"ಕರೆಂಟ್, ನೀರು, ಮಾರ್ಗ"ಗಳಿಲ್ಲದ ಬೃಹತ್ 'ಐಟಿ' ಕಂಪೆನಿಗಳು.
( ನಾನು ಓದಿದ ಕೆಲವು ಸುದ್ದಿಗಳನ್ನು ಕನ್ನಡದಲ್ಲಿ ಬರೆದು ಪ್ರಕಟಿಸಿದ್ದೇನೆ. ನಿಮ್ಮ ಅಭಿಪ್ರಾಯ ಹಾಗೂ ಸಲಹೆಗಳಿಗೆ ಮುಕ್ತ ಸ್ವಾಗತ )
ಕಂಪೆನಿಗಳ ಕಟ್ಟಡ ನಿರ್ಮಾಣ ಪ್ರಾರಂಭಿಸಿ ವರ್ಷಗಳಾದರೂ ವಿದ್ಯುತ್ , ನೀರು, ಮಾರ್ಗ ವ್ಯವಸ್ಥೆಯೇ ಇಲ್ಲ. ಹೈದರಾಬಾದ್ ನಗರದ ಹೊರವಲಯದಲ್ಲಿರುವ ಐಟಿ ಕಂಪೆನಿಯ ಚಿತ್ರಣವಿದು. ಈ ಬಗ್ಗೆ ಅಲ್ಲಿನ ಐಟಿ ಸಚಿವ ಪೊನ್ನಾಲ ಲಕ್ಷ್ಮಯ್ಯ ಅವರು ವಿವಿಧ ವಿಭಾಗಗಳ ಆಧಿಕಾರಿಗಳೊಂದಿಗೆ ಸಮಾಲೋಚಿಸಿ ಕುಡಿಯುವ ನೀರಿನ ಪೂರೈಕೆ ಮಾಡಲು ಗಡುವು ನೀಡಿದ್ದರೂ ಇನ್ನೂ ಕ್ಯಾಂಪಸ್ ಗೆ ನೀರು ಪೂರೈಕೆಯಾಗಿಲ್ಲ.
ಅಡಿಬಾಟ್ಲ, ಗೋಪನಹಳ್ಳಿ, ಮಹೇಶ್ವರಮ್,ಫ್ಯಾಬ್ ಸಿಟಿಗಳಲ್ಲಿರುವ, ವಿಪ್ರೋ, ಟಿಸಿಎಸ್, ಹಾಗೂ ಕಾಗ್ನಿಜಂಟ್ ಕಂಪೆನಿಗಳೂ ಸಾರಿಗೆ ಸಂಪರ್ಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ರಸ್ತೆಯನ್ನು ಸರಿಪಡಿಸಲು ಆಗ್ರಹಿಸಿವೆ. ಪ್ರಸ್ತುತ ಈ ಎಲ್ಲಾ ಕಂಪೆನಿಗಳೂ ನೌಕರರಿಗಾಗಿ ಖಾಸಗಿ ಬಸ್ಸುಗಳನ್ನು ಅವಲಂಬಿಸಿದೆ. ಈ ಕಂಪೆನಿಗಳಿಗೆ ಮಂಜೀರಾ ನದಿಯಿಂದ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸಿದ್ದರೂ ವಿದ್ಯುತ್ ಸೌಲಭ್ಯಗಳಿಲ್ಲದ ಕ್ಯಾಂಪಸ್ ಗಳಿಗೆ ನೀರು ಸರಬರಾಜಿನ ವ್ಯವಸ್ಥೆ ಇಲ್ಲ.
ವಿಪ್ರೋ ಕಂಪೆನಿಗಳು ತಡೆ ಗೋಡೆಯನ್ನು ನಿರ್ಮಿಸಲು ಪ್ರಾರಂಭಿಸಿದ್ದರೂ ಅವುಗಳ ಕಾರ್ಯವನ್ನು ಪೂರ್ಣಗೊಳಿಸಲು ಸ್ಥಳೀಯ ಕಂದಾಯ ಅಧಿಕಾರಿಗಳ ಸಹಕಾರ ಬೇಕಾಗಿದೆ. ಸ್ಥಳೀಯ ಮಂತ್ರಿಗಳು ಕಂಪೆನಿಗಳ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದರೂ ಇದುವರೆಗೆ ಯಾವುದೇ ರೀತಿಯ ಪ್ರಗತಿ ಕಂಡು ಬಂದಿಲ್ಲ ಎಂದು ಅಲ್ಲಿನ ಐಟಿ ಸಚಿವ- ಪೊನ್ನಾಲ ಲಕ್ಷ್ಮಯ್ಯ ಹೇಳಿದ್ದಾರೆ.
ಮೂಲ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ:http://www.deccanchronicle.com/121226/news-current-affairs/article/it-firms-await-power-water