ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

ಗಾರ್ಡನ್ ಸಿಟಿನಾ.... ? ಮೆಟ್ರೋ ಸಿಟಿನಾ......??

ನಮಸ್ಕಾರ ಸ್ನೇಹಿತರೇ,

ನಮ್ಮ ಬೆಂಗಳೂರನ್ನ ಉದ್ಯಾನ ನಗರ ಅಂತ ಕರಿತಾರೆ, ಹೈಟಕ್ ಸಿಟಿ, ಸಿಲಿಕಾನ್ ಸಿಟಿ ಹೀಗೆಲ್ಲಾ ಕರಿತಾರೆ ಇತ್ತೀಚೆಗೆ ಮೆಟ್ರೊ ಸಿಟಿ ಅಂತ ಸಹ ಕರಿತಾ ಇದ್ದಾರೆ. ಅದರ ಬಗ್ಗೆ ನಿಮಗೆಲ್ಲಾ ಗೊತ್ತಿದೆ ಬಿಡಿ ಆದ್ದರಿಂದ  ನೇರವಾಗಿ ವಿಷಯಕ್ಕೆ ಬರ್ತೀನಿ. ಬೆಂಗಳೂರು ನಗರವನ್ನ ಉದ್ಯಾನ ನಗರ ಅಂತ ಕರೀತಾ ಇರುವುದಕ್ಕೆ ಕಾರಣ ಬೆಂಗಳೂರು ನಗರ ಹಚ್ಚ ಹಸರಾಗಿತ್ತು ಅದರಿಂದ ಈ ಹೆಸರು ಬಂತು ಆದ್ರೆ ಕಾಲ ಕ್ರಮೇಣ ರಸ್ತೆ ಅಗಲೀಕರಣ, ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾರಣಗಳಿಂದ ಮರ ಗಿಡಗಳನ್ನೆಲ್ಲಾ ಕಡಿದಾಕ್ತಾ ಬಂದ್ರು, ಕಡೆಗೆ ಉಳಿದದ್ದು ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ಆದ್ರೆ ಇದಕ್ಕೂ ಸಹ ಕೊಡಲಿ ಏಟು ಬಿದ್ದಿದೆ. ಈಗಾದ್ರೆ ಮುಂದಿನ ದಿನಗಳಲ್ಲಿ ಮರ ಗಿಡಗಳು ಕಾಣದಾಗ್ತಾವೆ. ಇವೆಲ್ಲಾವನ್ನು ನೋಡಿದಾಗ ಲಾಲ್ ಬಾಗಿನ ಪಾರಂಪರಿಕ ಮಹತ್ವವೊಂದಿರುವ ಮರಗಳನ್ನೆಲ್ಲಾ ಹಗಲು ದರೋಡೆ ಮಾಡುತ್ತಿದ್ದಾರೆ ಅನಿಸುವುದಿಲ್ಲವೇ.?

 

 

 

 

ಏಪ್ರಿಲ್ 13,14 ನೇ ತಾರೀಖಿನಂದು ಮೆಟ್ರೊ ನಿಲ್ದಾಣಕ್ಕೊಸ್ಕರ ಲಾಲ್ ಬಾಗ್ ನ 500 ಅಡಿಯಷ್ಟು ಗೋಡೆಯನ್ನು ಕೆಡವಿ, 5  ಮರಗಳನ್ನು  ನೆಲಕ್ಕೆ ಉರುಳಿಸಿದ್ದಾರೆ, ಇದೂ ಅಲ್ಲದೆ ಮೆಟ್ರೊ ನಿಲ್ದಾಣಕ್ಕೆ ಅಂತ ಲಾಲ್ ಬಾಗ್ ನಲ್ಲಿ 1135.8 ಚದರ ಮೀಟರ್ ನಷ್ಟು ಜಾಗವನ್ನು ಆಕ್ರಮಣ ಮಾಡಿಕೊಂಡಿದ್ದಾರ. ಇಲ್ಲಿ ಇನ್ನಷ್ಟು ಜಾಗವನ್ನು ಮುಂದಿನ ದಿನಗಳಲ್ಲಿ ನಿಲ್ದಾಣಕ್ಕೆ ಮತ್ತು ಮಹಡಿಗಳ ನಿರ್ಮಾಣಕ್ಕೆ ಅಂತ ಆಕ್ರಮಣ ಮಾಡಲಿದ್ದಾರೆ.

 

 

 

 

 

 

 

ನಂದ ರೋಡ್ ನಲ್ಲಿ  ಮೆಟ್ರೊ ಕಾಮಗಾರಿಯನ್ನು ಮಾಡಲು ಅನುಮತಿಯನ್ನು ಪಡೆಯುವಾಗ ರಸ್ತೆ ಪಕ್ಕ ಇರುವ ಕೆಲವು ಮರಗಳ ಕೊಂಬೆಗಳನ್ನು ಮಾತ್ರ ಕಡೆಯುವುದಾಗಿ ಹೇಳಿದ್ದಾರೆ. ಆದ್ರೆ RTI (ಮಾಹಿತಿ ಹಕ್ಕು) ಕಾಯಿದೆಯಿಂದ ಮಾಹಿತಿ ಸಂಗ್ರಹಿಸಿದಾಗ ಮುಂದಿನ ದಿನಗಳಲ್ಲಿ 323 ಮರಗಳನ್ನು ಕಡಿಯುತ್ತಾರೆ ಮತ್ತು 42 ಮರಗಳ ಕೊಂಬೆಗಳನ್ನು ಕಡಿಯುವ ಯೋಜನೆಯನ್ನು ಮಾಡಿದ್ದಾರೆ.

ಹೀಗೆ ಮಾಡುವುದರಿಂದ ಪಾರ್ಕಿನ ಜಾಗ ಮತ್ತು ಸಾಲು ಮರಗಳು ನಾಶವಾಗುತ್ತವೆ. BMRCL ಪ್ರಕಾರ ಇಂದಿರಾಗಾಂಧಿ ಮ್ಯೂಸಿಕಲ್  ಪೌಂಟನ್ ಮತ್ತು ಕಬ್ಬನ್ ಪಾರ್ಕಿನ ಜಮೀನನ್ನು ಸಹ ಪಡೆಯಲು ಯೋಜನೆಯನ್ನು ರೂಪಿಸಿದ್ದಾರೆ. ಈ ಯೋಜನೆಯ ಪ್ರಕಾರ ಇಲ್ಲೀಯೂ ಸಹ ನೂರಾರು ಮರಗಳ ಬುಡಕ್ಕೆ ಕೊಡಲಿ ಏಟು ಬೀಳಲಿದೆ. ಈ ರೀತಿಯಾಗಿ ಮಾಡುವುದರಿಂದ ಬೆಂಗಳೂರು ನಗರದ ಸೌಂದರ್ಯವನ್ನು ಕಳೆದುಕೊಳ್ಳುತ್ತೇವೆ.

 

ಇದಕ್ಕೆಲ್ಲಾ ವಿರೋಧವನ್ನು ವ್ಯಕ್ತಪಡಿಸಿ ಕೆಲವು ಸ್ವಯಂ ಸೇವಾಸಂಸ್ಥೆಗಳು, ಸಾರ್ವಜನಿಕರು ಲಾಲ್ ಬಾಗ್ ಬಳಿ ಮಾನವ ಸರಪಳಿಯನ್ನು  ಏಪ್ರಿಲ್ 15ಕ್ಕೆ ಹಮ್ಮಿಕೊಂಡಿದ್ದರು ಸುಮಾರು 300ಕ್ಕೂ ಹೆಚ್ಚು ಜನರು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದ್ದರು. ಮತ್ತೆ ಲಾಲ್ ಬಾಗ್ ಬಳಿ ಏಪ್ರಿಲ್ 17 ನೇ ತಾರೀಖಿನಂದು ಸಂಜೆ 6 ಗಂಟೆಗೆ ಸಹ ಹಮ್ಮಿಕೊಂಡಿದ್ದಾರೆ ನೀವು ಸಹ ಭಾಗವಹಿಸಿ ಹಸಿರನ್ನು ಉಳಿಸಿ.

 

ಇದನ್ನೇಲ್ಲಾ ನೋಡಿದ್ರೆ ನಿಮಗೆ ಏನನಿಸತ್ತೆ ನಮ್ಮ ಬೆಂಗಳೂರು ಉದ್ಯಾನ ನಗರನಾ(ಗಾರ್ಡನ್ ಸಿಟಿ)......? ಮೆಟ್ರೊ ನಗರನಾ......?

 

 

ಮಾನವ ಸರಪಳಿಯ ಬಗ್ಗೆ ಮಿಡ್ ಡೇ ವರದಿ

ದಿ ಹಿಂದು ವರದಿ 

ಟೈಂಸ್ ಆಪ್ ಇಂಡಿಯಾ ವರದಿ

 

Rating
No votes yet

Comments