ಕುರುಡು ಕಾಂಚಾಣ-3

ಕುರುಡು ಕಾಂಚಾಣ-3

ಕಂಪೆನಿಗಳು ದೊಡ್ಡ ಮೊತ್ತದ ಹೂಡಿಕೆ ಅಗತ್ಯವಾದಾಗ ಹಣ ಸಾಲ ಪಡೆಯುವುದರ ಜತೆಗೆ ಶೇರು ಮಾರುಕಟ್ಟೆ ಪ್ರವೇಶ ಮಾಡುವುದಿದೆ. ಜನರಿಗೆ ಕಂಪೆನಿಯ ಶೇರು ವಿತರಿಸಿ,ಬಂಡವಾಳ ಎತ್ತುವುದು ಐಪಿಓದ ವಿಧಾನ.ಇತ್ತೀಚೆಗೆ ಸುದ್ದಿಯಲ್ಲಿರುವ ರಿಲಾಯನ್ಸ್ ಪವರ್ ಕಂಪೆನಿ ಐಪಿಓ ಮೂಲಕ ದಾಖಲೆ ಮೊತ್ತವನ್ನು ಜನರಿಂದ ಪಡೆಯಿತು.ಜನರು ಅಂಬಾನಿ ಹೆಸರಿನ ಮಾಂತ್ರಿಕತೆಗೆ ಬಲಿ ಬಿದ್ದು,ನಾಲ್ಕು ನೂರ ಐವತ್ತು (ಸಾರ್ವಜನಿಕರಿಗೆ ನಾಲ್ಕು ನೂರ ಮೂವತ್ತು) ಬೆಲೆ ತೆತ್ತು ಶೇರು ಪಡೆದರು.ಒಂದು ವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸದ ಕಂಪೆನಿಯ ಶೇರಿನ ಬೆಲೆ ನಾಲ್ಕು ನೂರೈವತ್ತು ಯಾಕೆ ಎಂಬ ಪ್ರಶ್ನೆಗೆ ಜನರ ಬಳಿ ಉತ್ತರವಿರಲಿಲ್ಲ. ಎನ್ ಟಿ ಪಿ ಸಿ ಎನ್ನುವ ಸಾರ್ವಜನಿಕ ಸ್ವಾಮ್ಯದ ಕಂಪೆನಿಯು ಸಾವಿರಾರು ಮೆಗಾವ್ಯಾಟ್ ವಿದ್ಯುಚ್ಛಕ್ತಿ ಉತ್ಪಾದಿಸಿ ಲಾಭದಲ್ಲಿ ನಡೆಯುತ್ತಿದ್ದರೂ,ಅದರ ಶೇರಿನ ಬೆಲೆ ಇನ್ನೂರರ ಆಸುಪಾಸೇ ಇದೆ!ಕಳೆದ ಸಂಚಿಕೆಯ ಕತ್ತೆ ಕತೆ ನೆನಪಾಯಿತೇ?

ಶೇರು ಮಾರುಕಟ್ಟೆ ಕುಸಿತ ಕಂಡಿರುವ ನಡುವೆಯೇ ರಿಲಾಯನ್ಸ್ ಪವರ್ ಶೇರು ಲಿಸ್ಟ್ ಆದ ಕಾರಣ,ಅದು ಮುಖ ಬೆಲೆ ನಾಲ್ಕುನೂರೈವತ್ತಕ್ಕಿಂತ ಕಡಿಮೆ ಬೆಲೆಗೆ ಲಭ್ಯವಾಗಿ,ಜನರು ಪೆಚ್ಚಾದದ್ದು ವಿಪರ್ಯಾಸ.ಈಗದು ಮುನ್ನೂರೈವತ್ತರ ಸಮೀಪದ ಬೆಲೆಗೆ ಲಭ್ಯ.

(ಮುಂದುವರಿಯುವುದು)

ಕುರುಡು ಕಾಂಚಾಣ-2

Rating
No votes yet