ಗಾದೆ ಮಾತುಗಳು : ೧೦ ಕೊಟ್ರೆ ೩೩ ಸಿಕ್ತು.

ಗಾದೆ ಮಾತುಗಳು : ೧೦ ಕೊಟ್ರೆ ೩೩ ಸಿಕ್ತು.

೦೧. ಕಂತೆಗೆ ತಕ್ಕಂತೆ ಬೊಂತೆ
೦೨. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ
೦೩. ಕಾಸಿಗೆ ತಕ್ಕ ಕಜ್ಜಾಯ
೦೪. ಮೋಟಾಳಿಗೊಂದು ಚೋಟಾಳು
೦೫. ಅಡಿಕೆಗೆ ಹೋದ ಮಾನ ಆನೆ ಕೊಟ್ರು ಬರಲ್ವಂತೆ
೦೬. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ"
೦೭. ಬ್ಲಾಗ್ ಬರಹಗಾರನಿಗೆ ವರುಷ , ಕಾಮೆಂಟ್ ಮಾಡೋರಿಗೆ ನಿಮಿಷ
೦೮. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ
೦೯. ಕಾಮೆಂಟ್ ಮಾಡೊರಿಗೆ ಚೆಲಾಟ, flag ಮಾಡಿದಾಗ moderators ಗೆ
೧೦. ಅಳಿಯನ ಕುರುಡು ಬೆಳಗಾದ ಮೇಲೆ...
೧೧. ಬ್ಲಾಗ್ ಬಣ್ಣ ಕಾಮೆಂಟ್ ಓದಿದ ಮೇಲೆ
೧೨. ಆಸೆ ಪಟ್ಟು ಅಕ್ಕನ ಮನೆಗೆ ಹೋದರೆ ಹಾಸೋಕ್ಕೆ ಕೊಟ್ಟಿದ್ದಳಂತೆ ಹಳೇ ಕಂಬ್ಳೀನ.
೧೩. ಅಜ್ಜೀಗೆ ಅರಿವೆ ಚಿಂತೆ ಮೊಮ್ಮಗಳೀಗೆ ಗೆಳೆಯನ ಚಿಂತೆ.
೧೪. ಏನೆ ಶಂಕರಿ ಓಡಾಟ ಅಂದ್ರೆ ಶ್ಯಾನುಭೋಗರ ಮನೇಲಿ ದ್ಯಾವ್ರೂಟ ಅಂದ್ಲಂತೆ
೧೫. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ
೧೬. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
೧೭. ಊಟ ತನ್ನಿಚ್ಚೆ, ನೋಟ ಪರರಿಚ್ಚೆ.
೧೮. ಹಲ್ಲಿದ್ದರೆ ಕಡಲೆ ಇಲ್ಲ. ಕಡಲೆ ಇದ್ದರೆ ಹಲ್ಲಿಲ್ಲ
೧೯. ದೇವರು ವರ ಕೊಟ್ರೆ ಪೂಜಾರಿ ವರ ಕೊಡೊದಿಲ್ಲ.
೨೦. ದೇವರೇ ಹಗ್ಗ ತಿಂತಾ ಇದ್ದನಂತೆ ಪೂಜಾರಿ ಬಯಸಿದನಂತೆ ಶ್ಯಾವಿಗೇನ.
೨೧. ನವಿಲು ಜಾಗರವಾಡೋದನ್ನ ನೋಡಿ ಕೆಂಭೂತ ಪುಕ್ಕ ಕೆದರಿಕೊಂಡಿತಂತೆ.
೨೨. ಮೆದೆಗೆ ಬೆಂಕಿ ಹಾಕಿ ಅರಳು ಆರಿಸಿಕೊಂಡರಂತೆ.
೨೩. ಹೇಳ್ತಾ ಹೇಳ್ತಾ ಮಗಳು ಹೆಣ್ಣನ್ನೇ ಹಡೆದಳಂತೆ.
೨೪. ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಅತ್ತರಂತೆ.
೨೫. ಕರೆವಾಗ ಹಾಲು ಕೊಡದವರು ಹೆಪ್ಪಿಟ್ಟು ಮೊಸರು ಕೊಟ್ಟಾರೆಯೇ?
೨೬. ಇಬ್ಬರ ಜಗಳ ಮೂರನೆಯವನಿಗೆ ಲಾಭ
೨೭. ಎತ್ತುಯೀತು ಅಂದ್ರೆ ಕೊಟ್ಟಿಗೆಗೆಕಟ್ಟು ಅಂದ್ರಂತೆ
೨೮. ಬೆರಳು ತೋರಿಸಿದ್ರೆ ಹಸ್ತಾನೇ ನುಂಗಿದ್ರಂತೆ
೨೯. ಆಪತ್ಕಾಲದಲ್ಲಿ ಆದವನೇ ನೆಂಟ
೩೦. ಕಲಿಯೋ ತನಕ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ.....
೩೧. ವೇದ ಸುಳ್ಳಾದರು ಗಾದೆ ಸುಳ್ಳಾಗದು
೩೨. ಅಮ್ಮಂನಂತೆ ಮಗಳು ನೂಲಿನಂತೆ ಸೀರೆ
೩೩. ಬಡವರ ಮನೆ ಊಟ ಚಂದ ಬಲ್ಲಿದರ ಮನೆ ನೋಟ ಚಂದ

(ಸಂಪದಿಗರ ಕೊಡುಗೆ)

Rating
No votes yet