"ಕವಲು" ಕಾದಂಬರಿಯ ವಿಮರ್ಶೆ

"ಕವಲು" ಕಾದಂಬರಿಯ ವಿಮರ್ಶೆ

ಗೋಮಾಂಸ ಜಗಿದೂ ಜಗಿದೂ ಜಿಹ್ವಾ(ನಾಲಗೆ) ಜಡ್ಡು ಹಿಡಿದು ಹೋಗಿತ್ತು. ಯಾವತ್ತು ಭೈರಪ್ಪನವರ "ಕವಲು" ಕೃತಿ ಬಿಡುಗಡೆ ಬಗ್ಗೆ ಪತ್ರಿಕಾ ವರದಿ ಓದಿದೆನೋ, ಮೊದಲು ನಾಲಗೆ ಸಾಣೆ ಹಿಡಿಸಿ ಬಂದಿರುವೆ. ಫಸ್ಟ್ ಕ್ಲಾಸ್ ಹರಿತವಾಗಿದೆ. ಇನ್ನು ೨೮ರವರೆಗೆ( ಕೃತಿ ಬಿಡುಗಡೆ ದಿನಾಂಕ) ಕಾಯಲು ಸಾಧ್ಯವಿಲ್ಲ.


ಕಾದಂಬರಿ ಬಿಡುಗಡೆಗೂ ಮೊದಲು ವಿಮರ್ಶೆ ಹೇಗೆ ಸಾಧ್ಯ ಅಂದಿರಾ?


ನನ್ನಿಂದ ಸಾಧ್ಯವಿಲ್ಲದ್ದು ಯಾವುದೂ ಇಲ್ಲಾ-


ಸಿನಿಮಾ ಹಾಗೂ ನಟನ ಹೆಸರು ಕೊಡಿ ಸಾಕು, ವಿಮರ್ಶೆ ೫ ನಿಮಿಷದಲ್ಲಿ ರೆಡಿ.


ರಂಗಮಂದಿರ ಮತ್ತು ನಿರ್ದೇಶಕ ಯಾರೆಂದು ಗೊತ್ತಾದರೆ ನಾಟಕ ವಿಮರ್ಶಿಸಬಲ್ಲೆ!


ಬಾಂಬ್ ಬಿದ್ದ ಪ್ಲೇಸ್ ಹೇಳಿ, ಉಳಿದದ್ದು ನನಗೆ ಬಿಡಿ..


ಇನ್ನು..ಈ ಕೃತಿ...ಏನಂತೀರಿ..........ಥತ್..ಆಂ.. "ಕವಲು".... ನನ್ನಂತಹವರು ಚರ್ಚಿಸಲು ತಕ್ಕುದಾದ ಪುಸ್ತಕವೇ ಅಲ್ಲ.. ಹೆಸರಲ್ಲೇ "ಕಮಲ"ದ ವಾಸನೆ ಹೊಡೆಯುವುದು. ಹೆಚ್ಚೆಂದರೆ ಇದನ್ನು ಕೋಮುವಾದಿ ಪಕ್ಷದ ಪ್ರಣಾಳಿಕೆ ಎನ್ನಬಹುದು.


ಕಳೆದ ಬಾರಿಯ ಕಾದಂಬರಿಯ ಮೂಲಕ ಕರ್ನಾಟಕವನ್ನು ಗುಜರಾತ್ ಮಾಡಲು ಹೊರಟಿದ್ದರು. ಈ ಸಲ ಕರ್ನಾಟಕವನ್ನು ಸೀದಾ ಮನುಕಾಲಕ್ಕೇ ತೆಗೆದುಕೊಂಡು ಹೋಗುತ್ತಾರೆ.(ಓದುವಾಗ ಮನು ಶಬ್ದಕ್ಕೆ ಸ್ವಲ್ಪ ಒತ್ತು ಕೊಡಿ)


ಇನ್ನು ಉಳಿದ ವಿಮರ್ಶೆ ೨೮ಕ್ಕೆ ಸಂಜೆ ಟಿ.ವಿ.ಚಾನಲ್‌ಗಳಲ್ಲಿ ಕೊಡುವೆ.


-ಗಣೇಶ.

Rating
Average: 5 (1 vote)

Comments