ಕರ್ನಾಟಕ ಪೋಲಿಸ್ ಹೊಸ ಕಾಯಿದೆ

ಕರ್ನಾಟಕ ಪೋಲಿಸ್ ಹೊಸ ಕಾಯಿದೆ

ಸಂಪದ ಮಿತ್ರರೇ..ಈ ತಿಂಗಳ 9 ನೇ ತಾರೀಖಿನಂದು ಕರ್ನಾಟಕ ಪೋಲೀಸ್ ಇಲಾಖೆ ಹೊಸ ಕಾಯಿದೆಯನ್ನು ತರಲು ಪ್ರಕಟಣೆಯನ್ನು ಪ್ರಕಟಿಸಿದೆ ಅದರ ಬಗ್ಗೆ ನಿಮಗೇನಾದ್ರು ಗೊತ್ತಿದೆಯಾ...? ಗೊತ್ತಿಲ್ಲ ಅಂದ್ರೆ ಬೇಗ ತಿಳಿದುಕೊಳ್ಳಿ.

ನಮ್ಮ ಪೋಲೀಸ್ ಇಲಾಖೆಯವರು ಹೇಳುವ ಪ್ರಕಾರ ಬೆಂಗಳೂರು ಸಿಟಿಯಲ್ಲಿ ಟ್ರಾಪಿಕ್ ಜಾಮ್ ಜಾಸ್ತಿ ಆಗುತ್ತಿದ್ದು, ಅದರಿಂದ ಸಂಚಾರ ನಿಯಂತ್ರಿಸಲು ತುಂಬಾ ಕಷ್ಟವಾಗುತ್ತಿದ್ದು, ಹಾಗೂ ಟ್ರಾಪಿಕ್ ನಿಂದ ಆಗುವಂತಹ ತೊಂದರೆಗಳನ್ನು ತಪ್ಪಿಸಲು ಕರ್ನಾಟಕ ಪೋಲಿಸ್ ಕಾಯಿದೆ 1963 ಸೆಕ್ಷನ್ 31 ಸಬ್ ಸೆಕ್ಷನ್ 'O' ಅನ್ನುವ ಕಾಯಿದೆಯ ಅಡಿಯಲ್ಲಿ ಇರುವಂತಹ ಅಧಿಕಾರವನ್ನು ಉಪಯೋಗಿಸಿಕೊಂಡು, ಪೋಲಿಸ್ ಕಮೀಷನರ್ ರವರು ಹೊಸ ಕಾಯಿದೆ ತರುತ್ತಿದ್ದಾರೆ. ಈ ಕಾಯಿದೆಯ ಪ್ರಕಾರ ನಗರದಲ್ಲಿ 25 ಜನಕ್ಕಿಂತ ಜಾಸ್ತಿ ಜನ ಸೇರುವ ರೀತಿಯಾಗಿ ಯಾವುದೇ ಸರ್ಕಾರೇತರ ಸಂಸ್ಥೆಯಾಗಲಿ, ನಾಗರೀಕರಾಗಲಿ ಯಾರೂ ಸಹ ಪೂರ್ವಾನುಮತಿ ಇಲ್ಲದೇ ಆಂದೋಲನ ಮಾಡುವುದಾಗಲಿ, 250 ಜನಕ್ಕಿಂತ ಜಾಸ್ತಿ ಜನ ಸೇರಿ ಧರಣಿ ಮಾಡುವುದಾಗಲಿ, 25 ಜನಕ್ಕಿಂತ ಜಾಸ್ತಿ ಜನ ಸೇರಿ ಜಾಥಾ ಮಾಡುವುದಾಗಲಿ ಮಾಡುವಂತಿಲ್ಲ. ಅಕಸ್ಮಾತ್ ಮಾಡಬೇಕಾದ್ರೆ, ಏಳು ದಿನಗಳ ಮುಂಚಿತವಾಗಿ ಪೋಲಿಸ್ ಇಲಾಖೆಗೆ ನೂರುರೂಗಳ ಶುಲ್ಕವನ್ನು ನೀಡಿ ಲೈಸನ್ಸ್ ಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯಲ್ಲಿ ಯಾವ ಕಾರ್ಯಕ್ರಮ, ಯಾರೆಲ್ಲಾ ಪಾಲ್ಗೊಳ್ಳುತ್ತಾರೆ, ಎಷ್ಟು ಜನ ಪಾಲ್ಗೊಳ್ಳುತ್ತಾರೆ ಯಾವ ಘೋಷನೆಗಳನ್ನು ಕೂಗುತ್ತಿದ್ದಾರೆ. ಈ ರೀತಿಯಾಗಿ ಪರಿಪೂರ್ಣವಾದ ಮಾಹಿತಿಯನ್ನು ನೀಡಬೇಕು. ನೀಡಿದ ನಂತರ ಅದನ್ನ ಕಮೀಷನರ್ ರವರು ಪರಿಶೀಲಿಸಿ ಪರವಾನಗಿ (ಲೈಸನ್ಸ್) ನ್ನು ನೀಡಿದರೆ ಮಾತ್ರ ಯಾವುದೇ ಕಾರ್ಯಕ್ರಮವನ್ನು ಮಾಡಬೇಕು. ಲೈಸನ್ಸ್ ನೀಡದ ಪಕ್ಷದಲ್ಲಿ ಕಾರ್ಯಕ್ರಮವನ್ನು ಮಾಡುವ ಹಾಗೇ ಇಲ್ಲ. ಅಕಸ್ಮಾತ್ ಮಾಡಿದರೆ ಕಾನೂನು ಪ್ರಕಾರ ಅಪರಾದ. ಪರವಾನಗಿಯನ್ನು ನೀಡುವ ಅಧಿಕಾರ ಬೆಂಗಳೂರಿನ ಅಡಿಷನಲ್ ಕಮೀಷನರ್ , ಅಸಿಸ್ಟೆಂಟ್ ಕಮೀಷನರ್ರವರಿಗೆ ಮಾತ್ರ ಇರತ್ತೆ ಎಂದು ಸುತ್ತೋಲೆಯನ್ನು ಪೋಲಿಸ್ ಇಲಾಖೆಯವರು ಹೊರಡಿಸಿದ್ದಾರೆ. ಸುತ್ತೋಲೆ ಸಂಖ್ಯೆ No. CP/BC (Permission) 1.2008, dated 7th March, 2009

ಈ ಸುತ್ತೋಲೆಯ ಪ್ರಕಾರ ಮದುವೆ ಸಮಾರಂಭ ಮತ್ತು ಸತ್ತವರ ಶವ ಸಂಸ್ಕಾರಕ್ಕೆ ಪರವಾನಗಿ ಪಡೆಯುವುದು ಅವಶ್ಯಕತೆ ಇಲ್ಲ ಎಂಬುದಾಗಿ ತಿಳಿಸಿದ್ದಾರೆ.

ಈ ಕಾನೂನನ್ನ ಅಥವಾ ಕಾಯಿದೆಯನ್ನ ನೋಡಿದ್ರೆ ನಿಮಗೆ ಏನನಿಸತ್ತೆ ಇದು ಟ್ರಾಪಿಕ್ ಜಾಮ್ ನಿಯಂತ್ರಿಸಲು ಅಂತಾ ಅನಿಸ್ತಾ ಇದೆಯಾ ಅಥವಾ ಬೇರೆ ಏನಾದ್ರು ಅನಿಸ್ತಾ ಇದೆಯಾ, ಈ ಕಾಯಿದೆಯು ಇಷ್ಟ ಇಲ್ಲದ ಪಕ್ಷದಲ್ಲಿ DGP ಕಚೇರಿಯಲ್ಲಿ 15 ದಿನಗಳ ಒಳಗೆ ಕಾಯಿದೆ ತಡೆಯ ಬಗ್ಗೆ ಅರ್ಜಿಯನ್ನು ಸಲ್ಲಿಸಲು ಕೋರಿದ್ದಾರೆ ಅಂದ್ರೆ ಈ ಸೋಮವಾರವೇ ಕಡೆಯ ದಿನವಾಗಿದ್ದು ನಿಮ್ಮ ನಿಮ್ಮ ಅಭಿಪ್ರಾಯವನ್ನು ಸೂಚಿಸಿ ಅರ್ಜಿಗಳನ್ನು ಕೂಡಲೇ ಸಲ್ಲಿಸಿ.

Rating
No votes yet

Comments