ಕಿಚ್ಚು :: ಭಾಗ -೧೦
ಕಿಚ್ಚು :: ಭಾಗ - ೧೦
ಹಿಂದಿನ ಕಂತು : http://sampada.net/…
೧೯
ಮನೆ ಬಿಟ್ಟು ೫ ತಿಂಗಳಾಯಿತು, ನನಗೆ ಬೆಂಗಳೂರಿನಲ್ಲಿ ಯಾವುದೇ ಹೆಚ್ಚಿನ ಖರ್ಚು ಇರಲಿಲ್ಲ ೨೫೦ ರುಪಾಯೀ ನನ್ನ ಹೊರಗಿನ ಖರ್ಚಿಗೆ ಸಾಕಾಗುತ್ತಿತ್ತು, ಹೋಟೆಲ್ ಆದ ಕಾರಣ ಊಟ ವಸತಿ ಎಲ್ಲಾ ಪುಕ್ಕಟೆ ಯಾಗಿಯೇ ನಡೆದು ಹೋಗುತಿತ್ತು. ತಿಂಗಳ ಸಂಬಳ ಬಂದಂತೆ ವಸುಂದರನಿಗೆ ಕಳುಹಿಸುತಿದ್ದೆ. ಅವಳು ನನ್ನ ತಂಗಿ ತಮ್ಮಂದಿರ ಶಿಕ್ಷಣ ಮತ್ತು ಆರೈಕೆಯನ್ನು ಯಶೋದಮ್ಮನ ಸಹಾಯದಿಂದ ಮಾಡುತಿದ್ದಳು. ನನ್ನ ಪಾಲಿನ ೨೫೦ ರುಪಾಯೀಯಲ್ಲಿ ನನ್ನ ಖರ್ಚು ಬಿಟ್ಟು ೫ ತಿಂಗಳಲ್ಲಿ ನನ್ನಲ್ಲಿ ಉಳಿದ ೬೦೦ ರುಪಾಯೀಯ ಒಂದು ರೇಷ್ಮೆ ಸೀರೆಯನ್ನು ಅವಳಿಗಾಗಿ ನಾ ೨ ವಾರದ ಹಿಂದೆ ಕಳುಹಿಸಿಕೊಟ್ಟಿದ್ದೆ.
ಬರ ಬರುತ್ತಾ ಹೋಟೆಲ್ ನ ಯಜಮಾನರಾದ ರಾಮರಾಯರಿಗೆ ನಾನು ಹತ್ತಿರವಾಗುತ್ತಾ ಹೋದೆ, ನನ್ನಲ್ಲಿ ಅವರಿಗೂ ವಿಶ್ವಾಸವು ಹೆಚ್ಚುತ್ತಾ ಹೋಯಿತು, ಪರಿಣಾಮ ನನ್ನಲ್ಲಿ ಹೆಚ್ಚಿನ ಜವಾಬ್ಧಾರಿ ಹೇರಲು ಆರಂಭಿಸಿದರು.ಅವರು ನನ್ನನ್ನು ಕರೆದು ತನ್ನ ಮುಂಬೈಯಲ್ಲಿನ ಹೋಟೆಲ್ ನ ಮೇಲ್ವಿಚಾರಣೆಯಲ್ಲಿ ಸಹಾಯ ಮಾಡುವಂತೆ ಕೇಳಿದರು, ನಾನು ಅದಕ್ಕೆ ಸಮ್ಮತ್ತಿಸಿದೆ. ಸಂಬಳವನ್ನು ೭೫೦ ರಿಂದ ಸೀದಾ ೧೦೦೦ ರುಪಾಯಿಗೆ ಏರಿಸುವ ಮಾತಾಯಿತು.
ಪ್ರತಿವಾರವೂ ಅವಳು ನನಗಾಗಿ ಪತ್ರ ಬರೆಯುತ್ತಿದ್ದಳು,ನಾನು ಕೆಲಸದ ಒತ್ತಡದಲ್ಲಿ ಕಾಗದ ಬರೆಯುವುದು ಕಮ್ಮಿಯಾಗುತ್ತ ಬಂದಿತ್ತು ,ಅವಳಿಗೆ ನನಗೆ ಮುಂಬೈನಲ್ಲಿ ಕೆಲಸ ಸಿಕ್ಕಿದ ವಿಚಾರ ಬರೆಯುವ ಎಂದು ಶುರು ಮಾಡುವಾಗಲೇ ಬಂದ ಪೋಸ್ಟ್ ಮಾನ್ ನನ್ನಲ್ಲಿ ಅವಳು ಬರೆದ ಕಾಗದ ಕೈಗಿಟ್ಟ.
"ಪ್ರಿಯ ,
ನಿನ್ನ ಬಿಟ್ಟು ಬಾಳಲು ತುಂಬ ಹಿಂಸೆ ಅನಿಸುತ್ತಿದೆ, ಆದರೆ ಯಶೋದಮ್ಮ ಯಾವುದಕ್ಕೂ ತೊಂದರೆ ಇಲ್ಲದಂತೆ , ಅವರ ಹೆತ್ತ ಮಗಳಂತೆ ನನ್ನನ್ನು ನೋಡುತಿದ್ದಾರೆ,ನಿಮ್ಮ ಆಸೆಯಂತೆ ಪ್ರತಿ ಎರಡು ದಿನಕ್ಕೊಮ್ಮೆ ನಿಮ್ಮ ಮನೆಯವರ ಕುಶಲೋಪರಿ ತಿಳಿಯಲು ಧಾವಿಸುತ್ತಾರೆ, ತಂಗಿ -ತಮ್ಮಂದಿರೆಲ್ಲರೂ ಅಲ್ಲಿ ಕ್ಷೇಮವಾಗಿದ್ದರಂತೆ, ಅವರ ಚ್ಚುಚ್ಚುಮಾತು ನಾನು ಎಲ್ಲಿ ಕೆಳಬೇಕಾಗುತ್ತೋ ಅಂತ ಹೇಳಿ ನನ್ನನ್ನು ಇಲ್ಲಿವರೆಗೆ ಅವರು ನಿಮ್ಮ ಮನೆಗೆ ಕರಕ್ಕೊಂಡು ಹೋಗಿಲ್ಲ.
ನಿಮಗಾಗಿ ಒಂದು ಸಂತಸದ ಸುದ್ದಿ ಇದೆ , ಅದೇನೆಂದರೆ ,ನಮ್ಮಿಬ್ಬರ ಪ್ರೇಮ ಕುಡಿಗೆ ಆಗಲೇ ೫ ತಿಂಗಳು ತುಂಬಿದೆ .ಆದರೆ ಈ ವಿಚಾರವನ್ನು ನೀವು ಊರಿಗೆ ಬಂದಾಗ ಹೇಳಿ ನಿಮಗೆ surprise ಕೊಡಲು ಬಯಸಿದ್ದೆ , ಕೆಲಸದ ಜವಾಬ್ಧಾರಿಯಲ್ಲಿ ನಿಮಗೆ ಊರಿಗೆ ಬರಲಾಗಲಿಲ್ಲ ಅನ್ನುವ ಮಾತಿಗೆ ನನಗೆ ತುಂಬಾ ದುಃಖವಿದೆ.
ಯಶೋದಮ್ಮನವರು ಪಂಡಿತರಲ್ಲಿ ವಿಚಾರಿಸಿ ಮುಂದಿನ ತಿಂಗಳ ೨೪ ನೇ ತಾರೀಖಿನಂದು ನನ್ನ ಸೀಮಂತ ಶಾಸ್ತ್ರ ಇಟ್ಟು ಕೊಂಡಿದ್ದಾರೆ, ಅದಕ್ಕೆ ತಪ್ಪದೆ ಬನ್ನಿ, ನಿಮಗಾಗಿ ನಾನು ಕಾಯುತ್ತಲಿರುವೆ,
ನೀವು ಕಳುಹಿಸಿದ ಹಸಿರು ಸೀರೆ ಆ ಶಾಶ್ತ್ರಕ್ಕೆ ತಕ್ಕದಾದದ್ದು ಎಂದು ಯಶೋದಮ್ಮ ಅಂದಾಗ ನೀವು ನನ್ನಿಂದ ದೂರ ಇದ್ದರೂ ನನ್ನಲ್ಲಿ ಜೀವ ತಳೆದ ನಮ್ಮ ರಕ್ತ ಸಂಭಂದದ ಬಲ ಎಷ್ಟು ಗಾಡವಾಗಿರುವುದು ಎಂದು ಅರಿತುಕ್ಕೊಂಡೆ.
ನಿಮ್ಮ ಯಜಮಾನರಲ್ಲಿ ೧ ವಾರದ ರಜೆ ಕೇಳಿಕ್ಕೊಂಡು ಬನ್ನಿ, ನಿಮ್ಮ ದಾರಿ ಕಾಣುತ್ತಾ ಇರುವ
ನಿಮ್ಮ
ವಸು "
ಪತ್ರ ಓದುತ್ತಿದ್ದಂತೆ ವರ್ಣಿಸಲಾಗದಷ್ಟು ಖುಷಿ ಪಟ್ಟೆ,ಎರಡೆರಡು ಸಿಹಿ ಸುದ್ದಿ ಒಮ್ಮೆಲೇ ಬಂದಿತ್ತು.ಮುಂದಿನ ತಿಂಗಳು ೨೪ ಅಂದರೆ ಇನ್ನೂ ೪೦ ದಿನವಿದೆ , ಆ ೨೪ಕ್ಕೆ ನಾನು ಊರಿಗೆ ಹೋಗಲು ನಿರ್ಧರಿಸಿದ,
ನನ್ನ ಪ್ರತಿಪತ್ರದಲ್ಲಿ ಅವಳಿಗೆ ನನ್ನ ಕೆಲಸದಲ್ಲಿನ ಭಡ್ತಿ, ಮತ್ತು ಮುಂಬೈಗೆ ನನ್ನ ವರ್ಗದಬಗ್ಗೆ ಬರೆದೆ, ಮುಂಬೈನಿಂದಲೇ ನಾನು ಒಂದು ವಾರದ ರಜೆಯಲ್ಲಿ ಮನೆಗೆ ಬರುವೆ ಎಂದು ಬರೆದು ಕಾಗದ ಪೋಸ್ಟ್ ಮಾಡಿದೆ.
ರಾಮರಾಯರಲ್ಲಿ ಈ ಕುರಿತು ಹೇಳಿದಾಗ ಅವರು ಒಂದುವಾರದ ರಜೆಗೆ ಒಪ್ಪಿಗೆ ಕೊಟ್ಟರು .ನಾನು ಮುಂದಿನ ೪೦ ದಿನ ಹೇಗೆಕಳೆಯಲಿ ಎಂಬ ಚಿಂತೆಯಲ್ಲೇ ನಿದ್ದೆಗೆ ಜಾರಿದೆ.
ಮುಂದಿನ ಕಂತು:: : http://sampada.net/…