ಕೋಮುವಾದಿ/ವಿಚಾರವಾದಿ- ಯಾರು ಹಿತವರು ಕಷ್ಟಕಾಲದಿ?

ಕೋಮುವಾದಿ/ವಿಚಾರವಾದಿ- ಯಾರು ಹಿತವರು ಕಷ್ಟಕಾಲದಿ?

ಹೆಚ್ಚಿನ ವಿಚಾರವಾದಿಗಳು ಸುರಕ್ಷಿತ ಸ್ಥಳದಲ್ಲಿದ್ದು, ಆ ಸಂಘಟನೆ ತಪ್ಪು, ಈ ಪಕ್ಷ ಕೋಮುವಾದಿ,ಮತ್ತೊಂದು ದೇಶದ್ರ್‍ಓಹಿ ಎಂದು ಹೇಳುತ್ತಿರುತ್ತಾರೆ.ಆದರೆ ಆ ಸಂಘಟನೆ
ಹುಟ್ಟಬೇಕಾದರೆ,ಅದು ಬಲಿಷ್ಟವಾಗಿ ಬೆಳೆಯಬೇಕಾದರೆ ಒಂದು ಕಾರಣ ಮತ್ತು
ಜನಬೆಂಬಲ ಇರಲೇಬೇಕಲ್ವಾ?
ಉದಾಹರಣೆಗೆ ಮೇಲ್ವರ್ಗದ ದಬ್ಬಾಳಿಕೆ ಜಾಸ್ತಿ ಇದ್ದ ಪ್ರದೇಶದಲ್ಲಿ ಒಂದು
ದಲಿತ ಸಂಘಟನೆ ಹುಟ್ಟಿಕೊಳ್ಳುವುದು. ಇಲ್ಲವಾದರೆ ಮೇಲ್ವರ್ಗದ ಜನ ದಲಿತರನ್ನು
ಹೀನಾಯವಾಗಿ ನೋಡುವರು. ಆದರೆ ಈ ದಲಿತ ಸಂಘಟನೆಗೆ ಒಬ್ಬ ಉತ್ತಮ
ನಾಯಕನಿಲ್ಲದಿದ್ದರೆ ಸಣ್ಣಸಣ್ಣ ವಿಷಯಗಳೂ ಭೂತಾಕಾರವಾಗಿ ಬೆಳೆದು ವ್ಯರ್ಥ
ಹೋರಾಟ,ಕಡಿದಾಟಗಳು ನಡೆಯುವುದು.
ಇದೇ ರೀತಿ ಮುಸ್ಲಿಂ ಕೋಮುವಾದಿಗಳು ಹಿಂದುಗಳ ಮೇಲೆ ದಾಳಿ
ಮಾಡುವಾಗ ಅಥವಾ ಹಿಂದು ಮತಾಂಧರು ಮುಸ್ಲಿಮರ ಮೇಲೆ ದಾಳಿ ಮಾಡಿದಾಗ
ಈ ಪೋಲೀಸರನ್ನು ನಂಬಿ ಇರಲು ಸಾಧ್ಯವೇ? ಸಿನೆಮಾದಂತೆ ಎಲ್ಲಾ ನಡೆದ ಮೇಲೆ
ಬಂದು ಯಾರ್‍ಓ ಪಾಪದವರನ್ನು ಎಳಕೊಂಡು ಹೋಗುವರು.(ತಪ್ಪು ಮಾಡಿದವನನ್ನು
ಹಿಡಿದರೆ ಆ ಪೋಲೀಸ್ ಅಧಿಕಾರಿಗೆ ನೀರಿಲ್ಲದ ಊರಿಗೆ ಮರುಕ್ಷಣವೇ ವರ್ಗವಾಗುವುದು.)
ಈ ಜಾತ್ಯಾತೀತವಾದಿಗಳು,ವಿಚಾರವಾದಿಗಳು ಆ ಸಮಯದಲ್ಲಿ ದುರ್ಬೀನು ಹಾಕಿ
ಹುಡುಕಿದರೂ ಕಾಣಸಿಗರು. ಅಂತಹ ಸಮಯದಲ್ಲಿ ಆ ಊರಿನ ಜನತೆಗೆ ರಕ್ಷಣೆ ಸಿಗುವುದು
ವಿಚಾರವಾದಿಗಳು ಯಾವ ಪಕ್ಷವನ್ನು ಕೋಮುವಾದಿ,ದೇಶದ್ರೋಹಿ ಇತ್ಯಾದಿ ಹಣೆಪಟ್ಟಿ
ಕಟ್ಟಿರುವರೋ ಅವರಿಂದ ಮಾತ್ರ. ಎಲ್ಲಾ ಶಾಂತವಾದಾಗ ಈ ವಿಚಾರವಾದಿಗಳು,
ಜಾತ್ಯಾತೀತವಾದಿಗಳು ಮೆಲ್ಲಗೆ ಹೊರಬಂದು ಟಿ.ವಿ. ಸ್ಟೇಷನ್ ಗೆ ನೇರ ನಡೆದು
ತಮ್ಮ ತೀರ್ಪು ತಿಳಿಸುವರು!
ಬೇಸರದ ಸಂಗತಿಯೆಂದರೆ- ಯಾರೋ ಮುಸ್ಲಿಂ ಒಂದು ಹೆಣ್ಣನ್ನು
ಕೆಡಿಸಿದನಂತೆ ಎಂಬ ಒಂದು ಸುಳ್ಳು ಸುದ್ದಿಯೂ ಸಾಕು, ಈ ಹಿಂದೂ ಸಂಘಟನೆಗಳ
ರಕ್ತ ಕುದಿದು ಇನ್ನಷ್ಟೂ ಅತ್ಯಾಚಾರ,ಕೊಲೆಗಳು ನಡೆಯುವುದು. ಎಲ್ಲೋ ಮಸೀದಿಯ
ಬಳಿ ಒಂದು ಹಂದಿ ಸತ್ತಿದೆ ಎಂದರೆ ಸಾಕು ಒಂದಷ್ಟು ಹಿಂದು ಹೆಣಗಳುರುಳುವುದು.
ಇದೇ ಈ ಸಂಘಗಳು ಮಾಡುವ ತಪ್ಪು. ತಪ್ಪು ಮಾಡಿದವನಿಗೆ ಶಿಕ್ಷೆಯಾಗುವ ಬದಲು
ಇನ್ನಷ್ಟು ತಪ್ಪುಗಳು ಎರಡೂ ಕಡೆಯಿಂದ ಆಗುವುದು. ಕಡೆಯಲ್ಲಿ ಶಾಂತಿ
ಪ್ರಸ್ತಾಪವಿಟ್ಟುಕೊಂಡು ಬರುವ ರಾಜಕಾರಣಿಗಳು ಇದರ ಲಾಭ ಪಡೆಯುವರು.
ವಿಚಾರವಾದಿಗಳು ಇನ್ನೂ ಪ್ರಚಂಡರು.ಆ ಸ್ಥಳಕ್ಕೂ ಭೇಟಿ ನೀಡದೆ ಇನ್ನೆಲ್ಲೋ
(ಟಿ.ವಿ.,ಪೇಪರ್,ಭಾಷಣ...)ತಮ್ಮ ಪ್ರತಿಭೆ ತೋರಿಸುತ್ತಾರೆ. ಇನ್ನು ಕೆಲವರು
ಆ ಸ್ಥಳಕ್ಕೆ ಭೇಟಿ ನೀಡಿದರೂ, ಅವರಿಗೆ ಬೇಕಾದವರನ್ನೇ ಭೇಟಿಯಾಗಿ,ಅವರಿಗೆ
ಬೇಕಾದ ಸುದ್ದಿಯನ್ನೇ ಸಂಗ್ರಹಿಸಿ,ಅದನ್ನೇ ದೊಡ್ಡದಾಗಿ ಪ್ರಚಾರ ಮಾಡುವರು.

Rating
No votes yet

Comments