ಕನ್ನಡ ಕಲಿಯುವದು ಕಷ್ಟವೇ?

ಕನ್ನಡ ಕಲಿಯುವದು ಕಷ್ಟವೇ?

ಹೀಗೆಂದು ಒಂದು ಲೇಖನವನ್ನು ಓದಿದ್ದ ನೆನಪು . ಬೇರೆ ಭಾಷಿಕರು ಕನ್ನಡ ಕಲಿಯಲಿ ಎಂದು ಅಪೇಕ್ಷಿಸುವ ನಮಗೆ ಕಲಿಯುವವರ ಕಷ್ಟ ಹೇಗೆ ಗೊತ್ತಾದೀತು? ಕನ್ನಡ ಕಲಿಸ ಹೊರಟ ಲೇಖಕಿಯೊಬ್ಬರಿಗೆ ಸುಸ್ತಾಗಿ - ಕನ್ನಡ ಬಹಳ ಸಂಕೀರ್ಣ ಭಾಷೆ ಎಂದೆನ್ನಿಸಿ , ಜಪಾನೀಸ್ ಭಾಷೆ ತುಂಬ ಸುಲಭ , ಸರಳ ಎಂದೆನಿಸಿ ಅದನ್ನೇ ನಮ್ಮ ತಾಯಿನುಡಿ ಮಾಡಬಾರದೇಕೆಂದು ಸೂಚನೆಯನ್ನೂ -ಸೀರಿಯಸ್ಸಾಗಿ ಅಲ್ಲ- ಕೊಟ್ಟಿದ್ದರು!

ನಿನ್ನೆ ಮುಂಬೈಯ ಮಾಲ್ ಒಂದರಲ್ಲಿ - Learn Kannada in a month ಎಂಬ ಪುಸ್ತಕ ನೋಡಿ ಕೊಂಡೆ. ಓದಿದೆ. ಆಗ ನನಗನಿಸಿದ್ದು:-

ನಮ್ಮ ಭಾಷೆಯನ್ನು ನಾವು ಸುಲಭವಾಗಿ - ಸುತ್ತಲಿನ ಪರಿಸರದಿಂದ ವ್ಯಾಕರಣದ ನಿಯಮ, ಭಾಷೆಯ ರಚನೆಗಳತ್ತ ಹೆಚ್ಚು ಗಮನ ಕೊಡದೆ, ಕಲಿತುಬಿಡುತ್ತೇವೆ . ಬೇರೆ ಭಾಷೆ ಕಲಿಯುವಾಗ , ನಿಯಮಗಳು , ಅಪವಾದಗಳು , ವಚನ , ಲಿಂಗ , ಕಾಲ ಇತ್ಯಾದಿ ಗಮನಿಸಬೇಕಾಗುತ್ತದೆ ಅಲ್ಲವೇ ?

ಈ ದೃಷ್ಟಿಯಿಂದ ನೋಡಿದರೆ ಕನ್ನಡ ಕಷ್ಟ ಎಂದು ನನಗೂ ಅನಿಸಿತು.

Rating
No votes yet