'ಗೂಗಲ್ ರೀಡರ್'ನಲ್ಲಿ 'ಸಂಪದ'
[:http://www.google.com/reader/lens/|ಗೂಗಲ್ ರೀಡರ್] ಸಾಂಪ್ರದಾಯಿಕ RSS ರೀಡರುಗಳನ್ನು ಸಡ್ಡುಹೊಡೆಯುವ ತಂತ್ರಜ್ಞಾನ. ಇನ್ನೂ ಬೀಟ (ಅಂದರೆ ಪ್ರಾಯೋಗಿಕ) ತಂತ್ರಾಂಶವಾಗಿರುವುದಾದರೂ ನಿಮಗೆ ನಿಮ್ಮ ನೆಚ್ಚಿನ ತಾಣಗಳಿಂದ ಇತ್ತೀಚಿನದ್ದನ್ನು RSS ಮೂಲಕ ಒಂದು ವಿಭಿನ್ನ ರೀತಿಯಲ್ಲಿ ಪಡೆಯುವಂತೆ ಸಾಧ್ಯಮಾಡುತ್ತದೆ. ತುಂಬಾ ಚೆನ್ನಾಗಿರುವ ಅಂಶವೆಂದರೆ ಈಗೀಗ ಅತ್ಯಂತ ಜನಪ್ರಿಯವಾಗುತ್ತಿರುವ "AJAX" ತಂತ್ರಜ್ಞಾನವನ್ನು seemlessly ಬಳಕೆ ಮಾಡಿರುವುದು.
RSS ಅಂದರೇನು?
ಇದನ್ನೋದುತ್ತಿರುವ ಪುಟದ ಬಲಕ್ಕೆ (ನಿಮ್ಮ ಎಡಕ್ಕೆ) ನೋಡಿ. "RSS" ಎಂಬ ಕೆಂಪು ಬಟನ್ ಕಾಣುತ್ತದೆ. ಅದು ನೀಡುವ ಲಿಂಕ್ ಅಥವಾ ಸಂಪರ್ಕ ನಿಮಗೆ XML ಬಳಸಿ ಚಿಕ್ಕದಾದ, ಚೊಕ್ಕವಾದ ಫಾರ್ಮ್ಯಾಟಿನಲ್ಲಿ ಈ ತಾಣದ ಕಂಟೆಂಟ್ ಒದಗಿಸುತ್ತದೆ. "ರಿಯಲ್ಲಿ ಸಿಂಪಲ್ ಸಿಂಡಿಕೇಶನ್" ಎನ್ನೋದು ಈ ಅಬ್ಬ್ರಿವೇಶನ್ನಿನ ವಿಸ್ತರಿಸಿದ ರೂಪ. ಈ RSSಅನ್ನ ಉಪಯೋಗಿಸಿಕೊಂಡು ನೀವು ಎಲ್ಲಿ ಬೇಕಾದರೂ ಸಂಪದದ ಇತ್ತೀಚಿನ ಲೇಖನಗಳನ್ನು ಹಾಕಿಕೊಂಡು ಓದಬಹುದು.
ಹೆಚ್ಚಿನ ಮಾಹಿತಿಗೆ:[:http://www.google.com/help/faq_reader.html#rss] ಓದಿ. :)