ಖಾಸಗಿ ಚಾನಲ್ ಗಳಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳು.

ಖಾಸಗಿ ಚಾನಲ್ ಗಳಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳು.

ಶ್ರಾವಣ ಬಂತೆಂದರೆ ಹಬ್ಬಗಳ ಸಾಲು ಸಾಲು ಆರಂಭವಾಗುತ್ತದೆ. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾದೇಶಿಕ ವಿಶೇಷತೆ ಇರುತ್ತದೆ. ಭೀಮನ ಅಮವಾಸ್ಯೆ, ನಾಗರ ಚೌತಿ, ಪಂಚಮಿ (ಇವೆರಡೂ ಉತ್ತರ ಕರ್ನಾಟಕದಲ್ಲಿ ಬಲು ಜೋರಾಗಿ ಆಚರಿಸಲ್ಪಡುತ್ತದೆ.) ವರಮಹಾಲಕ್ಷ್ಮಿ, ನಂತರ ಭಾದ್ರಪದದಲ್ಲಿ ಸ್ವರ್ಣಗೌರಿ, ವಿನಾಯಕ ಚತುರ್ಥಿ ಹೀಗೆ ಮಕ್ಕಳಿಂದ ವೃಧ್ಧರವರೆಗೂ ಒಂದೊಂದು ರೀತಿಯ ಸಂಭ್ರಮ. ಹಬ್ಬಗಳ ಪ್ರಯುಕ್ತ ವಿಶೇಷ ರಿಯಾಯಿತಿ ಪ್ರಕಟಿಸಿ ಲಾಭ ಮಾಡಿಕೊಳ್ಳುವ ತವಕ ಬಟ್ಟೆ ಬರೆ ಅಂಗಡಿಯವರಿಗಾದರೆ, ಕೊಳ್ಳುವ ಸಂಭ್ರಮ ಗ್ರಾಹಕರಿಗೆ.

ಅದೇ ರೀತಿ ಮನೆಯಲ್ಲಿ ಅಮ್ಮ, ಅಜ್ಜಿಯಂದಿರಿಗೆ ಹೊಸ ಹೊಸ ಅಡುಗೆ ತಿಂಡಿಗಳನ್ನು ಮಾಡಿ ಬಡಿಸುವ ತವಕ. ನಮ್ಮ ಖಾಸಗಿ ಚಾನಲ್ ಗಳವರಂತೂ ಪೈಪೋಟಿಗೆ ಬಿದ್ದವರಂತೆ ಹಬ್ಬದ ದಿನಗಳಂದು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ, ವೀಕ್ಷಕರ ಗಮನವನ್ನು ಸೆಳೆಯುತ್ತವೆ. ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಬಹುತೇಕ ಕಾರ್ಯಕ್ರಮಗಳನ್ನು ಹಬ್ಬದ ದಿನದಂದು ಪ್ರಸಾರವಾದಾಗ, ಪೂಜೆ, ಅಡುಗೆ, ಅತಿಥಿಗಳ ಸತ್ಕಾರದಲ್ಲಿ ಮುಳುಗಿ ಹೋಗಿರುವ ಮಹಿಳೆಯರಿಗೆ ಈ ವಿಶೆಷ ಕಾರ್ಯಕ್ರಮಗಳನ್ನು ನೋಡಾಲಾಗುವುದೇ ಇಲ್ಲ. ಅಡುಗೆ, ಅಲಂಕಾರ, ಪೂಜಾ ವಿಧಾನ, ಬಿಡುಗಡೆಯಾದ ಸಿನಿಮಾಗಳ ವಿಶ್ಲೇಷಣೆ, ಸಂದರ್ಶನ ಇತ್ಯಾದಿಗಳನ್ನು ಹಬ್ಬದ ಹಿಂದಿನ ಶನಿವಾರ ಹಾಗೂ ಭಾನುವಾರಗಳಂದು ಪ್ರಸಾರ ಮಾಡಿದರೆ, ಗೃಹಿಣಿಯರು ತಮ್ಮ ಮೆಚ್ಚಿನ ಕಾರ್ಯಕ್ರಮಗಳನ್ನು ಗಂಡ, ಮಕ್ಕಳೊಡಗೂಡಿ ನೋಡಿದಂತೂ ಆಗುತ್ತದೆ ಹಾಗೂ ಹಬ್ಬವನ್ನು ಸಂತೋಷದಿಂದ ಆಚರಿಸಿದಂತೆ ಆಗುತ್ತದೆ. ಮತ್ತು ಹಬ್ಬದ ದಿವಸ ಕೆಲಸದಲ್ಲಿ ಮಕ್ಕಳ, ಗಂಡನ ಸಹಾಯವೂ ಸಿಗುತ್ತದೆ. ನೀವೇನಂತೀರಿ ?

Rating
No votes yet