ಕರ್ಮಧಾರಯ ಸಮಾಸ

ಕರ್ಮಧಾರಯ ಸಮಾಸ

ಈಗ ಆರನೆಯ ತರಗತಿಗೆ ಹೋಗಲಿರುವ ನನ ಮಗ ಅವನ ಹೊಸ ಪುಸ್ತಕಗಳನ್ನ ತಂದು 'ಅಪ್ಪಾಜಿ ಬೈಂಡ್ ಹಾಕಿಕೊಡಿ' ಎಂದು ಮುಂದಿಟ್ಟಾಗ ಅವನ ಸಂಸ್ಕ್ರತ ಪುಸ್ತಕ ನನ್ನ ಗಮನ ಸೆಳೆಯಿತು. ಹಾಗೆ ಅದನ್ನ ತಿರುವಿ ಹಾಕುತ್ತಿದ್ದಾಗ ನಾನು ಕಾಲೇಜಿನಲ್ಲಿ ಓದುವಾಗ ನಮಗೆ ಸಂಸ್ಕ್ರತ ತರಗತಿ ತೆಗೆದುಕೊಳ್ಳುತ್ತಿದ್ದ ಶ್ರೀ ಮೃತ್ಯುಂಜಯಾಚಾರ್ಯರು ನೆನಪಿಗೆ ಬಂದರು. ಅವರ ಪಾಂಡಿತ್ಯ, ಸರಳ ಸಜ್ಜನಿಕೆ, ಸಂಸ್ಕ್ರತ ಭಾಷೆಯ ಮೇಲಿದ್ದ ಮಮತೆ ಹಾಗೂ ಹಿಡಿತ, ಸ್ಪಷ್ಟ ಉcಚಾರಣೆ ನಮ್ಮನ್ನೆಲ್ಲಾ ಮಂತ್ರ ಮುಗ್ದರನ್ನಾಗಿಸುತ್ತಿದ್ದವು. ಅವರು ವಿದ್ಯಾರ್ಥಿಗಳನ್ನ 'ಏನಯ್ಯ ರತ್ನ' ಎಂದೇ ಕರೆಯುತ್ತಿದ್ದರು.

ಮೊದಲನೆಯ ದಿನ ಅವರ ತರಗತಿಯಲ್ಲಿ ನಾವೆಲ್ಲ ವಿದ್ಯಾರ್ಥಿಗಳು ಅವರಿಗೆ ತಮ್ಮ ತಮ್ಮ ಪರಿಚಯ ಮಾಡಿಕೊಡಬೇಕಿತ್ತು. ನನ್ನ ಬಳಿ ಬಂದ ಅವರು,
'ಏನಯ್ಯ ರತ್ನ ನಿನ್ನ ಹೆಸರು?' ಅಂದಾಗ ನಾನು ನನ್ನ ಹೆಸರನ್ನ ಹೇಳಿದೆ. ಅವರು ಅಷ್ಟಕ್ಕೆ ಸುಮ್ಮನಾಗದೇ 'ವಿಜಯ ಕುಮಾರ ಯಾವ ಸಮಾಸ ಹೇಳು ನೋಡೋಣ' ಅಂದರು. ನನಗೆ ಇದ್ದ ಬದ್ದ ದೈರ್ಯವೂ ಉಡುಗಿ ಹೋಯಿತು. ತಲೆ ಕೆರೆಯುತ್ತಾ 'ಎಂತಾ ಕರ್ಮ ಬಂತು' ಎಂದು ಗೊಣಗುವಾಗ ಅವರು 'ಅದೇ ಅದನ್ನೇ ಜೋರಾಗಿ ಹೇಳಯ್ಯ ರತ್ನ ಅದು ಬರೀ ಕರ್ಮ ಅಲ್ಲ - ಕರ್ಮಧಾರಯ ಸಮಾಸ' ಅಂದಾಗ ತರಗತಿಯಲ್ಲಿ ಎಲ್ಲಾ ಗೊಳ್ಳೆಂದು ನಕ್ಕಿದ್ದರು.

Rating
No votes yet

Comments