ಕಾದಿರುವವಳ ಪ್ರಶ್ನೆ...!!!
ನಾನು,
ಅಹಲ್ಯೆಯಲ್ಲ, ಆದರೂ,
ಮೈಲಿಗಲ್ಲಿಗೂ ಕಡೆಯಾಗಿ ನಿನ್ನ
ಹಾದಿಯಲಿ ನಿಂತಿರುವೆ ನಾನು,
ಬರೇ ನಿನ್ನ ನಿರೀಕ್ಷೆ,
ದಿನವೂ ನನಗೆ;
ನಾನು,
ಶಬರಿಯಲ್ಲ, ಆದರೂ,
ಹೂವಿಗಿಂತಲೂ ಕೋಮಲವಾದ
ನನ್ನ ಹೃದಯವನು
ನಿನಗಾಗಿ ಕಾದಿರಿಸಿರುವೆ,
ಹಣ್ಣುಗಳಿಗಿಂತಲೂ ಸವಿಯಾದ
ನನ್ನ ಸ್ವಪ್ನಗಳನೆಲ್ಲಾ
ನಿನಗಾಗಿ ಉಳಿಸಿರುವೆ;
ನಾನು,
ಸೀತೆಯಲ್ಲ, ಆದರೂ,
ಈ ಸಮಾಜದ
ಕಿರುಕುಳಗಳನೆಲ್ಲಾ ಸಹಿಸಿಕೊಂಡು
ನಿನಗಾಗಿ ಕಾದಿರುವೆ.
ಗೊತ್ತು ನೀನು ರಾಮನಲ್ಲ.
ಆದರೂ, ನನಗೆ ನಂಬಿಕೆ
ನೀ ಬಂದೇ ಬರುವೆ.
ಆದರೆ, ನಲ್ಲಾ,
ನೀ ಎಂದು ಬರುವೆ?
*-*-*-*-*-*-*-*-*
Rating
Comments
ಉ: ಕಾದಿರುವವಳ ಪ್ರಶ್ನೆ...!!!
In reply to ಉ: ಕಾದಿರುವವಳ ಪ್ರಶ್ನೆ...!!! by manjunath s reddy
ಉ: ಕಾದಿರುವವಳ ಪ್ರಶ್ನೆ...!!!