ಗಂಧದಗುಡಿ

ಗಂಧದಗುಡಿ

ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್ಲಿ ನೋಡಿದ ಸಿನಿಮಾಗಳ ನೆನಪು ತಂದಿತು. ಗಂಧದಗುಡಿ, ನಾಗರಹಾವು, ಮಾನಸಸರೋವರ, ಸಂಪತ್ತಿಗೆ ಸವಾಲ್ - ಇವೆಲ್ಲ ದೂರದರ್ಶನದಲ್ಲಿ ಮತ್ತೆ ಮತ್ತೆ ಪ್ರಸಾರವಾಗುತ್ತಿದ್ದ ಚಿತ್ರಗಳು. ಸರಳವಾದ ಚಿತ್ರಕಥೆ, ಸರಳ ನಿರೂಪಣೆ ‍ ಎಷ್ಟು ಸಾರಿ ನೋಡಿದರೂ ಬೇಸರವಾಗದಂತಹ ಚಿತ್ರಗಳು ಇವು!

 

Rating
No votes yet

Comments

Submitted by nageshamysore Mon, 04/21/2014 - 21:49

ಪ್ರತಿ ಬಾರಿ ಭಾರತಕ್ಕೆ ಬಂದಾಗಲೂ ಒಂದಷ್ಟು ಸಿನಿಮಾ ವಿಸಿಡಿ / ಡಿವೀಡಿ ಕೊಂಡೊಯ್ಯುವ ಅಭ್ಯಾಸ - ಅದರಲ್ಲೂ ಹಳೆ ಕನ್ನಡ ಚಿತ್ರಗಳದು. ಅದರಲ್ಲಿ ಗಂಧದ ಗುಡಿಯೂ ಒಂದು. ಈಗಿನ ಬೆಳವಣಿಗೆ ನೋಡಿದರೆ ಮುಂದೆ ಎಲ್ಲವೂ ಆನ್ಲೈನ್ ನಲ್ಲೆ ಲಭ್ಯವಾಗಿ, ನಮ್ಮ ಸೀಡಿ ಕಲೆಕ್ಷನ್ ಕೂಡ ಅನವಶ್ಯಕ ಜಾಗ ಆಕ್ರಮಿಸಿಕೊಂಡ ಹಾಗೆ ಅನಿಸಿಬಿಡುತ್ತದೆಯೊ ಏನೊ!
ಅಂದ ಹಾಗೆ ಆ ದಿನಗಳಲ್ಲಿ ಸಂಪತ್ತಿಗೆ ಸವಾಲ್ ನ ಆಡಿಯೊ ಕ್ಯಾಸೆಟ್ / ಪ್ಲೇಟು ಅದೆಷ್ಟು ಜನಪ್ರಿಯವೆಂದು ವರ್ಣಿಸಲಸದಳ. ಗಲ್ಲಿ ಗಲ್ಲಿಗಳಲ್ಲಿ , ಗಣೇಶನ ಕೂರಿಸಿದ ಕಡೆ, ಕೃಷ್ಣ ಜಯಂತಿ - ಎಲ್ಲೆಡೆಯೂ ತಪ್ಪದೆ ಹಾಕುತ್ತಿದ್ದ ಸಿನಿಮಾ ಅದು. ನಮಗೆಲ್ಲ ಅದನ್ನು ಕೇಳಿಯೆ ಡೈಲಾಗುಗಳೆಲ್ಲ ಬಾಯಿಪಾಠವಾಗಿ ಹೋಗಿತ್ತು ("ಸಾಹುಕಾರ್ ಸಿದ್ದಾ..." ಎಂಬ ಡೈಲಾಗ್ ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ...)