ಕಳ್ಳ-ಕಳ್ಳರೆಲ್ಲಾ ಸೇರಿದಲ್ಲಿ ಒಳ್ಳೆಯದನ್ನರೆಸುವುದೆಲ್ಲಿ?

ಕಳ್ಳ-ಕಳ್ಳರೆಲ್ಲಾ ಸೇರಿದಲ್ಲಿ ಒಳ್ಳೆಯದನ್ನರೆಸುವುದೆಲ್ಲಿ?

                ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು!


                ವಿರೋಧ ಪಕ್ಷಗಳ ನಂಬಿಕೆದ್ರೋಹವಂದೇ ವಿವೇಕಿಗಳಿದನ್ನು ಭಾವಿಸಬೇಕಾಗುತ್ತದೆ. ಆಡಳಿತದವರು ಸಹಸ್ರ ಸಹಸ್ರ ಕೋಟಿಗಳನ್ನು ಲೆಕ್ಕ-ಜಮಾಗಳಿಲ್ಲದೆ ನುಂಗಿ ನೊಣೆದರಂತೆ. ಹಾಗೆಂದು ವಿರೋಧ ಪಕ್ಷದವರು ಕುಣಿದು ಕುಪ್ಪಳಿಸಿದರು. ಆದರೆ ಸಂಸತ್ತಿನ ಒಳಗೆ ಹೊಗುವಷ್ಟೂ ಧೈರ‍್ಯವಿಲ್ಲದ ಅವರ ಪುಕ್ಕಲಿನಿಂದಾಗಿ, ತಿಂದವರು ಬಚವಾಗಿಬಿಟ್ಟರು! ಇಂತಹ ನಾಟಕದ ಒಳ ಒಪ್ಪಂದವೇ “ಆಳುವ”, “ಆಡುವ” ಕುಳಗಳ ನಡುವೆ ಆಗಿದ್ದಿರಲಾರದೇಕೆ?!


                ಜಂಟೀ ಸದನ ಸಮಿತಿ ಒತ್ತಾಯ ನಿಜವಾದ ಇಷ್ಯೂ ಆಗಿತ್ತೆಂದೆನೂ ಅನ್ನಿಸುವುದಿಲ್ಲ. ಜೆಪಿಸಿ, ಸಿಬಿಐ, ಸಿವಿಸಿಗಳಿಗಂಜುವ ಮಾನ-ಮರ‍್ಯಾದೆ ಪ್ರಜ್ಞೆಯಾದರೂ ಇಂದಿನ ರಾಜಕೀಯದಲ್ಲಿರಬಹುದೇ?! ‘ಇದೆ’ ಅಥವಾ ‘ಇಲ್ಲ’ ಎಂದು ಹೇಳುವಷ್ಟು ಸ್ವಂತಿಕೆ ಸ್ವಾತಂತ್ರ್ಯಗಳೂ ಸನ್ಮಾನ್ಯ ಶಾಸಕ-ಸಂಸದವರೆಣ್ಯರಿಗಿರುವುದು ಅನುಮಾನ. ಅವರ ಜುಟ್ಟು, ಯಾವ ಯಾವ ಕೊಚ್ಚೆ, ಕೆಸರು, “ರಾಡಿ”ಗಳಲ್ಲಿ ಸಿಕ್ಕುಗಟ್ಟಿರುತ್ತದೋ, ಓದುಗ, ನೋಡುಗ ಸಾಮಾನ್ಯರಿಗೇನು ಗೊತ್ತು?


ಇಷ್ಟಕ್ಕೂ ನಮ್ಮ-ನಿಮ್ಮ ಈ ಸಂಕಟಕ್ಕೂ ಮಾಧ್ಯಮಗಳ ವರದಿ-ವಿಶ್ಲೇಷಣೆಗಳು ತಾನೇ ಆಧಾರ? ಅದರಲ್ಲೂ “ಆರು ಕಾಸಿನ ವರದಿ” ಯಾವುದೋ, “ಮೂರು ಕಾಸಿನ ವರದಿ” ಯಾವುದೋ? ನಂಬುವುದು ಹೇಗೇ?

Rating
No votes yet

Comments