ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)
ಕೋಪವೆಂಬುವುದದು ಬರುವುದು ಸಹಜ ಮನಸಿನಲಿ
ನಾಲಿಗೆಯೂ ಕೋಪದೊಂದಿಗೆಂದೆಂದು ಸೇರದಿರಲಿ
ಬುದ್ದಿ ನಾಶವು ಕೋಪದೊಂದಿಗೆ ಸೇರೆ ನಾಲಿಗೆಯೂ
ಕೋಪವೆಂಬುದನು ನೀ ನಿಗ್ರಹಿಸಲದು ಸಾಧನೆಯೂ
ತಾಳ್ಮೆಯಿರದ ಮನ ಕೋಪವೆಂಬುದರ ವಾಸದ ಸ್ಥಾನ
ನಿನ್ನಂತೆ ನಡೆಯದಿರುವಾಗ ತಾಳ್ಮೆಯಿಂದಲಿರಲಿ ಮನ
ತಾಳ್ಮೆಯೆಂಬುವುದೆ ಕೋಪವ ನಿಗ್ರಹಿಸಲಿಹ ಸಾಧನವು
ಸಾಧಿಸಬಹುದೆಲ್ಲವನು ಕೋಪವ ನಿಗ್ರಹಿಸಲು ಮನವು
ಎಲ್ಲ ಸಾಧನೆಗೂ ಮೊದಲ ಮೆಟ್ಟಿಲಾಗಿಹುದು ಕೋಪದ ನಿಗ್ರಹವು
ಸಾಧಿಸಬೇಕಿಹುದಿದ ನೀ ಪಡೆಯಬೇಕಿರೆ ಶ್ರೀನರಸಿಂಹನ ಒಲವು
Rating
Comments
ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)
ನಿಜ ಆದರೆ ಕೋಪವನ್ನು ಪೂರ್ಣ ನಿಗ್ರಹಿಸಲು ಸಾದ್ಯವಿಲ್ಲ. ಸ್ವಲ್ಪ ಮಟ್ಟಿಗೆ ಇಟ್ಟಿರ ಬೇಕು ಬದುಕು ನಿರ್ವಹಿಸಲು !
In reply to ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79) by partha1059
ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)
>> ಕೋಪವನ್ನು ಪೂರ್ಣ ನಿಗ್ರಹಿಸಲು ಸಾದ್ಯವಿಲ್ಲ. ಸ್ವಲ್ಪ ಮಟ್ಟಿಗೆ ಇಟ್ಟಿರ ಬೇಕು ಬದುಕು ನಿರ್ವಹಿಸಲು << ಪೂರ್ಣ ನಿಗ್ರಹಿಸಬಹುದು ಅದು ಸಾಧ್ಯ ಆದರೆ ನೀವಂದಂತೆ ಅದನ್ನು ಸ್ವಲ್ಪ ಮಟ್ಟಿಗೆ ಇಟ್ಟಿರ ಬೇಕು ಅದೂ ಆ ಕ್ಷಣಕ್ಕೆ ಮತ್ತು ರಕ್ಷಣೆಗೆ ಮಾತ್ರ. ಧನ್ಯವಾದಗಳೊಂದಿಗೆ.....ಸತೀಶ್
In reply to ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79) by sathishnasa
ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)
ಸತೀಶರೆ,
ಹಿರಣ್ಯಕಶಿಪುನಂತಹವರ ಜತೆ ಉಗ್ರರೂಪದಲ್ಲೂ, ಪ್ರಹ್ಲಾದನಂತಹವರ ಜತೆ ಶಾಂತರೂಪದಲ್ಲೂ ವ್ಯವಹರಿಸಬೇಕು. ಏನಂತೀರಿ?
In reply to ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79) by ಗಣೇಶ
ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)
ಖಂಡಿತವಾಗಲು ಗಣೇಶ್ ರವರೇ, ಕೋಪದಿಂದ ಒಳ್ಳೆಯದಾಗುವಂತಿದ್ದರೆ ಅಂತಹ ಕೋಪ ಇದ್ದರೆ ಇರಲಿ ಆದರೆ ಒಮ್ಮೊಮ್ಮೆ ಕೋಪದೊಂದಿಗೆ ನಾಲಿಗೆ ಸೇರಿದರೆ ಅನಾಹುತವೇ ಜಾಸ್ತಿ ಅಲ್ಲವೇ ? ಧನ್ಯವಾದಗಳೊಂದಿಗೆ......ಸತೀಶ್
ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)
ಕೋಪ ಅನರ್ಥಸಾಧನವೆಂಬುದು ಸತ್ಯ. ಹದವರಿತ ಕೋಪ ಸಾಂದರ್ಭಿಕವಾಗಿ ಇರಬೇಕಾಗುತ್ತದೆ.
In reply to ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79) by kavinagaraj
ಉ: ಕೋಪ - ನಾಲಿಗೆ - ತಾಳ್ಮೆ (ಶ್ರೀ ನರಸಿಂಹ 79)
>>ಹದವರಿತ ಕೋಪ ಸಾಂದರ್ಭಿಕವಾಗಿ ಇರಬೇಕಾಗುತ್ತದೆ.<< ನಿಜ ನಾಗರಾಜ್ ರವರೇ, ಆದರೆ ಅದು ಹುಸಿ ಕೋಪವಾಗಿರಬೇಕು. ಧನ್ಯವಾದಗಳೊಂದಿಗೆ....ಸತೀಶ್