ಕುಂಗ್ ಫೂ
ಬೆಳಗ್ಗೆನೇ ಗೌಡರು ಮನೆಯಲ್ಲಿ ದಡಾ ಬಡಾ ಸವಂಡ್ ಬತ್ತಾ ಇತ್ತು. ಮನ್ಯಾಗೆ ಇರೋ ಡಬ್ಬಗಳೆಲ್ಲಾ ಮಡಚ್ಕಂಡಿದ್ವು. ಬಾಗಿಲು ತೆಗೆದರೆ ಗೌಡಪ್ಪ, ಹೆಂಡರು, ಮಕ್ಕಳು ಎಲ್ಲಾ ಕರಾಟೆ ಪ್ರಾಕ್ಟೀಸ್ ಮಾತ್ತಾ ಇದ್ರು. ಗೌಡ್ರೆ ಏನ್ರೀ ಇದು ಅಂದೆ. ನೋಡಲಾ ನಮ್ಮ ದೇಹವನ್ನು ರಕ್ಸಣೆ ಮಾಡಬೇಕು ಅಂದ್ರೆ ಇವೆಲ್ಲಾ ಕಲಿಬೇಕು ಅಲಾ. ಬ್ರೂಸ್ಲಿದು ಕರಾಟೆ. ಇದು ಜಾಕಿಚಾನ್ ಕುಂಗ್ ಫೂ ಕಲಾ. ಈ ವಿದ್ಯೆ ನಿಮಗೆ ಯಾರು ಹೇಳಿಕೊಟ್ಟಿದ್ದು ಅಂದೆ. ಇಲ್ಲಿ ನೋಡ್ಲಾ ಅಂದು ಒಂದು ನಾಕು ಜಾಕಿಚಾನ್ ಸಿಡಿ ತೋರ್ಸದ. ಇದನ್ನ ನೋಡಿ ನಾವು ಪ್ರಾಕ್ಟೀಸ್ ಮಾತ್ತಾ ಇದೀವಿ ಅಂದು ಮಗಾ ನಾಕು ಸ್ಟೈಲ್ ತೋರಿಸಲಾ ಅಂದ.
ಗೌಡಪ್ಪನ ಮಗಾ ಒಟ್ಟಿಗೇ ನಾಕು ಹಂಚು ಒಡೆಯೋನು. ಅಬ್ಬಬ್ಬಾ ಏನ್ ಸಕ್ತಿ ರೀ ಅಂದೆ. ಹೌದು ಹಂಚು ಎಲ್ಲಿಂದ ತಂದ್ರಿ ಅಂದೆ. ಅದೆಲ್ಲಾ ಬೇಡ ಕಲಾ ಅಂದ. ಮೊನ್ನೆ ತಂಬೂರಿ ತಮ್ಮಯ್ಯ ಅಂತಿದ್ದ ನಮ್ಮ ಮನೆ ಹಂಚು ಕಳ್ತನಾ ಆಗ್ತೈತಿ ಅಂತಾ ನೀವೇನಾದ್ರೂ ಅಂತಿದ್ದಾಗೆನೇ, ಗೌಡಪ್ಪ ಅವನ ಹೆಂಡರಿಗೆ ಬೈಟೂ ಸುಗರ್ ಲೆಸ್ ಚಾ ತೊಗಂಡ್ ಬಾ ಅಂದ ಅಷ್ಟೆ,. ಯಾ ಅಂತಾ ಆ ಯಮ್ಮ ನೈಟಿ ಎತ್ಕಂಡು ಚೇರ್ ಮೇಲಿಂದ ಹಾರಿ ಗೌಡಪ್ಪಂಗೆ ಒದ್ದು, ಹಾಲಿಲ್ಲ ಹಿಂದಗಡೆ ಎಮ್ಮೆ ಐತೆ ಕರ್ಕಂಡ್ ಬಾರಲಾ ಅಂದ್ಲು. ಗೌಡಪ್ಪ ಗೋಡೆಗೆ ಹಲ್ಲಿ ತರಾ ಅಂಟ್ಕಂಡಿದ್ದ. ಮೊಗಚಿ ಕಾಯಿನಾಗೆ ದೋಸೆ ತೆಗೆದಂಗೆ ತೆಗೆದೆ. ಅಮ್ಮಾ, ಲೇ ಅಲ್ಲಿಂದಲೇ ಹೇಳಬಹುದಿತ್ತಲೇ ಅಂದ. ಕೋಮಲ್ ಗೆ ನಾನು ಕಲಿತರೋದು ಗೊತ್ತಾಗೋದು ಬ್ಯಾಡವಾ ಅಂತು.
ಸರಿ ಗೌಡಪ್ಪನ ತೋಟಕ್ಕೆ ಹೋದರೆ ಒಂದು ನಾಲ್ಕು ಲೋಡ್ ಆಗುವಷ್ಟು ಇಟ್ಟಿಗೆ ಸುಡಿಸ್ತಾ ಇದ್ದ. ಅಲ್ಲೇ ಕಟ್ಟಿಗೆ ಕಿಸ್ನ ಗುಮ್ಮಿಗೆ ಕಟ್ಟಿಗೆ ಹಾಕ್ತಾ ಇದ್ದ. ಯಾಕ್ರೀ ಗೌಡ್ರೆ ಇಟೊಂದು ಇಟ್ಟಿಗೆ. ಮನೆ ಕಟ್ಟಿಸ್ತಾ ಇದೀರಾ. ಕುಂಗ್ ಫೂ ಪ್ರಾಕಟೀಸ್ ಗೆ ಕಲಾ ಅಂದ. ಅವನ ಮಗಾ ದಿನಕ್ಕೆ ಅರ್ಧ ಲೋಡ್ ಇಟ್ಟಿಗೆ ಕೈ ನಾಗೆ ಒಡಿತಾನೆ ಕಲಾ ಅಂದ ಕಿಸ್ನ. ಮತ್ತೆ ನಿಂಗೂ ಬತ್ತದೇನ್ಲಾ ಕುಂಗ್ ಫೂ ಅಂದೆ ಕಿಸ್ನಂಗೆ. ಕಲಿಯವಾ ಅಂತಾ ಇದೀನಿ. ಆದ್ರೆ ಬಾಡಿ ಬೀದಿ ನಾಯಿ ಇದ್ದಂಗೆ ಅಯ್ತೆ. ಸಿಂಧಿ ಹಸದ್ದು ತರಾ ಆದ್ ಮ್ಯಾಕೆ ಹೇಳ್ ಕೊತ್ತೀನಿ ಅಂದ್ಯಾನೆ ಗೌಡಪ್ಪ ಅಂದ.
ಗೌಡಪ್ಪ ದಾರೀಲಿ ಬರಬೇಕಾದ್ರೆ ಎಲ್ಲಾ ಆರ್ಭಟ. ಆ, ಊಹ್, ಯಾ ಡಿಶುಂ ಅಂತಾ ಪಕ್ಕದೋರಿಗೆ ಒದೆಯೋದು, ಇದು ಹೊಸಾ ಸ್ಟೈಲು ಅನ್ನೋನು. ಸುಬ್ಬಂಗೆ ಈಗ ಡಿಚ್ಚಿ ಅಂದು ಕಣ್ಣು ಮುಚ್ಚಿಕೊಂಡ, ಯಾಕ್ರೀ ಗೌಡ್ರೆ, ನಮ್ಮ ಸಕ್ತಿಯೆಲ್ಲಾ ತೆಲೆಗೆ ಹೋಗಬೇಕೆಂದು ಯಾ ಅಂತ ಡಿಚ್ಚಿ ಹೊಡೆದ, ಸುಬ್ಬ ಅರಾಮಾಗೆ ಇದ್ದ. ಮಗಂದು ಗೌಡಪ್ಪನ ತಲೇಲಿ ಬಳ ಬಳ ಅಂತಾ ರಕ್ತ ಸುರಿಯೋದು. ಆಸ್ಪತ್ರೆಗೆ ಕರ್ಕಂಡು ಹೋಗಿ ಹೊಲಿಗೆ ಹಾಕಸ್ಕಂಡ್ ಬಂದ್ವಿ. ಸುಬ್ಬ ಏನಲಾ ಮಾಡ್ದೆ ನೀನು ಅಂದೆ. ಮಗಾ ಗೌಡಪ್ಪ ಕಣ್ಣು ಮುಚ್ಚಿ ಡಿಚ್ಚಿ ಹೊಡೆಯೋಬೇಕಾದ್ರೆ ಅಡ್ಡ ಇಟ್ಟಿಗೆ ತಂದವನೆ. ಹೆಂಗೆ ಅಂದಾ ಸುಬ್ಬಾ. ಗೌಡಪ್ಪ ಈಗ ಕಣ್ಣು ಬಿಟ್ಟೇ ಡಿಚ್ಚಿ ಹೊಡಿತಾನೆ. ಲೇ ಇವರನ್ನ ಹಿಂಗೆ ಬಿಟ್ರೆ ನಮ್ಮ ದೇಸೀ ಕುಸ್ತಿ ಹಾಳಾಗ್ತದೆ ಹೆಂಗಾದ್ರೂ ಮಾಡಿ ಇದನ್ನ ಬಿಡಸಬೇಕು ಅಂದ ತಂಬೂರಿ.
ಸರಿ ಸಿದ್ದೇಸನ ಗುಡೀಲಿ ಕುಂಗ್ ಫೂ ಪ್ರದರ್ಸನ, ಗೌಡಪ್ಪ ಅಂಡ್ ಫ್ಯಾಮಿಲಿಯಿಂದ. ಸಾನೇ ಜನಾ ಸೇರಿದ್ರು. ಮೊದಲು ಗೌಡಪ್ಪನ ಮಗ ಬಂದು ನಾನು 50 ಇಟ್ಟಿಗೆ ಒಡಿತೀನಿ ನೋಡ್ರೀ ಈಗ ಅಂದ. ಕಿಸ್ನ ತಂದು ಮೊದಲು 10 ಇಟ್ಟಿಗೆ ಮಡಗಿದ. ಗೌಡಪ್ಪನ ಮಗಾ ಹೊಡೆದೇ ಹೊಡಿತಾನೆ ಇಟ್ಟಿಗೆ ಮಾತ್ರ ಅಂಗೇ ಇತ್ತು. ಲೇ ಕಿಸ್ನ ಇಟ್ಟಿಗೆ ಯಾಕಲಾ ಒಡೀತಾ ಇಲ್ಲಾ ಅಂದಾ ಗೌಡಪ್ಪ. ನಮ್ಮ ಗುಮ್ಮಿ ಇಟ್ಟಿಗೆ ಖಾಲಿ ಆಗೈತೆ ಅಂತಾ ಪಕ್ಕದ ಪಳನಿ ಗುಮ್ಮಿಯಿಂದ ತಂದಿದ್ದೆ. ಮಗಾ ಸಾನೇ ಸುಡಸಾವ್ನೆ. ಅದಕ್ಕೆ ಕಲ್ಲು ಆದಂಗೆ ಆಗೈತೆ ಅಂದಾ. ನೋಡಿದ್ರೆ ಗೌಡಪ್ಪನ ಮಗ ಸೈಡ್ ಗೆ ಹೋಗಿ ಅರಿಸಿನ ಎಣ್ಣೆ ಹಚ್ಚಿಸ್ಕಂತಾ ಇದ್ದ. ಎಡಗೈ ಅನ್ನೋದು ಬಾತುಕೊಂಡು ಪಡವಲಕಾಯಿ ಆದಂಗೆ ಆಗಿತ್ತು. ಲೇ ನಿನ್ನೆಯಿಂದ ಹೊಟ್ಟೆ ಬೇರೆ ಸರಿಯಿಲ್ಲಾ ಅಂತಿದ್ದ, ಇನ್ನೇನ್ಲಾ ಅವನ್ ಕತೆ ಅಂತಿದ್ದ ಗೌಡಪ್ಪ.
ಈಗ ಗೌಡಪ್ಪನ ಹೆಂಡರು ಸ್ಟೈಲ್ ತೋರಿಸ್ತಾರೆ. ಎಲ್ಲಾ ಚಪ್ಪಾಳೆ. ಲೇ ನಾವೇನು ದೊಂಬರಾಟದೋರು ಏನ್ಲಾ ಅಂದಾ ಗೌಡಪ್ಪ. ಮಗಾ ನಿಂಗ ಜನರಿಂದ ಟವಲ್ ನಾಗೆ ಕಾಸು ಎತ್ತುತಾ ಇದ್ದ. ಗೌಡಪ್ಪ ಹಂಗೇ ಹಲ್ಲು ಕಡಿಯೋನು. ಸರಿ ಗೌಡಪ್ಪನ ಹೆಂಡರು ಮೊದಲನೆ ಜಂಪ್ ಚೇರ್ ಮ್ಯಾಕೆ, ಅಂಗೇ ನೆಕ್ಸ್ಟ್ ಜಂಪ್ ಗೌಡಪ್ಪನ ತೊಡೆ ಮ್ಯಾಕೆ ಇನ್ನೇನು ನೆಲದ ಮೇಲೆ ಲ್ಯಾಂಡಿಂಗ್ ಆಗಬೇಕು ಅಮ್ಮಾ ಅಂದ್ಲು. ನೋಡಿದ್ರೆ ಉದ್ಘಾಟನೆಗೆ ಅಂತಾ ತಂದಿದ್ದ ಎಣ್ಣೆ ಕೆಳಗೆ ಚೆಲ್ಲಿತ್ತು. ಮಗಾ ತಮ್ಮಯ್ಯ ಅಂಗೇ ಇರಲಿ ಅಂತಾ ಒರಸೇ ಇರ್ಲಿಲ್ಲ. ಬಿದ್ಲು ನೋಡಿ. ಎತ್ಕಂಡು ಹೋಗಿ ನಾವೇ ಚೇರ್ ಮ್ಯಾಕೆ ಕೂರಿಸಿದ್ವಿ. ಸೊಂಟದ ಮೂಳೆ ಹೋಯ್ತು ಕಲಾ ಅಂದ ತಂಬೂರಿ.
ಈಗ ಗಬ್ಬುನಾಥ ಗೌಡಪ್ಪ ಅಂತಿದ್ದಾಗೆನೇ, ತಲೆ ಮೇಲೆ ಟವಲ್, ಪಟಾಪಟಿ ಚಡ್ಯಾಗೆ ಆಹ್, ಊಹ್ ಅಂತ ಬಂದು ಸುಬ್ಬಂಗೆ ಡಿಚ್ಚಿ. ಸುಬ್ಬನ ತಲೆ ರಕ್ತ. ಅಚ್ರಲಾ ಅರಿಸಿನ. ಮತ್ತೆ ನಿಂಗಗೊಂದು ಡಿಚ್ಚಿ. ಅಚ್ರಲಾ ಅರಿಸಿನ. ಗೌಡಪ್ಪಂಗೆ ಖುಸಿಯೋ ಖುಸಿ. ಈಗ ತಂತಿ ಪಕಡು ಸೀತು ಎದೆಗೆ ತಲೆಯಿಂದ ಡಿಚ್ಚಿ ಅಂದ. ಸೀತು ಸುಮ್ನೆ ಇತ್ತು. ಗೌಡಪ್ಪ ಅಮ್ಮಾ ಅಂದ. ಮಗಾ ಸೀತು ಒಂದು ಹತ್ತು ಹಿತ್ತಾಳೆ ತಾಯ್ತ ಕಟ್ಟಿದ್ದ. ಅದಕ್ಕೆ ಡಿಚ್ಚಿ ಹೊಡೆದಿದ್ದ ಗೌಡಪ್ಪ. ಅಚ್ರಲಾ ಅರಿಸಿನ ಅಂದೆ. ಮಗನೇ ಅರಿಸಿನ ಹಚ್ಚಿದ್ರೆ ನಿನ್ನ ಹುಟ್ಟಿದ್ದೇ ಅನ್ನಕ್ಕೆ ಸಾಕ್ಸಿನೇ ಇರಲ್ಲ ಅಂದಾ.
ಈಗ ಗೌಡಪ್ಪನಿಂದ ಕುಂಗ್ ಫೂನಲ್ಲಿ ಕತ್ತಿ ಪ್ರದರ್ಸನ. ಬೆನ್ನಿಂದ ಕತ್ತಿ ತೆಗೆದ, ಕತ್ತಿ ಕೆಂಪಗೆ ಇತ್ತು. ನೋಡಿದ್ರೆ ಕತ್ತಿ ತೆಗೆಯೋಬೇಕಾದ್ರೆ ಅದು ಗೌಡಪ್ಪನ ಬೆನ್ನು ಗೀರ್ ಕಂಡು ಬಂದಿತ್ತು. ಬನೀನೆಲ್ಲಾ ರಕ್ತ. ಅದು ಇಟ್ಕಂಡು ನಾಕು ಪಲ್ಟಿ ಹೊಡೆದ. ಜನರ ಅಪೇಕ್ಸೆ ಮೇರೆಗೆ ಮತ್ತೊಂದು ಪಲ್ಟಿ ಹೊಡೆದ ಮಗಂದು ಕತ್ತಿ ಹೋಗಬಾರದು ಜಾಗಕ್ಕೆ ಹೋಗಿತ್ತು.
ಮಾರನೆ ದಿನಾ ಗೌಡಪ್ಪನ ಮನೆಗೆ ಹೋದ್ರೆ ನಿಶ್ಯಬ್ದ. ಆಪರೇಸನ್ ಆದ್ ಮ್ಯಾಕೆ ಪೇಸೆಂಟ್ ಒದ್ದಾಡೋ ಸವಂಡ್ ಬತ್ತಾ ಇತ್ತು. ಬಾಗಿಲು ತೆಗೆದ್ರೆ ಎಲ್ಲಾವೂ ಒಂದೊಂದು ಪೊಸಿಸನ್. ಗೌಡಪ್ಪ ಬಾಗಿಲಿಗೆ ಕಾಲು ಕೊಟ್ಕಂಡು ಮಲಗಿದ್ದ. ಕಿಸ್ನ ಕೈಗೆ ಕವರ್ ಕಟ್ಟಿದ್ದ. ಯಾಕಲಾ. ಲೇ ಗೌಡಪ್ಪನ ಮಗಂದು ಹೊಟ್ಟೆ ಸರಿಯಿಲ್ಲಾ ಕಲಾ ಅಂದ. ಟಿವ್ಯಾಗೆ ಮಯೂರ ಪಿಚ್ಚರ್ ಹಾಕ್ಕಂಡಿದ್ದ ಗೌಡಪ್ಪ. ಗೌಡ್ರೆ ಜಾಕಿಚಾನ್ ಅಂದೆ. ಬೇಡ ಕಲಾ ಸರಿ ಆದ್ ಮ್ಯಾಕೆ ರಾಜಣ್ಣನ ತರಾ ಆಗ್ತೀನಿ ಕಲಾ ಅಂದ.
Comments
ಉ: ಕುಂಗ್ ಫೂ
In reply to ಉ: ಕುಂಗ್ ಫೂ by prasannasp
ಉ: ಕುಂಗ್ ಫೂ
In reply to ಉ: ಕುಂಗ್ ಫೂ by komal kumar1231
ಉ: ಕುಂಗ್ ಫೂ
ಉ: ಕುಂಗ್ ಫೂ
In reply to ಉ: ಕುಂಗ್ ಫೂ by malathi shimoga
ಉ: ಕುಂಗ್ ಫೂ
In reply to ಉ: ಕುಂಗ್ ಫೂ by komal kumar1231
ಉ: ಕುಂಗ್ ಫೂ
In reply to ಉ: ಕುಂಗ್ ಫೂ by malathi shimoga
ಉ: ಕುಂಗ್ ಫೂ
ಉ: ಕುಂಗ್ ಫೂ
ಉ: ಕುಂಗ್ ಫೂ
In reply to ಉ: ಕುಂಗ್ ಫೂ by kavinagaraj
ಉ: ಕುಂಗ್ ಫೂ
ಉ: ಕುಂಗ್ ಫೂ
In reply to ಉ: ಕುಂಗ್ ಫೂ by nagenagaari
ಉ: ಕುಂಗ್ ಫೂ