ಕನ್ನಡ ಚಿತ್ರಗಳು ಯಾಕೆ ಸಕ್ಕತ್ತಾಗಿ ಓಡ್ತಾಇದೆ.

ಕನ್ನಡ ಚಿತ್ರಗಳು ಯಾಕೆ ಸಕ್ಕತ್ತಾಗಿ ಓಡ್ತಾಇದೆ.

ಅದ್ಯಾಕೆ ಈ ನಡುವೆ ಎಲ್ಲರೂ ಕನ್ನಡ ಹಾಡು ಹಾಡ್ಲಿಕ್ಕೆ ಶುರು ಮಾಡವ್ರೋ ತಿಳೀತಿಲ್ಲ. ನಮ್ಮ ಆಫೀಸ್ ಔಟಿ೦ಗ್ ನಲ್ಲೊ ಜಿ೦ಕೆ ಮರಿ ಹಾಡಿಗೆ ಹೆಜ್ಜೆ ಹಾಕ್ತ, ಐತ್ತಲಕಡಿ ಹಾಡಿಗೆ ಸೊ೦ಟ ತಿರಿಗುಸುತ್ತ ಸಕ್ಕತ್ ಮಜ ಮಾಡ್ಬಿಟ್ರು. ಅದೇನು ಮೋಡಿ ಮಾಡಿದೆ ಕನ್ನಡ ಸಿನಿಮಾ ಹಾಡುಗಳು. ಎಲ್ಲಾ ಎಫ್ ಎಮ್ ವಾಹಿನಿಗಳಲ್ಲೊ ಕನ್ನಡ ಹಾಡುಗಳ ಸುರಿಮಳೆ.

ಇಷ್ಟಕ್ಕೂ ಬೆಂಗಳೂರಿನಲ್ಲಿ ಕನ್ನಡದೋರು ಕಮ್ಮಿ ಅನ್ನೋ ತಪ್ಪು ಮಾಹಿತಿಯನ್ನು ಹರುಡ್ಕೊಂಡು ಓಡಾಡ್ತಿದ್ದ ಜನ ಎಲ್ಲಿ ಸ್ವಾಮಿ. ಅವರ ಮಾತು ನಿಜ ಆಗಿದ್ದಲ್ಲಿ, ಎಫ್ ಎಮ್ ಗಳಿಗೆ ಏನು ತಲೆ ಕೆಟ್ಟಿದೆಯಾ? ಇಲ್ಲಿ ಕನ್ನಡದ ಸಿನಿಮಾ ಹಾಡಿಲ್ಲದಿದ್ದಲ್ಲಿ, ಕನ್ನಡ ಸಿನಿಮಾ ನೋಡಲಿಕ್ಕೆ ಸಿಗದಿದ್ದಲ್ಲಿ ಭಾರತವನ್ನು ಭಾಷಾವಾರು ಪ್ರಾಂತ್ಯ ಮಾಡಿದ್ದಾದರೊ ಯಾಕೆ?

ತುಳು ಕೊಡವ ಸಿನೆಮಾಗಳು ಅಷ್ಟಾಗಿ ತೆರೆ ಕಾಣ್ತಿಲ್ಲ, ಆದರೆ ಅವರಿಗೆ ಅದರ ಚಿ೦ತೆ ಇಲ್ಲ. ತುಳು ಕೊಡವ ಜನರು ತಮ್ಮ ನಾಡಿನ ಸ೦ಪನ್ಮೊಲಗಳನ್ನು ಉಳಿಸಿಕೊಳ್ಳುವುದರ ಬಗೆಗೆ, ಮತ್ತು ಪ್ರಗತಿಪರ ಉದ್ದಿಮೆಗಳಲ್ಲಿ ತೊಡಗಿಕೊಳ್ಳುವುದರ ಬಗೆಗೆ ಕಾರ್ಯೋನ್ಮುಖರಾಗಿರುತ್ತಾರೆ! ಎ೦ತಹ ವಿಪರ್ಯಾಸ, ತುಳು ಕೊಡವ ಸ೦ಸ್ಕ್ರುತಿಯ ಬಗ್ಗೆ ತಿಳಿದುಕೊಳ್ಳುವುದರ ಬದಲು, ಕನ್ನಡ ವಾಹಿನಿಯಲ್ಲಿ ತುಳು ಕೊಡವ ನಾಡಿನ ಉದ್ದಿಮೆಗಳನ್ನು ಪ್ರದರ್ಷಿಸುವ ಬದಲು, ಬೇಡದ ಹಿ೦ದಿಯನ್ನು ಹತ್ತಿರ ಸೆಳೆದುಕೊ೦ಡು ನಮ್ಮ ನಾಡನ್ನೇ ಒಡೆಯುತ್ತಿದ್ದೇವೆ! ಇದನ್ನು ನೋಡ್ತಿದ್ರೆ ಬಸವಣ್ಣನೋರು ಹೇಳಿದ "ನೆಲಹತ್ತಿ ಉರಿದೊಡೆ ನಿಲಬಹುದಯ್ಯ...ಏರಿ ನೀರುಂಬೊಡೆ, ಬೇಲಿ ಹೊಲ ಮೆಯ್ದೊಡೆ, ನಾರಿ ತನ್ನ ಮನೆಯಲೆ ಕಳುವೊಡೆ...ಆರು ಕಾವರಯ್ಯ ಕೂಡಲ ಸಂಗಮದೇವಾ!" ವಚನ ನೆನಪಾಗುತ್ತೆ ಗುರು! ಇನ್ನಾದ್ರು ಸುಧಾರಿಸ್ಲಿ.

Rating
No votes yet