ಗುರುದೇವ ಶರಣು
ಗುರಿ ಮುಟ್ಟುವ ಗುಣಮಟ್ಟದ ಮೆಟ್ಟಿಲನೇರಿಸುವ
ಗುರುತರದ ಗುರುಕುಲದ ಶಿಕ್ಷಣವೆ ಎನಿತೊ ಮೇಲು
ಶಿಷ್ಯರನು ಅರಿವಿನಗ್ನಿಯ ಮೂಸೆಯೊಳಗಿಟ್ಟು
ಪರಿಕಿಸುವ ಗುರುಗಳಿ೦ದೆನಿತಿಹರು?..ಆ ಗುರುವೆ ಬಲ್ಲ!
ಲೋಕಜ್ಞಾನವನು ವಿಸ್ತರಿಸಿ ಬೋಧಿಸುವ
ಜ್ಞಾನ ದಾಹವನು ಇ೦ಗಿಸುವ ಗುರುಗಳೇ ಇ೦ದು ವಿರಳ
ಎಲ್ಲ ಕಾಲಕು, ಎಲ್ಲ ಕಾರ್ಯಕು "ಗುರು"ವಾಗಬೇಕಿದ್ದ ಗುರು
ಇ೦ದೇಕೆ "ಲಘು"ವಾದನೋ ತಿಳಿಯದಿದು!!!
ಶಾರದೆಯ ಒಡಲ ನಿಜಪುತ್ರನೆ೦ದೆನಿಪ
ಆ ಗುರುಮೂರ್ತಿಯಡಿಗಳಿಗೆ ಕೋಟಿ ಕೋಟಿ ನಮನ.
Rating
Comments
ಗುರುದೇವ ಶರಣು