ಗೂಗಲ್ ಇಲ್ಲದ ಸಮಯ

ಗೂಗಲ್ ಇಲ್ಲದ ಸಮಯ

ಗೂಗಲ್ ಒಮ್ಮೆ ಒಂದು ವೆಬ್ಸೈಟಿನಲ್ಲಿ ಕಾಣುವ text box ಅಷ್ಟೇ ಆಗಿತ್ತು ನಮಗೆ. ಅದರಲ್ಲಿ ಟೈಪಿಸಿ ಕ್ಲಿಕ್ ಮಾಡಿದರೆ ಒಂದಷ್ಟು ಮಾಹಿತಿ ಹುಡುಕಿಕೊಡುತ್ತದೆ ಎಂಬುದು ಮನಸ್ಸಿನಲ್ಲಿರುತ್ತಿತ್ತು. ಆದರೆ ದಿನಕಳೆದಂತೆ ಗೂಗಲ್ ನಮ್ಮೆಲ್ಲರ ನಿತ್ಯ ಕಂಪ್ಯೂಟರ್ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಗೂಗಲ್ ಇಲ್ಲದೆ ಅಂತರ್ಜಾಲದ ಸ್ಥಿತಿ ಊಹಿಸಲೂ ಸಾಧ್ಯವಿರಲಾರದು. ಇಷ್ಟೆಲ್ಲ ಪ್ರಾಮುಖ್ಯತೆ ಇರುವ ಗೂಗಲ್ ಏನೆಲ್ಲ ಮಾಡಬಲ್ಲುದು, ಜೊತೆಗೆ ಸ್ವಲ್ಪ ಹೊತ್ತು ಲಭ್ಯವಿಲ್ಲದಿದ್ದರೆ ಏನೆಲ್ಲ ತೊಂದರೆಯೂ ಉಂಟಾಗಬಹುದು ಎಂಬುದರ ಬಗ್ಗೆ ಊಹಿಸುವುದೂ ಕಷ್ಟ.

ಆದರೆ ಇವತ್ತು, ಈಗ, ಸುಮಾರು ಇಪ್ಪತ್ತು ನಿಮಿಷಗಳಿಂದ ಗೂಗಲ್ ನ ಎಲ್ಲ ಸೌಲಭ್ಯಗಳು ನಿಧಾನವಾಗಿ ಲೋಡ್ ಆಗುತ್ತಿವೆ, ಕೆಲವು ಲೋಡ್ ಆಗುತ್ತಲೇ ಇಲ್ಲ.

ಗೂಗಲ್ ಇ-ಮೇಯ್ಲ್ ಬಳಸುವವರಿಗೆ ಇ-ಮೇಯ್ಲ್ ಇಲ್ಲ, ಗೂಗಲ್ ಚ್ಯಾಟ್ ಬಳಸುವವರಿಗೆ ಉಳಿದವರೊಂದಿಗೆ ಸಂಪರ್ಕ ಇಲ್ಲ, ಗೂಗಲ್ ಸರ್ಚ್ ಸೌಲಭ್ಯಕ್ಕೆ ಹೊಂದಿಕೊಂಡವರಿಗೆ ಸರ್ಚ್ ಸೌಲಭ್ಯ ಇಲ್ಲ.
ಗೂಗಲ್ ಇಲ್ಲದೆ ಹೇಗೆ ಎಂಬುದು ಈಗ ಗೊತ್ತಾಗುತ್ತದೆ, ಅಲ್ವ? :)

Rating
No votes yet

Comments