ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಲಘು ಹಾಸ್ಯ : ಕಾಲ ಕೆಟ್ಟೋಯ್ತು ಬಿಡಿಸಾರ್
ಕಳೆದವಾರ ಬಸ್ ಹತ್ತುವಾಗ ನನ್ನ ಮೊಬೈಲ್ ಕಳೆದುಹೋಯಿತು. ಸಾಮಾನ್ಯವಾಗಿ ಕಳ್ಳರು ಮೊಬೈಲ್ ಎಗರಿಸಿದ ತಕ್ಷಣ ಅದರ ಸಿಮ್ ತೆಗೆದು ಮೊಬೈಲ್ ಮಾತ್ರ ಉಳಿಸುಕೊಳ್ಳುತ್ತಾರೆ. ಆದರೆ ನನ್ನ ಮೊಬೈಲ್ ಎತ್ತಿದ ಕಳ್ಳನಾರು ಸಾಮನ್ಯನಲ್ಲ. ನನ್ನ ಮೊಬೈಲ್ ಉಪಯೋಗಿಸಿ ಅದರಲ್ಲಿರುವ ನಂಬರ್ ಗಳಿಗೆಲ್ಲ ಕಾಲ್ ಮಾಡಿ ಮಜ ತೆಗೆದುಕೊಳ್ತಿದ್ದ. ಕಡೆಗೆ ನಾನು ಕರೆ ಮಾಡಿದರೆ ನನ್ನ ಕೈಲು ಅದೆ ಖುಶಾಲು! . ತೀರ ಇಕ್ಕಟ್ಟಿಗೆ ಸಿಕ್ಕಿದೆ. ಕಡೆಗೆ ಯಾರೊ ಅಂದರು "ಇದೆಲ್ಲ ತುಂಬಾ ರಿಸ್ಕ್ ಅವನೇನಾದರು ನಿಮ್ಮ ಮೊಬೈಲ್ ನಿಂದ ಟೆರರಿಷ್ಟ್ ನ ಕಾಂಟಾಕ್ಟ್ ಮಾಡಿದರೆ ನಿಮಗೆ ಕಷ್ಟ" , ನಿಜವಾ ಈಗ ನಾನು ಭಯಬಿದ್ದೆ.
ತಕ್ಷಣ ನನಗೆ ಸಿಮ್ ನೀಡಿದ್ದ ಕಷ್ಟಮರ್ ಕೇರ್ ಗೆ ಬೇಟಿನೀಡಿ, ವಿಷಯ ತಿಳಿಸಿ , ಆ ನಂಬರನ್ನು ಸ್ಥಗಿತಗೊಳಿಸಿ ನನಗೆ ಮತ್ತೊಂದು ಸಿಮ್ ನೀಡುವಂತೆ ಕೇಳಿದೆ, ಅದಕ್ಕವರು ’ಡುಪ್ಲಿಕೇಟ್ ಸಿಮ್’ ಪಡೆಯಲು, ಮೊದಲಿನ ಸಿಮ್ ಕಳೆದಿದೆ ಎಂದು ಪೋಲಿಸರಲ್ಲಿ ಕಂಪ್ಲೇಂಟ್ ನೀಡಿ ಅದರ ದಾಖಲಾತಿ ಕೊಡಬೇಕೆಂದರು, ಸರಿಯೆ ಇನ್ನೇನು ಮಾಡಲಿ ? , ಪೋಲಿಸ್ ಸ್ಟೇಷನ್ ಹುಡುಕುತ್ತ ಹೊರಟೆ.
ಸಿನಿಮಾಗಳಲ್ಲಿ ಟೀವಿಗಳಲ್ಲಿ ಅಷ್ಟೆ ನಾನು ಪೋಲಿಸ್ ಸ್ಟೇಷನ್ ನೋಡಿರುವುದು, ಹೊರತಾಗಿ ಮೊದಲ ಸಾರಿ ಪೋಲಿಸ್ ಸ್ಟೇಷನ್ ಪ್ರವೇಶಿಸಿದೆ. ಎಲ್ಲ ಸರ್ಕಾರಿ ಕಛೇರಿಗಳ ಹಾಗೆ ಕುರ್ಚಿ ಮೇಜುಗಳು. ಆದರೆ ಇಲ್ಲಿ ನೌಕರರ ಬದಲು ಯೂನಿಫಾರ್ಮ್ ಧರಿಸಿದ ಪೋಲಿಸರು.
"ಬನ್ನಿ ಸಾರ್ ಒಳಗೆ ಬನ್ನಿ, ಏನು ತೊಂದರೆಯಾಗಿದೆ ಹೇಳಿ" ಎಂದ. ಪೋಲಿಸ್ ಸ್ಟೇಶನ್ ಎಂದರೆ ಭಯವಿದ್ದ ನನಗೆ ದೊರೆತ ಸ್ವಾಗತದಿಂದ ಉಬ್ಬಿಹೋದೆ. " ಛೇ ಹಾಳದವರು ಸಿನಿಮಾದವರು ಪೋಲಿಸ್ ಅಂದರೆ ಏಕೆ ವಿಲನ್ ತರ ತೋರಿಸುತ್ತಾರೆ, ಈ ಪೇಪರ್ ನವರು ಅಷ್ಟೆ " ಅಂತ ಅಂದುಕೊಂಡೆ"
ಒಳಗೆ ಹೋಗುವಾಗಲೆ ಸ್ವಾಗತಿಸಿದ ಮೊದಲ ರೂಮಿನಲ್ಲಿದ ಒಬ್ಬ ಪೋಲಿಸ್, ನನಗೆ ಅವರ ಯೂನಿಫಾರ್ಮ್ , ಪಟ್ಟಿಗಳು ನಕ್ಷತ್ರಗಳು ಇವುಗಳ ಬಗ್ಗೆ ಜ್ಞಾನ ಕಡಿಮೆ ಹಾಗಾಗಿ ನನ್ನ ಸ್ವಾಗತಿಸಿದವನ ಸ್ಥಾನ ತಕ್ಷಣ ತಿಳಿಯಲಿಲ್ಲ, ಎದುರಿಗೆ ಟೇಬಲ್ ಮೇಲಿದ್ದ ನೇಮ್ ಪ್ಲೇಟ್ ನೋಡಿದೆ, ಬಹುಷಃ ಇನ್ಸ್ಪೆಕ್ಟರ್ ರಾಂಕ್ ಇರಬಹುದು, ಹೆಸರು ಮಾತ್ರ ರೇವಣ್ಣ ಅಂತ ಇತ್ತು.
ಸರಿ ವಿವರಿಸಿದೆ, "ನನ್ನ ಮೊಬೈಲ್ ಕಳೆದಿದೆ ಮತ್ತು ಅದಕ್ಕೆ ಒಂದು ಕಂಪ್ಲೇಟ್ ಮಾಡಬೇಕಿದೆ" ಅಂತ
ಅವನು "ಅದಕ್ಕೇನಂತೆ ಸರಿ ಒಂದು ಕಂಪ್ಲೇಟ್ ಬರೆದು ಕೊಡಿ " ಅಂತ , ಒಂದು ಖಾಲಿ ಬಿಳಿ ಹಾಳೆಯನ್ನು ಒಳಗಿನಿಂದ ತೆಗೆದು ಕೊಡುತ್ತ. "ಎಲ್ಲಿ ಸಾರ್ ಕಳೆದುಹೋಯಿತು" ಅಂದ. ನಾನು "ಹನುಮಂತ ನಗರದ ಹತ್ತಿರ ಬಸ್ ಹತ್ತಬೇಕಾದರೆ ಹೋಯಿತು" ಅಂದೆ. ಅದಕ್ಕವನು " ನೀವು ಹಾಗೆ ಬರೆದಲ್ಲಿ ನಾವು ಕಂಪ್ಲೇಟ್ ಪಡೆಯಲಾಗುವದಿಲ್ಲ , ಆಗ ನೀವು ಹನುಮಂತನಗರದಲ್ಲಿ ಕಂಪ್ಲೇಂಟ್ ಮಾಡಬೇಕಾಗುತ್ತೆ ,ನೀವು ಒಂದು ಕೆಲಸ ಮಾಡಿ , ಇಲ್ಲೆ ಜೈನ್ ನಗರ ಬಸ್ ಹತ್ತುವಾಗ ಕಳೆಯಿತು ಅಂತ ಬರೆಯಿರಿ" ಅಂದ. ಸರಿಯೆ ನನಗೇನು ಕಳೆದಿರುವುದು ನಿಜ , ಹಾಗೆ ಬರೆಯಲು ಏನು ತೊಂದರೆ ಅನ್ನಿಸಿತು.
ಬರೆಯುವಾಗ ಗಮನಿಸಿದೆ, ಪಾಪ ಏಕೊ ತುಂಬ ಸಪ್ಪಗಿದ್ದ ರೇವಣ್ಣ, ಪೋಲಿಸರಾದರೇನು ಮನುಷ್ಯರಲ್ಲವೆ !, ಅವನು ಕೊಟ್ಟ ಸಲುಗೆಯಿಂದ ಕೇಳಿದೆ " ಎನ್ಸಾರ್ ಏಕೊ ಸಪ್ಪಗಿದ್ದೀರಿ" ಅಂತ. ಅವನು ನನ್ನ ಮುಖ ಒಂದು ರೀತಿ ನೋಡಿದ, ನನಗೆ ಒಳಗೆ ಭಯವಾಗಿತು , ಆದರೆ ಅವನು ಸಪ್ಪೆಯಾಗಿ " ಏನೊ ಸಾರ್ ಕಾಲ ಕೆಟ್ಟು ಹೋಯ್ತು ಬಿಡಿ" ಅಂದ. ಆಶ್ಚರ್ಯ ಇದೇನಾಯಿತು ಇದ್ದಕ್ಕಿದ್ದ ಹಾಗೆ, ಅನುಕಂಪದಿಂದ ಕೇಳಿದೆ "ಏಕೆ ಸಾರ್ ಏನಾಯ್ತು" ಅಂತ
ಅವನು " ಏನೊ ಸಾರ್ ಒಟ್ಟಿನಲ್ಲಿ ಸರಿ ಇಲ್ಲ, ಪೋಲಿಸರೆಂದರೆ ಅವರ ಜಾಗಕ್ಕೆ ಸ್ವಲ್ಪಾನಾದ್ರು ಮಾರ್ಯದೆ ಬೇಡವ ಸಾರ್" ಅಂದ,
ನಾನು " ಅದು ಸರಿಯೆ ಪೋಲಿಸರಾದರೇನು ಅವರಿಗೆ ವ್ಯಕ್ತಿತ್ವ ವಿರಲ್ವೆ ಮಾರ್ಯದೆ ಕೊಡ್ಲೆ ಬೇಕು, ಅಂತಾದೇನಾಯ್ತು ಸಾರ್ " ಅಂದೆ ಕುತೂಹಲದಿಂದ.
ಅವನು ಸ್ವಲ್ಪ ಕರಗಿ ಹೋದ " ಅದೇ ಸಾರ್ , ನೀವು ಪೇಪರ್ ನೋಡ್ತಿಲ್ವ , ಬಳ್ಳಾರಿ ಗಣಿ ವರದಿ ಅಂತೆ ಲೋಕಾಯುಕ್ತರದು, ಅದ್ಯಾರೊ ಕಾರಪುಡಿ ಮಹೇಶನಂತೆ , ಇಲಾಖೆಯಲ್ಲಿ ಎಲ್ಲರಿಗು ದುಡ್ಡು ಹಂಚಿದ್ದಾನಂತೆ , ದೊಡ್ಡದಾಗಿ ಪೇಫರಿನಲ್ಲಿ ಬಂದಿದೆ ನೋಡಿ, ಇಂತವರಿಗೆ ಇಷ್ಟು ಹಣ ಎಂದು" ಎನ್ನುತ್ತ ಮತ್ತೆ ಸಪ್ಪಗಾದ.
ನನಗೆ ಕೆಡುಕೆನಿಸಿತು, ಪಾಪ ಇಲಾಖೆಯಲ್ಲು ಶುದ್ದ ಹಸ್ತರಿದ್ದೆ ಇರುತ್ತಾರೆ ಈ ಮಾಧ್ಯಮದವರು ಎಲ್ಲವನ್ನು ದೊಡ್ಡದು ಮಾಡಿ ಎಲ್ಲರು ಭ್ರಷ್ಟರು ಅನ್ನುವ ರೀತಿ ಬಿಂಬಿಸಿದರೆ , ಮನ ನೋಯುವದಿಲ್ಲವೆ ಅನ್ನಿಸಿ ಅದನ್ನೆ ಹೇಳಿದೆ
"ಹೋಗ್ಲಿ ಬಿಡಿ ಸಾರ್ ಯಾರೊ ಒಬ್ಬರು ಲಂಚಕೋರರಾದರೆ ಎಲ್ಲರು ಹಾಗೆ ಅಂತ ಭಾವಿಸಬೇಕಿಲ್ಲ ನೀವೇನು ನೊಂದ್ಕೊಬೇಡಿ" ಎಂದೆ.
ಅವನು ಸ್ವಲ್ಪ ಅಸಹನೆಯಿಂದ
" ಅದು ಹಾಗಲ್ಲ ನಾನು ಹೇಳಿದ್ದು ಇವರೆ, ನಿಮಗೆ ಅರ್ಥವಾಗಲ್ಲ ಬಿಡಿ " ಎಂದ.
ನನ್ನ ಕುತೂಹಲ ಮೇರೆ ಮೀರಿತು " ಮತ್ತಿನೇನು ಸಾರ್ ನನಗೆ ಅರ್ಥವಾಗಲಿಲ್ಲ, ಯಾವುದೊ ಪೇಪರ್ ಸುದ್ದಿಗೆ ಏಕೆ ತಲೆಕೆಡಸಿಕೊಳ್ತೀರಿ ಬಿಡಿ" ಎಂದೆ.
ಅವನು "ಸಾರ್ ನಿಮಗೆ ಅರ್ಥವಾಗಲಿಲ್ಲ ಬಿಡಿಸಿ ಹೇಳ್ತಿನಿ ಕೇಳಿ ಅದನ್ನು ಓದಿ ನೋಡಿದ್ದೀರ , ಲಂಚ ಕೊಟ್ಟ ವಿವರಣೆಯೆ ಇದೆ, ಅದು ಅವರ ಡೆಸಿಗ್ನೇಶನ್ ಜೊತೆ, DSP ಗೆ 75000 , S.I. ಗೆ 45000 ವಂತೆ ಅದ್ಯಾರೊ ಕಾನ್ ಸ್ಟೇಬಲ್ ಗೆ 125000 ಅಂತೆ, ಹೀಗಾದ್ರೆ ಹೇಗೆ ಸರ್ " ಎಂದ ,
ನನ್ನ ತಲೆಗೆ ಏನು ಹೊಳೆಯಲಿಲ್ಲ , " ಸರಿ ಈಗ ಏನಾಯ್ತು " ಅಂದೆ,
ಅವನು ಕೋಪದಿಂದ " ಸರಿ ನೀವೊಳ್ಳೆ ಜನ ನಿಮಗೆ ಬಿಡಿಸಿ ಹೇಳಿದರು ಅರ್ಥವಾಗಲ, ಅಲ್ಲರಿ SI ಲೆವೆಲ್ ಗೆ 45000 ಕೊಟ್ಟವನು ಕಾನ್ಸ್ಟೇಬಲ್ ಗೆ 1,25,000 ಕೊಟ್ರೆ ನಾಳೆ ನಮ್ಮ ಬೆಲೆ ಏನಾಗುತ್ತೇರಿ, ಡಿಪಾರ್ಟ್ ಮೆಂಟ್ನಲ್ಲಿ ನಮ್ಮ ಮಾತು ಯಾವ ಕಾನ್ಸ್ ಟೇಬಲ್ ಕೇಳ್ತಾನೆ ಹೇಳಿ , ಅವರವರ ಲೆವೆಲ್ ಇರಬೇಕು , ಅವನ್ಯಾರೊ ಎಡಬಿಡಂಗಿ ಕಾರಪುಡಿ ಮಹೇಶ ನಿಂದ ಇಲಾಖೆಲಿ ನಮ್ಮ ಮಾರ್ಯಾದೆಗೆನೆ ಕುತ್ತು ಬಂದಿದೆ, ನಾಳೆ ಇಂದ ನಾವೆ ಕಾನ್ಸ್ ಟೇಬಲ್ ಗೆ ಸಲ್ಯೂಟ್ ಮಾಡಬೇಕಾಗುತ್ತೆ ಅಷ್ಟೆ " ಎಂದ ಕೋಪದಿಂದ.
ಈಗ ನನಗೆ ಜ್ಞಾನೋಧಯವಾಗಿತ್ತು, ಅವನ ಅಸಮದಾನಕ್ಕೆ ಕಾರಣ ಏನು ಎಂದು , ಅವನು ಹೇಳೂವುದು ಸರಿಯೆ ಇಂತ ಸೂಕ್ಷ್ಮಗಳೆಲ್ಲ ಆ "ಅಣ್ಣಾ" ರವರಿಗೆ ಅರ್ಥವಾಗಲ್ಲ ಅನ್ನಿಸಿತು. ಸರಿ ನನ್ನ ಕಂಪ್ಲೇಟ್ ಬರೆದಿದ್ದು ಮುಗಿದಿತ್ತು,
ಅವನಿಗೆ ಕೊಟ್ಟೆ ಅವನು ಅದನ್ನು ಪಡೆದು ರಸೀತಿ ಕೊಟ್ಟ, ನಾನು "ತುಂಬಾ ಉಪಕಾರ ಆಯ್ತು ಸರ್ " ಅಂತ ಹೇಳಿ ಹೊರಟೆ
ಅವನು ಕೂಗಿದ , ಇದ್ದಕಿದ್ದ ಹಾಗೆ ಅವನ ದ್ವನಿ ಬದಲಾಗಿತ್ತು, "ರೀ ಯಜ್ಮಾನ್ರೆ ನೋಡಿ ನೀವು ಮಾಡೋದು ಸರೀನ? ಏನು ಕೊಡಲಿಲ್ಲ ಹಾಗೆ ಹೊರಟುಬಿಟ್ಟಿರಿ" ಎಂದ.
ನನಗೆ ಆಶ್ಚರ್ಯ ಹಣ ಯಾಕೆ , ಹಾಗೆ ಕೇಳಿದೆ " ಏನ್ಸಾರ್ ನನ್ನದೆ ಮೊಬೈಲ್ ಕಳೆದಿದೆ , ಬರಿ ಕಂಪ್ಲೇಟ್ ಮಾಡಕ್ಕು ಮಾಮೂಲಿ ಕೊಡಬೇಕಂದ್ರೆ ಹೇಗೆ ?"
ದೆಹಲಿ ಆಣ್ಣ ನವರ ಹೋರಾಟದಿಂದ ನನಗೆ ಸ್ವಲ್ಪ ಸ್ಪೂರ್ತಿ ಬಂದಿತ್ತು.
ಅದಕ್ಕವನು " ರೀ ಸ್ವಾಮಿ ನಿಮ್ಮ ಮಾಮೂಲಿ ಯಾರಿ ಕೇಳಿದ್ರು, ಅಲ್ಲರಿ ನಮ್ಮ ಕೈಲಿ ಪೇಪರ್ ಪಡೆದು ಕಂಪ್ಲೇಟ ಬರೆದಿರಿ ಅದರ , ಆ ಪೇಪರಿನ ಹಣ ಕೊಡಬೇಕಾದು ಧರ್ಮ ತಾನೆ?" ಎಂದ.
ನನಗೆ ಸಮಧಾನವಾಯಿತು, ಅವನು ಹೇಳುವುದು ಸರಿ ಇದೆ, ಏನೆ ಪಡೆಯಲಿ ಚಿಕ್ಕದೆ ಆಗಿರಲಿ , ಬಿಟ್ಟಿ ಪಡೆಯಬಾರದು ಅದರ ಹಣ ಕೊಡಲೆ ಬೇಕನ್ನುವುದು ಸರಿಯೆ " ಓ ಅದಾ ಸರಿ ಸರಿ ಎಷ್ಟು" ಅನ್ನುತ್ತ , ಚಿಲ್ಲರೆ ಹಣ ತೆಗೆಯಲು ಹಿಪ್ ಪ್ಯಾಕೆಟ್ ಗೆ ಕೈ ಹಾಕಿದೆ
"ಅದೆ ಸರ್, 250 ರೂಪಾಯಿ ಕೊಟ್ಟು ಹೋಗಿ ಆ ಪೇಪರ್ ಬೆಲೆ " ಅಂದ, ನಗುತ್ತ
ನಾನು ಆ,,,,,, ಎಂದು ಬಾಯಿ ತೆಗೆದೆ, ಅದನ್ನು ಮುಚ್ಚಿಸಲು ದೆಹಲಿಯಿಂದ ಅಣ್ಣನೆ ಬರಬೇಕು.
================================================================
Comments
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by gopaljsr
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by gopaljsr
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by sathishnasa
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by Jayanth Ramachar
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by gowri parthasarathy
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by ಗಣೇಶ
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by partha1059
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by gowri parthasarathy
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by Jayanth Ramachar
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by partha1059
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by gopinatha
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by manju787
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by Prabhu Murthy
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
In reply to ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ) by kavinagaraj
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)
ಉ: ಕಾಲ ಕೆಟ್ಟೋಯ್ತು ಬಿಡಿಸಾರ್ (ಲಘು ಹಾಸ್ಯ)