗವೇಳೆಯಲು ತೊಡಗಿದ.

ನಾನ್ ಮನಸ್‌ನಲ್ಲಿ ಅಂದುಕೊಂಡೆ, " ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ "

Rating
No votes yet

Comments