ಕರ್ಮಾಗ್ನಿ (ಶ್ರೀ ನರಸಿಂಹ 52)
ಅರಿಯದಲೆ ಮುಟ್ಟಿದರು ಅಗ್ನಿಯೆಂಬುದನು ನೀನು
ಅರಿಯದೆ ಮುಟ್ಟಿಹನೆಂದು ಸುಡದೆ ಬಿಡುವುದೇನು
ಅರಿತೊ,ಅರಿಯದೆಯೊ ಹೇಗೆ ಮುಟ್ಟಿದರು ಅದನು
ಗುಣವದರದು ತಿಳಿ,ಸುಡುವುದದು ಮುಟ್ಟಿದವರನು
ಅರಿತು,ಅರಿಯದೆ ಮಾಡಿದರು ಅಹಿತ ಕರ್ಮಗಳನು
ನೀಡುವುದದು ನೀ ಬಯಸದಿಹ ಕೆಡುಕಿನ ಪಲಗಳನು
ಅರಿಯದೆ ಆಗಿಹ ಅಹಿತಕೆ ಕ್ಷಮೆಯೂ ದೊರಕಿದರು
ಅರಿತು ಮಾಡುವ ಅಹಿತಕೆ ಕ್ಷಮೆಯಿಲ್ಲ ಕೋರಿದರು
ಮಾಡದಿರು ಕರ್ಮಗಳ ಜಗದಿ ಪರರ ಮನ ನೋಯಿಸಲು
ಇದುವೆ ಸುಲಭ ಮಾರ್ಗವು ಶ್ರೀನರಸಿಂಹನನು ಮೆಚ್ಚಿಸಲು
Rating
Comments
ಆತ್ಮೀಯ ಸತೀಶರೆ ,
ಆತ್ಮೀಯ ಸತೀಶರೆ ,
ಕರ್ಮವನ್ನು ಅಗ್ನಿ ಎಂದಿರುವ ನಿಮ್ಮ ಕವನ ಸುಂದರವಾಗಿ ಮೂಡಿದೆ. ಕರ್ಮ ಶೇಷವನ್ನು ಸುಟ್ಟು ಭಸ್ಮ ಮಾಡಲೇಬೇಕು, ವಿಧಿ ಇಲ್ಲ. ಇಂದೋ, ಮುಂದೋ, ಮತ್ತೆ ಮುಂದೆಂದೋ .......ಕರ್ಮ ಅಗ್ನಿಯಲ್ಲಿ ಬೇಯಲೇ ಬೇಕು.
ಧನ್ಯವಾದಗಳು.
In reply to ಆತ್ಮೀಯ ಸತೀಶರೆ , by Prakash Narasimhaiya
ನಿಮ್ಮ ಮಾತು ಸತ್ಯ ಪ್ರಕಾಶ್ ರವರೇ
ನಿಮ್ಮ ಮಾತು ಸತ್ಯ ಪ್ರಕಾಶ್ ರವರೇ ಧನ್ಯವಾದಗಳೊಂದಿಗೆ
....ಸತೀಶ್
ಕರ್ಮಾಗ್ನಿ
ಚೆನ್ನಾಗಿದೆ. ಇಷ್ಟವಾಯಿತು.
In reply to ಕರ್ಮಾಗ್ನಿ by saraswathichandrasmo
ಧನ್ಯವಾದಗಳು ಸರಸ್ವತಿ ಯವರೇ
ಧನ್ಯವಾದಗಳು ಸರಸ್ವತಿ ಯವರೇ
...ಸತೀಶ್