ಕಿಚ್ಚು :: ಭಾಗ - ೧೧
ಕಿಚ್ಚು :: ಭಾಗ - ೧೧
ಹಿಂದಿನ ಕಂತು : http://sampada.net/…
೨೦
ಮುಂಬೈ ,ಕನಸಿನ ನಗರಿ, ಎಲ್ಲವನ್ನು ಮರೆಯುವಂತೆ ಮಾಡಿತು. ಕಣ್ಣು ಹಾಯಿಸಿದಷ್ಟು ದೂರ ಹಳದಿ ತಲೆಯ ಕಾರುಗಳ ಸಾಲು ಸಾಲು ,ರಸ್ತೆಯ ಇಕ್ಕೆಲಗಳಲ್ಲಿ ಗಗನಚುಂಬಿ ಕಟ್ಟಡಗಳ ಸಾಲು,ಪ್ರತಿ ೫,೧೦ ನಿಮಿಷಕ್ಕೆ ಬರುವ ಮುಂಬೈನ ನಾಡಿ ಲೋಕಲ್, ತುಂಬಿ ತುಳುಕುತ್ತಿರುವ BEST ಬಸ್ ಗಳು, ಭಾರತದ ಎಲ್ಲ ಭಾಷೆಗಳ ಜನರು ಸಿಗುವತಾಣ ನನ್ನನ್ನು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ವಾತಾವರಣವನ್ನೇ ಮರೆಸುವಂತೆ ಮಾಡಿತು, ಜೊತೆಗೆ ಮುಂಬೈಗೆ ಬಂದ ಮೇಲೆ ಒಂದು ಚೂರು ಪುರೋಸೋತ್ತು ಸಿಗದಷ್ಟು ಜವಾಬ್ದಾರಿ.
ರಾಮರಾಯರು ಮುಂಬೈ ಹೋಟೆಲಿನ ಬಹುತೇಕ ಎಲ್ಲ ಜವಾಬ್ದಾರಿಯನ್ನು ನನ್ನ ಮೇಲೆ ವಹಿಸಿದ್ದರು,ಲೆಕ್ಕಪತ್ರ ಮೇಲ್ವಿಚಾರಣೆಗೆ ಒಬ್ಬ ಅಧಿಕಾರಿ ನೇಮಿಸಿದ್ದರು. ೧೫ ದಿನಗಳಿಗೊಮ್ಮೆ ಬಂದು ಆ ಲೆಕ್ಕಪತ್ರಗಳನ್ನು ನೋಡುತ್ತಿದ್ದರು.
ಇವತ್ತು ರಾಮರಯರನ್ನು ಕರೆತರಲು ನಾನೇ ರೈಲ್ವೆ ಸ್ಟೇಷನ್ ಗೆ ಹೋಗಿದ್ದೆ, ಅವರಲ್ಲಿ ನಾನು ಊರಿಗೆ ಹೋಗುವ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದೆ, ಆಗ ಅವರು ಮುಂದಿನ ೨೫ ನೇ ತಾರೀಖಿನಂದು ಮುಂಬೈನಲ್ಲಿ ಇನ್ನೊಂದು ಹೋಟೆಲ್ ಅನ್ನು ಖರೀದಿಸುತ್ತಿದ್ದೇನೆ ಆದಕಾರಣ ನೀನು ಊರಿಗೆ ಹೋದರೆ ತುಂಬಾ ತೊಂದರೆಯಾಗುತ್ತದೆ, ಆ ಕೆಲಸ ಮುಗಿದಮೇಲೆ ನೀನು ಆರಾಮಾಗಿ ಒಂದು ತಿಂಗಳಮಟ್ಟಿಗೆ ಊರಿಗೆ ಹೋಗು ಎಂದರು.ಮೊದಲಿಗೆ ಬೇಜಾರಾಯಿತು, ನಂತರ ಆಲೋಚಿಸಿದಾಗ ಅವರಂದದ್ದು ಸರಿ ಎನಿಸಿತು, ಬಸರಿ ಬಯಕೆ ಹೆಂಗಸರ ಕೆಲಸ ಅದಕ್ಕೆ ನನ್ನ ಗೈರು ಅಷ್ಟೇನೂ ದೊಡ್ದದೆನಿಸುವುದಿಲ್ಲ, ಅವಳ ಹೆರಿಗೆಯ ಸಮಯದಲ್ಲಿ ಅವಳೊಂದಿಗೆ ಇರುವುದು ಸೂಕ್ತವೆನಿಸಿತು.ಅವರಲ್ಲಿ ಅದಕ್ಕೂ ಒಪ್ಪಿಕ್ಕೊಂಡೆ.
ವಸುಂದರನಿಗೆ ಮುಂಬೈಗೆ ಬಂದ ಬಳಿಕ ಪತ್ರ ಬರೆದಿರಲಿಲ್ಲ, ಈ ಕುರಿತು ನಾನು ಪತ್ರ ಬರೆದು ವಸುಂದರನಿಗೆ ಮುಂಬೈ ವಿಳಾಸನೂ ಪೋಸ್ಟ್ ಮಾಡಿದೆ.ಸಂಜೆ ರಾಯರು ಹಿಂತಿರುಗುವ ವೇಳೆಗೆ ನನ್ನನ್ನು ಕರೆದು ಅವರೊಂದಿಗೆ ಬೆಂಗಳೂರಿಗೆ ಬರುವಂತೆ ಹೇಳಿದರು, ಮುಂದಿನ ತಿಂಗಳು ಕೊಳ್ಳಲಿರುವ ಹೋಟೆಲ್ ನ ಮುಂಗಡ ಹಣದಲ್ಲಿ ಬಾಕಿ ಇರುವ ಹಣವನ್ನು ಬೆಂಗಳೂರಿನಿಂದ ನನ್ನ ಕೈಯಲ್ಲಿ ಕಳುಹಿಸಿ ಕೊಡುವ ಮಾತಾಡಿದರು, ನಾನು ಸರಿ ಎಂದು ಒಪ್ಪಿಕ್ಕೊಂಡೆ. ಅವರೊಂದಿಗೆ ನಾನು ಸಂಜೆ ಬೆಂಗಳೂರು ಟ್ರೈನ್ ಹತ್ತಿದೆ.
ಒಂದು ತಿಂಗಳ ನಂತರ ಬೆಂಗಳೂರಿನ ನನ್ನ ಹಳೆ ಗೆಳೆಯರನ್ನೆಲ್ಲ ಭೇಟಿಯಾದೆ, ಆದರೆ ನನ್ನೊಂದಿಗೆ ಹೋಟೆಲ್ ಸರಿದ ಗಣೇಶ್ ಅಣ್ಣ ಕಾಣಲಿಲ್ಲ, ಅವನ ಜಾಗದಲ್ಲಿದ್ದ ಇನ್ನೊಬ್ಬ ಹೊಸ ಸೆಕ್ಯೂರಿಟಿ ಯವನಲ್ಲಿ ವಿಚಾರಿಸಿದಾಗ ಅವನು ರಜೆಯಲ್ಲಿರುವುದು ತಿಳಿಯಿತು, ಸಂಜೆ ನನ್ನ ಟ್ರೈನ್ ಇದ್ದಿದ್ದು ಸಂಜೆ ವರೆಗೆ ಮಾಡಲು ಬೇರೆ ಕೆಲಸವೂ ಇರಲಿಲ್ಲ ರಾಮರಾಯರು ನನ್ನನ್ನು ಸಂಜೆ ಮನೆಗೆ ಬಂದು ಹಣ ಪಡೆಯಲು ಹೇಳಿದ್ದರು ಅಲ್ಲಿವರೆಗೆ ನಾನು ಅಣ್ಣನ್ನೊಂದಿಗೆ ಇರಬಹುದು ಎಂದು ನಾನು ಅಣ್ಣನ ಮನೆಯೆಡೆಗೆ ಹೋದೆ.
ಗಣೇಶಣ್ಣನಿಗೆ ಸಲ್ಪ ಮಟ್ಟಿನ ಜ್ವರವಿತ್ತು, ಒಂದು ಮೂಲೆಯಲ್ಲಿ ಮಲಗಿದ್ದ ನನ್ನನ್ನು ನೋಡುತ್ತಿದ್ದಂತೆ ನನ್ನಲ್ಲಿ ನನ್ನ ಕುಶಲೋಪರಿ ಎಲ್ಲ ವಿಚಾರಿಸಿದ ಬಳಿಕ ನನ್ನಲ್ಲಿ "ಜನಾರ್ಧನ ಅಲ್ಲಿ ಬದಿಯ ಸೆಲ್ಫ್ ನಲ್ಲಿ ನಿನಗೆ ವಸು ಬರೆದಿರುವ ಮೂರು ಪತ್ರ ಇದೆ ನೋಡು ತೆಗೆದು ಕೋ ..."ಅಂದ.
ನಾನು ನನ್ನ ವಸುಗೆ ಪತ್ರ ಬರೆಯುದನ್ನು ಮರೆತರು ವಸು ಪ್ರತಿವಾರ ನನಗೆ ಪತ್ರ ಬರೆಯುತ್ತಿದ್ದಳು.ಒಂದೊಂದಾಗಿ ಪತ್ರ ಓದಲು ತೊಡಗಿದೆ, ಎಲ್ಲದರಲ್ಲೂ ಮುತ್ತಿನಂತಹ ಮಾತುಗಳಿದ್ದವು, ನನ್ನಲ್ಲಿ ಆಗಲೇ ಬಾಡಿದ್ದ ಪ್ರೀತಿ ಮತ್ತೆ ಚಿಗುರತೊಡಗಿತು. ಇನ್ನೇನು ನಾನು ಅವಳನ್ನು ನೋಡಲು ಹೋಗುತ್ತೇನೆ ಎಂದು ಖುಷಿ ಪಟ್ಟೆ.
ಅಣ್ಣನಿಗೆ ಗಂಜಿ ಮತ್ತು ಪಲ್ಯ ಮಾಡಿದೆ ಇಬ್ಬರು ಮಾತನಾಡುತ್ತಲೇ ಊಟ ಮಾಡುವಾಗ ಪೋಸ್ಟ್ ಮ್ಯಾನ್ ಇನ್ನೊಂದು ಪತ್ರದೊಂದಿಗೆ ಬಾಗಿಲು ಬಡಿಯುತಿದ್ದ. ಬಾಗಿಲು ತೆರೆದು ಪತ್ರ ಸ್ವೀಕರಿಸಿದೆ.
ನನಗಾಗಿಗೆ ಬಂದಿದ್ದ ಪತ್ರವಾಗಿತ್ತು ಆದರೆ ಅದರಲ್ಲಿದ್ದ ಹಸ್ತಾಕ್ಷರ ನನ್ನ ವಸುದ್ದು ಆಗಿರಲಿಲ್ಲ, ಕುತೂಹಲದಿಂದಲೇ ಆ ಪತ್ರ ಓದಲು ತೊಡಗಿದೆ
"ಯಶೋಧ ಮಾಡುವ ನಮಸ್ಕಾರಗಳು,
ವಸುಂದರನೊಂದಿಗೆ ಒಂದು ಕೆಟ್ಟ ಘಟನೆ ನಡೆದು ಹೋಗಿದೆ, ಇದ್ದಕ್ಕಿದ್ದಂತೆ ನಿನ್ನೆ ವಸುವಿಗೆ ಹೊಟ್ಟೆ ನೋವು ಕಾಣಿಸಿತು,೭ ತಿಂಗಳಲ್ಲೇ ಇಂತಹ ನೋವು ಬರುವುದು ಸಾಮಾನ್ಯ ,ಸಾಮಾನ್ಯ ಬಸಿರು ನೋವು ಎಂದು ನಾವಂದುಕ್ಕೊಂಡಿದ್ದೆವು, ಅವಳೊಂದಿಗೆ ಅವಳನ್ನು ಕರಕ್ಕೊಂಡು ಡಾಕ್ಟರ್ ಬಳಿಗೆ ಹೋದಾಗ ಅವರು ವಸುಂದರನ ಶರೀರ ಪ್ರಸವ ಕ್ರಿಯೆಗೆ ಯೋಗ್ಯವಾಗಿ ಬೆಳೆದಿಲ್ಲ, ಆದಕಾರಣ ಹೊಟ್ಟೆಯಲ್ಲಿನ ಮಗುವಿನ ಉಸಿರಾಟದಲ್ಲಿ ತೊಂದರೆ ಉಂಟಾಗಿ ಮಗು ಸತ್ತು ಹೋಗಿದೆ, ಅಂದರು.
೨ ಘಂಟೆ ಒಳಗಾಗಿ ನಾನು ಆಸ್ಪತ್ರೆ ತಲುಪಿದರಿಂದ ಅವಳು ಸಾವಿನಿಂದ ಪಾರಾದಳು, ಇನ್ನೂ ಅವಳಿಗೆ ಬೋಧಬಂದಿಲ್ಲ.
ನಿಮ್ಮ ವಿಳಾಸವನ್ನು ಅವಳ ಪುಸ್ತಕದಿಂದ ಪಡೆದು ನಿಮಗೆ ಪತ್ರ ಬರೆಯುತ್ತಿದ್ದೇನೆ, ನಿಮ್ಮ ತಮ್ಮ ಜನಾರ್ಧನನಿಗೆ ಬೇಗನೆ ಸುದ್ದಿ ತಿಳಿಸಿ ,ಅವನನ್ನು ಊರಿಗೆ ಬರುವಂತೆ ಹೇಳಿ, ವಸುಂದರ ಅವನ ದಾರಿಕಾಯುತ್ತಾ ಇದ್ದಾಳೆ.
ಇಂತಿ
ಯಶೋಧ "
ಪತ್ರ ಓದುತಿದ್ದಂತೆ ಕಣ್ಣು ಮಂಜಾಯಿತು , ಶರೀರ ಕಲ್ಲಾಯಿತು, ಬೆಂಗಳೂರಿನಿಂದ ಸೀದಾ ಮಂಗಳೂರಿಗೆ ಹೋಗುವ ಅಂದುಕ್ಕೊಂಡೆ, ಅಣ್ಣನ ಮನೆ ಬಿಟ್ಟು ಸೀದಾ ರಾಮರಾಯರ ಮನೆ ತಲುಪಿದೆ, ಅವರಲ್ಲಿ ನಾನು ಈ ವಿಚಾರ ಮಾತಾಡಿದೆ ಆಗ ಅವರು "ಜನಾರ್ಧನ ನೀನು ಮನೆಗೆ ಹೋಗುವುದು ಸೂಕ್ತ , ಆದರೆ ನನ್ನ ಕಷ್ಟ ಅರ್ಥಮಾಡಿಕೋ, ಬೇರೆ ಯಾರಲ್ಲಿ ನನಗೆ ನಂಬಿಕೆ ಇಲ್ಲ , ಒಂದೇ ಬಾರಿಗೆ ೧ ಲಕ್ಷ ರುಪಾಯೀ ಕಳುಹಿಸಿ ಕೊಡಲು, ನಾಳೆ ಒಳಗೆ ನಾನು ತಲುಪಿಸಬೇಕು ಇಲ್ಲಂತಾದರೆ ನನಗೆ ಕರಾರಿನಂತೆ ಶಿಕ್ಷೆ ಆದರೂ ಆಗಬಹುದು,ನೀನು ನಾಳೆ ಆ ಹಣ ಅಲ್ಲಿ ತಲುಪಿಸಿ ಅಲ್ಲಿಂದ ಮಂಗಳೂರು ಸೇರು, ಮನೆಯ ಎಲ್ಲ ಕಾರ್ಯ ಮುಗಿಸಿ ವಸುವನ್ನು ಕರಕ್ಕೊಂಡು ನೀನು ಆರಾಮಾಗಿ ಮುಂಬೈ ಸೇರು, ಎಷ್ಟು ದಿನ ತಡವಾದರೂ ಪರವಾಗಿಲ್ಲ, ನಾನೇನು ಅನ್ನುವುದಿಲ್ಲ, ಆದರೆ ನಾಳಿನ ಕೆಲಸ ಮಾತ್ರ ಇಲ್ಲ ಅನ್ನಬೇಡ"
ರಾಯರು ನನ್ನನ್ನು ಮಾತಿನ ಚಕ್ರವ್ಯುಹಕ್ಕೆ ಸಿಲುಕಿಸಿದರು, ನನ್ನನ್ನು ಅವರುಮಾತಿಗೆ ಒಪ್ಪುವಂತೆ ಮಾಡಿದರು,ನಾನು ಸರಿ ಎಂದು ಮತ್ತೆ ಮುಂಬೈ ಟ್ರೈನ್ ಹಿಡಕ್ಕೊಂಡೆ.ಕೈಯಲ್ಲಿ ೧ ಲಕ್ಷ ರುಪಾಯಿ , ತಲೆಯಲ್ಲಿ ವಸುಂದರ ನೋಟ್ಟಿಗೆ ನಡೆದ ಘಟನೆ ನಿದ್ದೆಯೇ ಹತ್ತದಂತೆ ಮಾಡಿತು, ಮಾರನೆದಿನ ಮದ್ಯಾನ್ನದ ಹೊತ್ತಿಗೆ ಮುಂಬೈ ತಲುಪಿದೆ, ಅಲ್ಲಿಂದ ಸೀದಾ ಹಣ ಒಪ್ಪಿಸಬೇಕಾದವರಿಗೆ ಒಪ್ಪಿಸಿದೆ.
ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಯಾವುದೇ ಟ್ರೈನ್ ಇಲ್ಲ ಬಸ್ಸ್ ಇಪ್ಪತ್ತೈದು ವರ್ಷಗಳ ಹಿಂದೆ ಇರಲಿಲ್ಲ, ತಡವಾಗಿ ಮನೆ ಸೇರಲು ಮನಸಿರಲಿಲ್ಲ ಅದರಿಂದ ನಾನು ಮುಂಬೈನ ಹೊರವಲಕ್ಕೆ ಬಂದು ಈ ಬದಿಗೆ ಬರುವ ಲಾರಿ ಹತ್ತಿಕ್ಕೊಂಡೆ.
ಮುಂದಿನ ಭಾಗ : http://sampada.net/…
Comments
ಉ: ಕಿಚ್ಚು :: ಭಾಗ - ೧೧
In reply to ಉ: ಕಿಚ್ಚು :: ಭಾಗ - ೧೧ by sharadamma
ಉ: ಕಿಚ್ಚು :: ಭಾಗ - ೧೧